ನವದೆಹಲಿ: ಮೆಲ್ಬೋರ್ನ್ನಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್ನ ಅಂತಿಮ ಓವರ್ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಪ್ರಭಾವ ಕ್ರಿಕೆಟ್ ಅಭಿಮಾನಿಗಳ ಮೇಲೆ ಮಾತ್ರವಲ್ಲದೆ, UPI ವಹಿವಾಟುಗಳ ಮೇಲೂ ಬೀರಿದೆ.
ಈ ಬಗ್ಗೆ ಮ್ಯಾಕ್ಸ್ ಲೈಫ್ನ ಮುಖ್ಯ ಹೂಡಿಕೆ ಅಧಿಕಾರಿ ಮಿಹಿರ್ ವೋರಾ ಟ್ವಿಟ್ಟರ್ನಲ್ಲಿ ಮಾಹತಿ ಹಂಚಿಕೊಂಡಿಡಿದ್ದಾರೆ. T20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಬ್ಯಾಟಿಂಗ್ ಮಾಡುವಾಗ UPI ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿರುವ ಗ್ರಾಫ್ಅನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: T20 World Cup 2022: ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡುವಾಗ ತಾಯಿ ಏನ್ ಮಾಡ್ತಾರೆ ಗೊತ್ತಾ..?
‘ವಿರಾಟ್ ಕೊಹ್ಲಿ ಭಾನುವಾರ ಭಾರತದ ಶಾಪಿಂಗ್ಅನ್ನು ನಿಲ್ಲಿಸಿದರು! ಅಂದು ಬೆಳಗ್ಗೆ 9ರಿಂದ ಸಂಜೆಯವರೆಗೆ ಯುಪಿಐ ವಹಿವಾಟುಗಳಲ್ಲಿ ಕುಸಿತ ಕಂಡಿದೆ. ಪಂದ್ಯವು ಕುತೂಹಲಕಾರಿ ಘಟ್ಟ ತಲುಪುತ್ತಿದ್ದಂತೆಯೇ ಭಾರತೀಯರು ಆನ್ಲೈನ್ ಶಾಪಿಂಗ್ ನಿಲ್ಲಿಸಿದರು. ಪಂದ್ಯದ ಮುಗಿದ ನಂತರ ಮತ್ತೆ UPI ವಹಿವಾಟು ಚೇತರಿಕೆ ಕಂಡಿತು!’ ಎಂದು ವೋರಾ ಟ್ವೀಟ್ ಮಾಡಿದ್ದಾರೆ.
#ViratKohli stopped #India shopping yesterday!!
UPI transactions from 9 a.m. yesterday till evening - as the match became interesting, online shopping stopped - and sharp rebound after the match! #HappyDiwali #indiavspak #ViratKohli𓃵 #Pakistan pic.twitter.com/5yTHLCLScM
— Mihir Vora (@theMihirV) October 24, 2022
ಟ್ವೀಟ್ನಲ್ಲಿ ಹಂಚಿಕೊಂಡಿರುವ ಗ್ರಾಫ್ ಪ್ರಕಾರ, ಭಾರತದಲ್ಲಿ ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆ ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರ ನಡುವೆ (ಭಾರತ-ಪಾಕಿಸ್ತಾನ ಟಿ-20 ಪಂದ್ಯ ಪ್ರಾರಂಭವಾದಾಗ) ಭರ್ಜರಿಯಾಗಿ ನಡೆದಿತ್ತು. ಬಳಿಕ ಟೀಂ ಇಂಡಿಯಾದ ಬ್ಯಾಟಿಂಗ್ ಪ್ರಾರಂಭವಾದ ಬಳಿಕ UPI ವಹಿವಾಟು ಕುಸಿಯಲು ಪ್ರಾರಂಭಿಸಿತು. ಯಾವಾಗ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿತೋ ಅಂದರೆ ಸಂಜೆ 5 ಗಂಟೆ ಸುಮಾರಿಗೆ ದೊಡ್ಟ ಮಟ್ಟದಲ್ಲಿ UPI ವಹಿವಾಟು ಕುಸಿತ ಕಂಡಿತು. ಪಂದ್ಯ ಮುಕ್ತಾಯದ ಬಳಿಕ ಮತ್ತೆ ಶಾಪಿಂಗ್ ಶುರುವಾಯಿತು ಅಂತಾತೋಸಿದೆ.
ಇದನ್ನೂ ಓದಿ: ಬಾಬರ್ ಅಜಂ ನಾಯಕತ್ವ ಬೆದರಿದ ಹಸುವಿನಂತಿತ್ತು: ಮೊಹಮ್ಮದ್ ಹಫೀಜ್
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. 53 ಎಸೆತಗಳಲ್ಲಿ ಕೊಹ್ಲಿ 4 ಸಿಕ್ಸರ್, 6 ಬೌಂಡರಿ ಇದ್ದ ಅಜೇಯ 82 ರನ್ ಸಿಡಿಸಿದರು. ಕೊಹ್ಲಿ ಆಟದಿಂದ ಭಾರತ ಪಾಕ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿತಲ್ಲದೇ, ಕಳೆದ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿತು.
T-20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿಯವರ ‘ಅದ್ಭುತ’ ಇನ್ನಿಂಗ್ಸ್ಗೆ ಶ್ಲಾಘಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ