Body Detox: ರಕ್ತ ಶುದ್ಧೀಕರಣಕ್ಕೆ ನಿತ್ಯ ಒಂದು ಕಪ್ ಈ ಹರ್ಬಲ್ ಚಹಾ ಸೇವಿಸಿ, ಆರೋಗ್ಯಕ್ಕೆ ಹಲವು ವಿಧದಲ್ಲಿ ಲಾಭ

Body Detox: ದೇಹವನ್ನು ಆರೋಗ್ಯವಂತವಾಗಿರಿಸಲು ಶರೀರದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುವುದು ತುಂಬಾ ಮುಖ್ಯ. ಹೀಗಿರುವಾಗ ನೀವು ಕೂಡ ನಿಮ್ಮ ಡಯಟ್ ನಲ್ಲಿ ಹರ್ಬಲ್ ಚಹಾವನ್ನು ಶಾಮೀಲುಗೊಳಿಸಬಹುದು.  

Written by - Nitin Tabib | Last Updated : Aug 15, 2022, 06:57 PM IST
  • ದೇಹದ ಆರೋಗ್ಯ ಕಾಪಾಡಲು ದೇಹದಿಂದ ಕೊಳೆಯನ್ನು ಹೊರಹಾಕುವುದು ತುಂಬಾ ಮುಖ್ಯ.
  • ದೇಹದಲ್ಲಿನ ವಿಷಕಾರಿ ಪದಾರ್ಥಗಳಿಂದ ನಮ್ಮ ತ್ವಚೆ ಹೊಳಪು ಕಳೆದುಕೊಳ್ಳುತ್ತದೆ.
  • ಚರ್ಮದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ.
Body Detox: ರಕ್ತ ಶುದ್ಧೀಕರಣಕ್ಕೆ ನಿತ್ಯ ಒಂದು ಕಪ್ ಈ ಹರ್ಬಲ್ ಚಹಾ ಸೇವಿಸಿ, ಆರೋಗ್ಯಕ್ಕೆ ಹಲವು ವಿಧದಲ್ಲಿ ಲಾಭ title=
Body Detox Tea

Herbal Tea For Body Detox: ದೇಹದ ಆರೋಗ್ಯ ಕಾಪಾಡಲು ದೇಹದಿಂದ ಕೊಳೆಯನ್ನು ಹೊರಹಾಕುವುದು ತುಂಬಾ ಮುಖ್ಯ. ದೇಹದಲ್ಲಿನ ವಿಷಕಾರಿ ಪದಾರ್ಥಗಳಿಂದ ನಮ್ಮ ತ್ವಚೆ ಹೊಳಪು ಕಳೆದುಕೊಳ್ಳುತ್ತದೆ. ಚರ್ಮದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ದೇಹವನ್ನು ನಿರ್ವಿಷಗೊಳಿಸಲು ಹಲವು ಮಾರ್ಗಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ರಕ್ತದ ಕೊಳೆಯನ್ನು ತುಂಬಾ ಸುಲಭವಾಗಿ ಮತ್ತು ಶ್ರಮವಿಲ್ಲದೆ ತೆಗೆದುಹಾಕಬಹುದು. ಇದಕ್ಕಾಗಿ ನಾವು ನಮ್ಮ ಆಹಾರದಲ್ಲಿ ಕೆಲವು ಗಿಡಮೂಲಿಕೆ ಚಹಾಗಳನ್ನು ಸೇರಿಸಿಕೊಳ್ಳಬಹುದು. ಇವು ದೇಹ ಮತ್ತು ರಕ್ತ ಎರಡನ್ನೂ ನಿರ್ವಿಷಗೊಳಿಸುತ್ತವೆ. ರಕ್ತವನ್ನು ಶುದ್ಧೀಕರಿಸಲು ನಾವು ಯಾವ ಚಹಾವನ್ನು ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ರಕ್ತವನ್ನು ಶುದ್ಧೀಕರಿಸಲು ನಿತ್ಯ ಈ ಗಿಡಮೂಲಿಕೆ ಚಹಾವನ್ನು ಸೇವಿಸಬೇಕು
ತುಳಸಿ ಚಹಾ

ತುಳಸಿ ರಕ್ತವನ್ನು ಶುದ್ಧೀಕರಿಸಲು ಅತ್ಯಂತ ಸರಳವಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ನಿತ್ಯ 10 ರಿಂದ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ತುಳಸಿ ಚಹಾವನ್ನು ತಯಾರಿಸಲು, ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಇದಕ್ಕೆ 10 ರಿಂದ 12 ತುಳಸಿ ಎಲೆಗಳನ್ನು ಸೇರಿಸಿ. ನೀರು ಅರ್ಧದಷ್ಟು ಉಳಿಯುವಷ್ಟು ಅದನ್ನು ಕುದಿಸಿ, ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಈ ನೀರನ್ನು ಕುಡಿಯಿರಿ. ನೀವು ಇದನ್ನು ಬೆಳಗ್ಗೆ ಮತ್ತು ಸಾಯಂಕಾಲ ಎರಡೂ ಹೊತ್ತು ಸೇವಿಸಬಹುದು.

ನಿಂಬೆ ಚಹಾ
ನಿಂಬೆ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಖನಿಜಗಳು ದೇಹದ ರಕ್ತವನ್ನು ಶುದ್ಧೀಕರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತವೆ. ಲೆಮನ್ ಟೀ ಮಾಡಲು, ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಕೆಲವು ಚಹಾ ಎಲೆಗಳನ್ನು ಹಾಕಿ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಅದಕ್ಕೆ ಅರ್ಧ ನಿಂಬೆ ಹಿಂಡಿ. ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಹುದು.

ಇದನ್ನೂ ಓದಿ-Nasal Vaccine: ಇನ್ಮುಂದೆ ಮೂಗಿನ ಮೂಲಕ ಕೂಡ ಕೋರೋನಾ ಲಸಿಕೆಯನ್ನು ಕೊಡಬಹುದು

ದಾಲ್ಚಿನ್ನಿ ಮತ್ತು ಬೆಲ್ಲದ ಚಹಾ
ದಾಲ್ಚಿನ್ನಿ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಮತ್ತು ಬೆಲ್ಲದ ಚಹಾವನ್ನು ತಯಾರಿಸಲು, ಒಂದು ಲೋಟ ನೀರಿನಲ್ಲಿ ಸ್ವಲ್ಪ ದಾಲ್ಚಿನ್ನಿ ಒಡೆದು ಮತ್ತು ಒಂದು ಸಣ್ಣ ತುಂಡು ಬೆಲ್ಲವನ್ನು ಬೆರೆಸಿಕೊಳ್ಳಿ. ನೀರು ಅರ್ಧ ಉಳಿಯುವಷ್ಟು ಅದನ್ನು ಕುದಿಸಿ, ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.

ಇದನ್ನೂ ಓದಿ-ದೇಹದ ಪ್ರೋಟೀನ್ ಕೊರತೆ ನೀಗಿಸುತ್ತದೆ ಈ ಐದು ಬಗೆಯ ಸಸ್ಯಾಹಾರ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News