NRI News: ಭಾರತೀಯರ ವಿಚಾರದಲ್ಲಿ ಸಂಚಲನಕಾರಿ ನಿರ್ಧಾರ ತೆಗೆದುಕೊಂಡ ಸೌದಿ: ಇನ್ಮುಂದೆ ಈ ಪರೀಕ್ಷೆ ಕಡ್ಡಾಯ..!

Saudi Arabia Rules for NRIs: ಭಾರತದಲ್ಲಿ ಉದ್ಯೋಗ ವೀಸಾಗಳನ್ನು ನೀಡುವ ಮೊದಲು ವೃತ್ತಿ ಪರೀಕ್ಷೆಯನ್ನು ನಡೆಸಲು ಪ್ರಾರಂಭಿಸಲಾಗಿದೆ. ಸ್ಕಿಲ್ ವೆರಿಫಿಕೇಶನ್ ಪ್ರೋಗ್ರಾಮ್ ಟೆಸ್ಟ್ ಎಂದು ಕರೆಯಲ್ಪಡುವ ಇದು ಮೊದಲ ಹಂತದಲ್ಲಿ ಕೆಲವು ವರ್ಗಗಳ ಉದ್ಯೋಗಗಳಿಗೆ ಕಡ್ಡಾಯವಾಗಿದೆ. ಅಲ್ಲದೆ, ಸೌದಿ ಇದನ್ನು ಹಂತಹಂತವಾಗಿ ಎಲ್ಲಾ ಇತರ ಉದ್ಯೋಗಗಳಿಗೂ ವಿಸ್ತರಿಸಲು ಯೋಜನೆ ರೂಪಿಸಿದೆ.

Written by - Bhavishya Shetty | Last Updated : Jun 2, 2023, 02:24 PM IST
    • ಸೌದಿ ಅರೇಬಿಯಾ ಇತ್ತೀಚೆಗೆ ಭಾರತೀಯ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ
    • ಅರೆ-ಕುಶಲ ಮತ್ತು ಕೌಶಲ್ಯರಹಿತ ಭಾರತೀಯ ಉದ್ಯೋಗಿಗಳ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ
    • ಭಾರತದಲ್ಲಿ ಉದ್ಯೋಗ ವೀಸಾಗಳನ್ನು ನೀಡುವ ಮೊದಲು ವೃತ್ತಿ ಪರೀಕ್ಷೆಯನ್ನು ನಡೆಸಲು ಪ್ರಾರಂಭಿಸಲಾಗಿದೆ
NRI News: ಭಾರತೀಯರ ವಿಚಾರದಲ್ಲಿ ಸಂಚಲನಕಾರಿ ನಿರ್ಧಾರ ತೆಗೆದುಕೊಂಡ ಸೌದಿ: ಇನ್ಮುಂದೆ ಈ ಪರೀಕ್ಷೆ ಕಡ್ಡಾಯ..! title=
NRI

Saudi Arabia Rules for NRIs: ಅರಬ್ ದೇಶ ಸೌದಿ ಅರೇಬಿಯಾ ಇತ್ತೀಚೆಗೆ ಭಾರತೀಯ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಆ ದೇಶಕ್ಕೆ ಹೋಗುವ ಜನರಿಗೆ ವೃತ್ತಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಸೌದಿ ಅರೇಬಿಯಾ ಅರೆ-ಕುಶಲ ಮತ್ತು ಕೌಶಲ್ಯರಹಿತ ಭಾರತೀಯ ಉದ್ಯೋಗಿಗಳ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

ಇದನ್ನೂ ಓದಿ: Stock Market Update: ಸತತ ಎರಡನೇ ದಿನ ಕುಸಿದ ಷೇರು ಮಾರುಕಟ್ಟೆ, 18500 ಕ್ಕಿಂತ ಕೆಳಕ್ಕೆ ಜಾರಿದ ನಿಫ್ಟಿ ಷೇರು ಸೂಚ್ಯಂಕ

ಭಾರತದಲ್ಲಿ ಉದ್ಯೋಗ ವೀಸಾಗಳನ್ನು ನೀಡುವ ಮೊದಲು ವೃತ್ತಿ ಪರೀಕ್ಷೆಯನ್ನು ನಡೆಸಲು ಪ್ರಾರಂಭಿಸಲಾಗಿದೆ. ಸ್ಕಿಲ್ ವೆರಿಫಿಕೇಶನ್ ಪ್ರೋಗ್ರಾಮ್ ಟೆಸ್ಟ್ ಎಂದು ಕರೆಯಲ್ಪಡುವ ಇದು ಮೊದಲ ಹಂತದಲ್ಲಿ ಕೆಲವು ವರ್ಗಗಳ ಉದ್ಯೋಗಗಳಿಗೆ ಕಡ್ಡಾಯವಾಗಿದೆ. ಅಲ್ಲದೆ, ಸೌದಿ ಇದನ್ನು ಹಂತಹಂತವಾಗಿ ಎಲ್ಲಾ ಇತರ ಉದ್ಯೋಗಗಳಿಗೂ ವಿಸ್ತರಿಸಲು ಯೋಜನೆ ರೂಪಿಸಿದೆ.

2021 ರಲ್ಲಿ ಪ್ರಾರಂಭವಾದ ಸೌದಿ ಕೌಶಲ್ಯ ಪರಿಶೀಲನೆ ಕಾರ್ಯಕ್ರಮವು ವೃತ್ತಿಪರ ಮಾನವಶಕ್ತಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಅನರ್ಹ ಉದ್ಯೋಗಿಗಳನ್ನು ದೇಶದಲ್ಲಿ ಕೆಲಸ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಈಗಾಗಲೇ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಅಥವಾ ಕೆಲಸ ಮಾಡಲು ಯೋಜಿಸುತ್ತಿರುವ ವೃತ್ತಿಪರ ಕೆಲಸಗಾರರು ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಇದರ ಭಾಗವಾಗಿ, ಕೆಳಗೆ ತಿಳಿಸಲಾದ 19 ವೃತ್ತಿಪರ ಹುದ್ದೆಗಳಿಗೆ ಈ ಕೌಶಲ್ಯ ಪರೀಕ್ಷೆ ಕಡ್ಡಾಯವಾಗಿದೆ.

ಇದನ್ನೂ ಓದಿ: 30 ವರ್ಷದ ನಂತರ ಈ ರಾಶಿಯವರಿಗೆ ರಾಜಯೋಗ ! ಇನ್ನು ಇವರ ಬದುಕು ಬಂಗಾರ

1. ಬಿಲ್ಡಿಂಗ್ ಎಲೆಕ್ಟ್ರಿಷಿಯನ್, 2. ಪ್ಲಂಬರ್, 3. ಪೈಪ್ ಫಿಟ್ಟರ್, 4. ಆಟೋಮೋಟಿವ್ ಎಲೆಕ್ಟ್ರಿಷಿಯನ್, 5. ​​ವೆಲ್ಡರ್, 6. ಅಂಡರ್ ವಾಟರ್ ವೆಲ್ಡರ್, 7. ಫ್ಲೇಮ್ ಕಟರ್, 8. ಡ್ರಿಲ್ಲಿಂಗ್ ರಿಗ್ ಎಲೆಕ್ಟ್ರಿಷಿಯನ್, 9. ಎಲೆಕ್ಟ್ರಿಕಲ್ ಎಕ್ವಿಪ್ಮೆಂಟ್ ಅಸೆಂಬ್ಲರ್, 10.ಟ್ರಾನ್ಸ್‌ಫಾರ್ಮಿಕಲ್, 11. ಎಲೆಕ್ಟ್ರಿಕಲ್ ಪ್ಯಾನಲ್ ಅಸೆಂಬ್ಲರ್, 12. ಎಲೆಕ್ಟ್ರಿಕಲ್ ಎಕ್ವಿಪ್‌ಮೆಂಟ್ ಅಸೆಂಬ್ಲರ್, 13. ಎಲೆಕ್ಟ್ರಿಕಲ್ ಸಲಕರಣೆ ನಿರ್ವಹಣೆ ಕೆಲಸಗಾರ, 14. ಎಲೆಕ್ಟ್ರಿಕಲ್ ಕೇಬಲ್ ಕನೆಕ್ಟರ್, 15. ಎಲೆಕ್ಟ್ರಿಕಲ್ ಪವರ್ ಲೈನ್ಸ್ ವರ್ಕರ್, 16. ಇಲೆಕ್ಟ್ರಾನಿಕ್ ಸ್ವಿಚ್ ಅಸೆಂಬ್ಲರ್, 17. ಬೋರ್ಡ್ ಅಸೆಂಬ್ಲರ್ , 18. ವೆಂಟಿಲೇಶನ್ ಮೆಕ್ಯಾನಿಕ್, 19. ಹವಾನಿಯಂತ್ರಣ ಮೆಕ್ಯಾನಿಕ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News