ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರಣಾಂತಿಕ ಕಾಯಿಲೆ ಗೆದ್ದು ಬಂದ ಮಹಿಳೆ

ಚಿಟಗುಪ್ಪಿ ಹೆರಿಗೆ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ.  ಇಲ್ಲಿಯ ವೈದ್ಯರು ಬಡ ಜನರಿಗೆ ದೇವರಾಗಿ ತೆರೆಮರೆಯಲ್ಲಿ  ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

Written by - Ranjitha R K | Last Updated : Sep 21, 2022, 10:55 AM IST
  • ದೇವರಂತೆ ಬಂದ ಸರ್ಕಾರಿ ಆಸ್ಪತ್ರೆಯ ವೈದ್ಯರು
  • ಮಾರಣಾಂತಿಕ ಕಾಯಿಲೆಯಿಂದ ಮಹಿಳೆ ಗುಣಮುಖ
  • ಚಿಟಗುಪ್ಪಿ ಹೆರಿಗೆ ವೈದ್ಯರ ಅಪೂರ್ವ ಸೇವೆ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರಣಾಂತಿಕ ಕಾಯಿಲೆ ಗೆದ್ದು ಬಂದ ಮಹಿಳೆ  title=
Hubli government hospital

ಧಾರವಾಡ : ಸರ್ಕಾರಿ ಆಸ್ಪತ್ರೆ ಅಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು.  ಸರ್ಕಾರಿ ಸೌಲಭ್ಯಗಲಿರುವುದಿಲ್ಲ, ಸಮಯಕ್ಕೆ ಸರಿಯಾಗಿ ವೈದ್ಯರು ಸಿಗುವುದಿಲ್ಲ, ಮುಂತಾದ ಭಾವನೆಯೇ ಬಹುತೇಕರದ್ದು. ಆದರೆ ಹುಬ್ಬಳ್ಳಿಯ ಈ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಬಡ ರೋಗಿಗಳಿಗೆ ಸಂಜೀವಿನಿಯಾಗಿ ಇಲ್ಲಿಯ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 

 ಇಲ್ಲಿ ನಾವು ಹೇಳುತ್ತಿರುವುದು ಹುಬ್ಬಳ್ಳಿಯ ಚಿಟಗುಪ್ಪಿ ಹೆರಿಗೆ ಆಸ್ಪತ್ರೆಯ ಬಗ್ಗೆ. ಈ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ.  ಇಲ್ಲಿಯ ವೈದ್ಯರು ಬಡ ಜನರಿಗೆ ದೇವರಾಗಿ ತೆರೆಮರೆಯಲ್ಲಿ  ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬಡ ಹೆಣ್ಣು ಹೆಣ್ಣುಮಗಳ ಜೀವನಕ್ಕೆ ಆಶಾ ಕಿರಣವಾಗಿದ್ದಾರೆ. 

ಇದನ್ನೂ ಓದಿ : ಅವಸರವಾಗಿ ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆ

ರಶೀದಾ ಮುದಗಲ್ ಎಂಬ ಮಹಿಳೆ, ಗರ್ಭಕೋಶ ಕ್ಯಾನ್ಸರ್ ನಿಂದ  ಬಳಲುತ್ತಿದ್ದರು.  ಎಲ್ಲರಂತೆ ಓಪನ್ ಸರ್ಜರಿ ಮಾಡಿದ್ದರೆ ಇವರಿಗೆ ಇರುವ ವಯೋಸಹಜ ಕಾಯಿಲೆಯಿಂದ ಸಾಕಷ್ಟು ತೊಂದರೆ ಆಗುವ  ಸಾಧ್ಯತೆ ದಟ್ಟವಾಗಿತ್ತು. ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ ವೈದ್ಯ ಡಾ.ಶ್ರೀಧರ್ ದಂಡೆಪ್ಪನವರ, ಬೇರೆಯವರಿಂದ ಲ್ಯಾಪೋಸ್ಕೋಪಿ ಮಷಿನ್ ಪಡೆದು ಸರ್ಜರಿ ಮಾಡಿ ಗರ್ಭಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರೆತೆಗೆದಿದ್ದಾರೆ.

ಸದ್ಯ ಆಪರೇಷನ್ ನಂತರ ಪೂರ್ಣವಾಗಿ ಗುಣಮುಖರಾಗಿರುವ ರಶೀದಾ ಬೇಗಂ ಸರ್ಕಾರಿ ವೈದ್ಯರು ನೀಡಿದ  ಚಿಕೆತ್ಸೆ ಹಾಗೂ ಕಾಳಜಿಗೆ ಚಿರಋಣಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸುವಷ್ಟು ಹಣ ನನ್ನ ಬಳಿ ಇರಲಿಲ್ಲಿ ,ಆದರೆ ಇಲ್ಲಿಯ ವೈದ್ಯ ದಂಡೆಪ್ಪನವರ ನನ್ನ ಪಾಲಿನ ದೇವರು ಎನ್ನುತ್ತಾರೆ ಕಾಯಿಲೆಯಿಂದ ಗುಣಮುಖರಾದ ಮಹಿಳೆ, ರಶೀದಾ ಬೇಗಂ.

ಇದನ್ನೂ ಓದಿ : ನನ್ನಿಂದ ಲೋಪವಾಗಿರುವ ಉದಾಹರಣೆ ತೋರಿಸಿದ್ರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ ಸವಾಲು

ಈ ಆಸ್ಪತ್ರೆಯಲ್ಲಿ ಈ ಹಿಂದೆ ಕೂಡಾ ಈ ರೀತಿಯ ಅನೇಕ ಶಸ್ತ್ರ ಚಿಕಿತ್ಸೆ ಗಳನ್ನ ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಮಗೆ ಲ್ಯಾಪೋಸ್ಕೋಪಿ ಉಪಕರಣಗಳನ್ನ ಒದಗಿಸುವಂತೆ ಈಗಾಗಲೇ ದಂಡೆಪ್ಪನವರ ಸರ್ಕಾರಕ್ಕೆ ಮನವಿಯನ್ನು  ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡದೊಂದಿಗೆ 100 ಹಾಸಿಗೆಗಳ ಆಸ್ಪತ್ರೆ ಜೊತೆಗೆ ಅತ್ಯಾಧುನಿಕ ಚಿಕಿತ್ಸೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಯೊಂದು ಸರ್ಕಾರಿ ಆಸ್ಪತ್ರೆ ಕೂಡಾ ರೋಗಿಗಳಿಗೆ ಇಂಥದ್ದೇ ಸೇವೆ ನೀಡುವಂತಾಗಲಿ ಎನ್ನುವುದು ಈ ಭಾಗದ ಜನದ ಆಶಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News