Mohammed Shami : ಮೊಹಮ್ಮದ್ ಶಮಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್ ಜಹಾನ್!

ಆದ್ರೆ ಈ ಪತಿ ಪತ್ನಿಯ ಜಗಳ ನಿನ್ನೆ ಮೊನ್ನೆಯದಲ್ಲ, ಬಹಳ ದಿನಗಳಿಂದ ನಡೆಯುತ್ತಿದೆ. ಹಸಿನ್ ಜಹಾನ್ ತಮ್ಮ ಸಿನಿಮಾ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಈ ಗಂಭೀರ ಆರೋಪ ಮಾಡಿದ್ದಾರೆ.

Written by - Channabasava A Kashinakunti | Last Updated : Aug 14, 2022, 07:36 PM IST
  • ಹಸೀನ್ ಜಹಾನ್ ಮತ್ತೆ ಗಂಭೀರ ಆರೋಪ
  • ಮಗಳಿಗೆ 100 ರೂ. ಡ್ರೆಸ್ ಉಡುಗೊರೆ
  • ಶಮಿ ಮೇಲೆ ಕೇಳಿಬಂದಿತ್ತು ಅತ್ಯಾಚಾರದ ಆರೋಪ
Mohammed Shami : ಮೊಹಮ್ಮದ್ ಶಮಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್ ಜಹಾನ್! title=

Hasin Jahan On Mohammed Shami : ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿಯೂ ಮೊಹಮ್ಮದ್ ಶಮಿ ವಿರುದ್ಧ ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದು, ಮೊಹಮ್ಮದ್ ಶಮಿ ಮಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದ್ರೆ ಈ ಪತಿ ಪತ್ನಿಯ ಜಗಳ ನಿನ್ನೆ ಮೊನ್ನೆಯದಲ್ಲ, ಬಹಳ ದಿನಗಳಿಂದ ನಡೆಯುತ್ತಿದೆ. ಹಸಿನ್ ಜಹಾನ್ ತಮ್ಮ ಸಿನಿಮಾ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಈ ಗಂಭೀರ ಆರೋಪ ಮಾಡಿದ್ದಾರೆ.

ಹಸೀನ್ ಜಹಾನ್ ಮತ್ತೆ ಗಂಭೀರ ಆರೋಪ

ಮೊಹಮ್ಮದ್ ಶಮಿ ಜೊತೆಗಿನ ವಿವಾದದಿಂದಾಗಿ ಹಸಿನ್ ಜಹಾನ್ ತನ್ನ ಮಗಳೊಂದಿಗೆ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹಸಿನ್ ಜಹಾನ್ ವೃತ್ತಿಯಲ್ಲಿ ನಟಿ, ಪ್ರಸ್ತುತ ಅವರು ತಮ್ಮ ಬಂಗಾಳಿ ಭಾಷೆಯ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶಮಿಗೆ ಮಗಳನ್ನು ಭೇಟಿಯಾಗಲು ಆಸಕ್ತಿ ಇಲ್ಲ. ಅಷ್ಟೇ ಅಲ್ಲ ಮಗಳ ಜೊತೆ ಎಲ್ಲರೂ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Rishabh Pant : ಊರ್ವಶಿ ಜೊತೆಗಿನ ವಿವಾದದ ನಡುವೆ ಈ ಪೋಸ್ಟ್ ಹಂಚಿಕೊಂಡ ರಿಷಬ್ ಪಂತ್!

ಮಗಳಿಗೆ 100 ರೂ. ಡ್ರೆಸ್  ಉಡುಗೊರೆ

ಸಂದರ್ಶನದ ವೇಳ ಮಾತನಾಡಿದ ಹಸಿನ್ ಜಹಾನ್, 'ಶಮಿ ಜೊತೆ ಮಾತನಾಡಲು ನಾನು ಸಾಕಷ್ಟು ಪ್ರಯತ್ನಿಸಿದೆ, ಮಗಳು ದೊಡ್ಡವಳಾಗುತ್ತಿದ್ದಾಳೆ, ಆಕೆಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಎಲ್ಲೆಲ್ಲಿ ನೋಡಿದರೂ ಎಲ್ಲರ ತಂದೆಯೂ ಜೊತೆಗಿದ್ದಾರೆ. ಇಷ್ಟು ವರ್ಷವಾದರೂ ಶಮಿ ಮಗಳಿಗೆ ಯಾವುದೇ ಗಿಫ್ಟ್ ಕೂಡ ಕಳುಹಿಸಿಲ್ಲ ಎಂದು ನನ್ನ ಮಗಳು ಹುಟ್ಟುಹಬ್ಬದಂದು ನನ್ನನ್ನು ಪ್ರಶ್ನಿಸುತ್ತಿದ್ದಳು, ಹಾಗಾಗಿ ನಾನು ಶಮಿಯೊಂದಿಗೆ ಮಾತನಾಡಲು ಹೇಳಿದೆ, ಉಡುಗೊರೆ ಕಳುಹಿಸಲು ಹೇಳಿದೆ. ಶಮಿ ಆಗ ಬರಿ 100 ರೂ.ಡ್ರೆಸ್ ಅನ್ನು ಕಳುಹಿಸಿದ್ದಾರೆ. ಅಲ್ಲದೆ, ಅದು ಅವಳಿಗೆ ತುಂಬಾ ಚಿಕ್ಕದಾಗಿತ್ತು. ಕೋಟಿಗಟ್ಟಲೆ ದುಡಿಯುವವನು ತನ್ನ ಮಗಳಿಗೆ ಇಷ್ಟೊಂದು ಕಡಿಮೆ ಬೆಳೆಯ ಬಟ್ಟೆ ಕಳುಹಿಸಿದ್ದು ನನಗೆ ಆಶ್ಚರ್ಯ ತಂದಿದೆ’ ಎಂದು ಹೇಳಿದರು.

ಶಮಿ ಮೇಲೆ ಕೇಳಿಬಂದಿತ್ತು ಅತ್ಯಾಚಾರದ ಆರೋಪ

ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ 7 ಏಪ್ರಿಲ್ 2014 ರಂದು ವಿವಾಹವಾದರು. ಕೆಲವು ವರ್ಷಗಳ ನಂತರ, ಅವರು ಶಮಿ ಮೇಲೆ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. 2018 ರಲ್ಲಿ, ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಅವರು ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಶಮಿ ಹಾಗೂ ಆತನ ಸಹೋದರನ ವಿರುದ್ಧ ಹಸಿನ್ ಜಹಾನ್ ಪ್ರಕರಣ ದಾಖಲಿಸಿದ್ದರು. ಜುಲೈ 17, 2015 ರಂದು ಶಮಿ ಹೆಣ್ಣು ಮಗುವಿಗೆ ತಂದೆಯಾದರು. ಇವರಿಬ್ಬರ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿದ್ದರೂ ವಿಚ್ಛೇದನ ಇನ್ನೂ ಆಗಿಲ್ಲ.\

ಇದನ್ನೂ ಓದಿ : Ind vs Zim ವಿರುದ್ಧ ಮ್ಯಾಚ್ ನಲ್ಲಿ ಕ್ಯಾಪ್ಟನ್ ರಾಹುಲ್ ಗೆ ಅಸ್ತ್ರವಾಗಲಿದೆ ಈ 3 ಸ್ಫೋಟಕ ಆಟಗಾರರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News