ನವದೆಹಲಿ: ರಿಮಾ ದಾಸ್ ಅವರ 'ವಿಲೇಜ್ ರಾಕ್ ಸ್ಟಾರ್ಸ್ ಚಿತ್ರ ಮುಂದಿನ 2019ನೇ ಸಾಲಿನ ಆಸ್ಕರ್ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಚಿತ್ರವಾಗಿ ಪ್ರವೇಶಿಸಲಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.
ವಿಶೇಷವೆಂದರೆ ಕನ್ನಡದವರೇ ಆದ ರಾಜೇಂದ್ರ ಸಿಂಗ್ ಬಾಬು ಅವರ ನೇತೃತ್ವದ ತೀರ್ಪುಗಾರರ ತಂಡವು ಶನಿವಾರದಂದು ಪತ್ರಿಕಾಗೋಷ್ಠಿ ಮೂಲಕ ವಿಲೇಜ್ ರಾಕ್ ಸ್ಟಾರ್ಸ್ ಚಿತವನ್ನು ಘೋಷಿಸಿತು.ವಿಲೇಜ್ ರಾಕ್ ಸ್ಟಾರ್ಸ್ ಬಡತನದಲ್ಲಿ ಬೆಳೆದ ಹುಡುಗಿ ಧುನು ತನ್ನ ಬಡತನವನ್ನು ಹಿಮ್ಮೆಟ್ಟಿ ಆಕೆಯು ರಾಕ್ ಬ್ಯಾಂಡ್ ರೂಪಿಸುವ ಮತ್ತು ಗಿಟಾರ್ ನ್ನು ಹೊಂದುವ ಕಥಾ ಹಂದರವನ್ನು ಒಳಗೊಂಡಿದೆ.
ಹಲವು ಚಲನಚಿತ್ರೋತ್ಸವಗಳಲ್ಲಿ ಗಮನ ಸೆಳೆದ ಈ ಚಿತ್ರ 65 ನೇ ರಾಷ್ಟ್ರೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.ಅಲ್ಲದೆ ಇತರ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.ಇದರಲ್ಲಿ ಅತ್ಯುತ್ತಮ ಬಾಲ ಕಲಾವಿದ ಭಾನಿತಾ ದಾಸ್ಗೆ ಮತ್ತು ಇತರ ಪ್ರಶಸ್ತಿಗಳಾದ ಅತ್ಯುತ್ತಮ ಸ್ಥಳ ಧ್ವನಿ ರೆಕಾರ್ಡಿಂಗ್ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಪಡೆದುಕೊಂಡಿತು.
ಆ ಮೂಲಕ ಅಸ್ಸಾಮ ಚಿತ್ರವೊಂದು 30 ವರ್ಷಗಳ ಪ್ರಶಸ್ತಿಯ ಬರವನ್ನು ನಿಗಿಸಿತು.ಜಹು ಬರುವಾ ಅವರ ಹಾಲೋಧಿಯಾ ಚೋರಾಯ್ ಬಾಧನ್ ಖಾಯಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಮೊದಲ ಅಸ್ಸಾಂ ಚಿತ್ರವಾಗಿದೆ.ವಿಲೇಜ್ ರಾಕ್ ಸ್ಟಾರ್ಸ್ ಚಲನಚಿತ್ರವು ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮತ್ತು ಮುಂಬೈ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಪ್ರದರ್ಶನ ಕಂಡಿತ್ತು.