NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ

ಪ್ರಸ್ತುತ, ಎಕ್ಸ್‌ಪ್ರೆಸ್ ಎಂಟ್ರಿ ವ್ಯವಸ್ಥೆಯು ವಯಸ್ಸು, ಶಿಕ್ಷಣ, ಕೆಲಸದ ಅನುಭವ, ಉದ್ಯೋಗಾವಕಾಶ, ಭಾಷಾ ಕೌಶಲ್ಯ (ಫ್ರೆಂಚ್ ಸೇರಿದಂತೆ) ಮುಂತಾದ ಅಂಶಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಜನರಲ್‌ ಪೂಲ್‌ನಿಂದ ಶ್ರೇಣೀಕರಿಸುತ್ತದೆ.   

Written by - Bhavishya Shetty | Last Updated : May 28, 2022, 12:49 PM IST
  • ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಚಿಂತನೆ
  • ಕೆನಡಾದ ಸರ್ಕಾರದಿಂದ ಮಹತ್ತರ ನಿರ್ಧಾರ
  • ಜನರನ್ನು ಆಕರ್ಷಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ
NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ title=
Express Entry System

ಪಾಯಿಂಟ್-ಆಧಾರಿತ ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಪ್ರಮುಖ ಬದಲಾವಣೆ ತರಲು ಕೆನಡಾ ಸರ್ಕಾರ ಯೋಜಿಸುತ್ತಿದೆ. ಕೆನಡಾದ ಸರ್ಕಾರವು ನೈಜ-ಸಮಯದ ಕಾರ್ಮಿಕ ಅವಶ್ಯಕತೆಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಆಹ್ವಾನಿಸಲು ಈ ಯೋಜನೆಯನ್ನು ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತಾವಿತ ಮಸೂದೆಯ ಪ್ರಕಾರ, ನಿರ್ದಿಷ್ಟ ಶೈಕ್ಷಣಿಕ ರುಜುವಾತುಗಳು ಮತ್ತು ಉದ್ಯಮ-ಆಧಾರಿತ ಉದ್ಯೋಗಗಳಂತಹ ಮಾನದಂಡಗಳ ಮೇಲೆ ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನ ಹೊಸ ಆವೃತ್ತಿಗೆ ಜನರನ್ನು ಆಕರ್ಷಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ. 

ಎಕ್ಸ್‌ಪ್ರೆಸ್ ಎಂಟ್ರಿ ವ್ಯವಸ್ಥೆ ಎಂದರೆ, ಕೆನಡಾದಲ್ಲಿ ನುರಿತ ಕೆಲಸಗಾರರಿಗೆ ಶಾಶ್ವತ ನಿವಾಸಕ್ಕೆ ಅನುವು ಮಾಡಿಕೊಡುವ ಒಂದು ಯೋಜನೆ. ವಯಸ್ಸು, ಶಿಕ್ಷಣ, ಕೆಲಸದ ಅನುಭವ, ಉದ್ಯೋಗಾವಕಾಶ, ಭಾಷಾ ಕೌಶಲ್ಯ (ಫ್ರೆಂಚ್ ಸೇರಿದಂತೆ) ಮುಂತಾದ ಅಂಶಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಜನರಲ್‌ ಪೂಲ್‌ನಿಂದ ಶ್ರೇಣೀಕರಿಸುತ್ತದೆ. ಬಳಿಕ ಸಮಗ್ರ ಶ್ರೇಯಾಂಕ ಸ್ಕೋರ್ (CRS) ಆಧಾರವನ್ನಿಟ್ಟುಕೊಂಡು ಕೆನಡಾದಲ್ಲಿ ಶಾಶ್ವತ ನಿವಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ. 

ಇದನ್ನು ಓದಿ: ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್

ಎಕ್ಸ್‌ಪ್ರೆಸ್ ಎಂಟ್ರಿ ಮೂಲಕ ಕೆನಡಾ ವಲಸೆ ಬರುವವರನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ: 
1. ಕೆನಡಾದ ಅನುಭವ ವರ್ಗ (ಕೆನಡಾದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವವರು)
2. ಫೆಡರಲ್ ನುರಿತ ಕೆಲಸಗಾರರು (ಅರ್ಹತೆ ಮತ್ತು ಅನುಭವ ಹೊಂದಿರುವ ನುರಿತ ಕೆಲಸಗಾರರು)
3. ಫೆಡರಲ್ ನುರಿತ ವ್ಯಾಪಾರಿಗಳು (ಕೆಲಸದ ಅನುಭವ ಹೊಂದಿರುವವರು)

ಕೆನಡಾ ತನ್ನ ಎಕ್ಸ್‌ಪ್ರೆಸ್ ಎಂಟ್ರಿ ಕಾರ್ಯಗಳನ್ನು ಜುಲೈ ಆರಂಭದಲ್ಲಿ ಪುನಾರಂಭಿಸಲಿದೆ. ಮೂರು ವಿಭಾಗಗಳಿಗೆ ಹೊಸ ಅಪ್ಲಿಕೇಶನ್‌ಗಳನ್ನು ನೀಡಲು ಚಿಂತಿಸಲಾಗಿದೆ. 

ಶಾಶ್ವತವಾಗಿ ನೆಲೆಕಾಣುವ ನಿಟ್ಟಿನಲ್ಲಿ ಭಾರತೀಯ ನಾಗರಿಕರು 'ಎಕ್ಸ್‌ಪ್ರೆಸ್ ಎಂಟ್ರಿ' ಅಡಿಯಲ್ಲಿ 50,841 ಅರ್ಜಿಗಳನ್ನು ಸಲ್ಲಿಸಿದ್ದರು. ಇದು 2020ರ ಅವಧಿಯ ಡೇಟಾವಾಗಿದೆ. 2021ರಲ್ಲಿ, ಸುಮಾರು 100,000 ಭಾರತೀಯರು ಕೆನಡಾದಲ್ಲಿ ಖಾಯಂ ನಿವಾಸಿಗಳಾದರ. ಈ ಮೂಲಕ ಕೆನಡಾ ದೇಶವು ತನ್ನ ಇತಿಹಾಸದಲ್ಲಿ ದಾಖಲೆಯ 4,05,000 ಹೊಸ ವಲಸಿಗರಿಗೆ ಆಶ್ರಯ ನೀಡಿದೆ.

ಇದನ್ನು ಓದಿ: IPLನಲ್ಲಿ ಕಳಪೆ ಪ್ರದರ್ಶನ ನೀಡಿದರೂ ದ. ಆಫ್ರಿಕಾ ಕ್ರಿಕೆಟ್‌ ಟೂರ್ನಿಗೆ ಎಂಟ್ರಿ ಪಡೆದ ಆಟಗಾರ!

ಕೆನಡಾದಲ್ಲಿ 6,22,000 ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಡಿಸೆಂಬರ್ 31, 2021ರ ಡೇಟಾ ಪ್ರಕಾರ 2,17,410 ಭಾರತೀಯರು ಸೇರಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News