NRIಗಳಿಗೆ ಗುಡ್ ನ್ಯೂಸ್: ಯುಪಿಐ ಸೇವೆಯು ಈ 10 ದೇಶಗಳಲ್ಲಿ ಶೀಘ್ರದಲ್ಲೇ ಲಭ್ಯ

UPI service: ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಪ್ರಕಾರ, UPI ಸೇವೆಯನ್ನು ಭಾರತದ ಹೊರಗೆ ವಿಸ್ತರಿಸಲು ಸಿದ್ಧವಾಗಿದೆ. ಅಂತರರಾಷ್ಟ್ರೀಯ ಮೊಬೈಲ್ ಸೇವೆಗಳನ್ನು ಹೊಂದಿರುವವರಿಗೆ ಭಾರತದ ಹೊರಗಿನ 10 ದೇಶಗಳಲ್ಲಿ ಯುಪಿಐ ಸೇವೆಯನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.

Written by - Bhavishya Shetty | Last Updated : Jan 12, 2023, 10:54 AM IST
    • ಫೋನ್‌ ಮೂಲಕ ಒಂದೇ ಕ್ಲಿಕ್‌ನಲ್ಲಿ ಪಾವತಿಗಳನ್ನು ಸಾಧ್ಯವಾಗಿಸುವ ಸೇವೆ UPI
    • ದೇಶದಲ್ಲಿ UPI ಮೂಲಕ ಪಾವತಿಗಳು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿವೆ
    • ಕೇಂದ್ರ ಸರ್ಕಾರವು UPI ಸೇವೆಯನ್ನು ಭಾರತದ ಹೊರಗೆ ವಿಸ್ತರಿಸಲು ಸಿದ್ಧವಾಗಿದೆ
NRIಗಳಿಗೆ ಗುಡ್ ನ್ಯೂಸ್: ಯುಪಿಐ ಸೇವೆಯು ಈ 10 ದೇಶಗಳಲ್ಲಿ ಶೀಘ್ರದಲ್ಲೇ ಲಭ್ಯ title=
NRI News

UPI service: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎಂಬುದು ಫೋನ್‌ ಮೂಲಕ ಒಂದೇ ಕ್ಲಿಕ್‌ನಲ್ಲಿ ಪಾವತಿಗಳನ್ನು ಸಾಧ್ಯವಾಗಿಸುವ ಸೇವೆಯಾಗಿದೆ. UPI ಸೇವೆಯು Google Pay, Phone Pay ಮತ್ತು Paytm ನಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ದೇಶದಲ್ಲಿ UPI ಮೂಲಕ ಪಾವತಿಗಳು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿವೆ.

ಇದನ್ನೂ ಓದಿ: ವಿದೇಶದಲ್ಲಿ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರದಿಂದ ಇಲ್ಲೊಂದು ದಿಟ್ಟ ನಿರ್ಧಾರ

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಪ್ರಕಾರ, UPI ಸೇವೆಯನ್ನು ಭಾರತದ ಹೊರಗೆ ವಿಸ್ತರಿಸಲು ಸಿದ್ಧವಾಗಿದೆ. ಅಂತರರಾಷ್ಟ್ರೀಯ ಮೊಬೈಲ್ ಸೇವೆಗಳನ್ನು ಹೊಂದಿರುವವರಿಗೆ ಭಾರತದ ಹೊರಗಿನ 10 ದೇಶಗಳಲ್ಲಿ ಯುಪಿಐ ಸೇವೆಯನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.

ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ಸೇವೆಯನ್ನು ಡಯಾಸ್ಪೊರಾ ಭಾರತೀಯರು ವಾಸಿಸುವ ದೇಶಗಳಲ್ಲಿ ಜಾರಿಗೆ ತರಲಿದೆ. ಸಿಂಗಾಪುರ, ಯುಎಸ್, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಮುಂತಾದ ಹತ್ತು ದೇಶಗಳಲ್ಲಿ ಭಾರತೀಯ ವಲಸಿಗರಿಗೆ ಕೇಂದ್ರವು ಯುಪಿಐ ಸೇವೆಯನ್ನು ಒದಗಿಸುತ್ತದೆ.

NRE ಅಥವಾ NRO ಬ್ಯಾಂಕ್ ಖಾತೆಗಳನ್ನು ಹೊಂದಿರುವ ಅನಿವಾಸಿಗಳು ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದರೆ ಈ ಹತ್ತು ದೇಶಗಳಿಂದ UPI ಸೇವೆಯನ್ನು ಬಳಸಬಹುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಿಳಿಸಿದೆ. ಇದನ್ನು ಜಾರಿಗೆ ತರಲು ಬ್ಯಾಂಕ್‌ಗಳಿಗೆ ಪಾವತಿ ನಿಗಮವು ಈ ವರ್ಷದ ಏಪ್ರಿಲ್ 30 ರವರೆಗೆ ಸಮಯ ನೀಡಿದೆ.

ಇದನ್ನೂ ಓದಿ:  NRI: ಅರಬ್ ರಾಷ್ಟ್ರದಲ್ಲಿ ಭಾರತೀಯ ಮಾಡಿದ ಈ ಕೆಲಸಕ್ಕೆ ಹರಿದುಬರುತ್ತಿದೆ ಶುಭಾಶಯಗಳ ಮಹಾಪೂರ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಮಿತಿಯು ರುಪೇ ಡೆಬಿಟ್ ಕಾರ್ಡ್‌ನಲ್ಲಿ ಕಡಿಮೆ ದರದ ಬಿಐಎಂ ಯುಪಿಐ ವಹಿವಾಟುಗಳಿಗಾಗಿ ರೂ 2,600 ಕೋಟಿ ಯೋಜನೆಗೆ ಅನುಮೋದನೆ ನೀಡಿದೆ. ಬ್ಯಾಂಕ್ ತಜ್ಞರ ಪ್ರಕಾರ, ಹತ್ತು ದೇಶಗಳಿಗೆ ಯುಪಿಐ ಸೇವೆಯನ್ನು ವಿಸ್ತರಿಸುವುದರಿಂದ, ವಿದೇಶದಲ್ಲಿ ಓದುತ್ತಿರುವ ಮತ್ತು ವಿದೇಶದಲ್ಲಿ ಕೆಲಸ ಮಾಡುವ ಭಾರತೀಯ ವಿದ್ಯಾರ್ಥಿಗಳು ತ್ವರಿತವಾಗಿ ಹಣದ ವಹಿವಾಟು ಮಾಡಲು ಸಾಧ್ಯವಾಗುತ್ತದೆ. ಕಳೆದ ಆರು ವರ್ಷಗಳಲ್ಲಿ, ದೇಶದಲ್ಲಿ UPI ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ 12 ಲಕ್ಷ ಕೋಟಿ ವಹಿವಾಟು ನಡೆದಿದೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News