ನವದೆಹಲಿ: 18ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಸ್ವರ್ಣ ಪದಕ ಗೆಲ್ಲುವು ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸುಮಾರು 88.6 ಮೀಟರ್ ದೂರದ ವರೆಗೆ ಜಾವಲಿನ್ ಎಸೆದ ನೀರಜ್ ಚೋಪ್ರಾ ಹೊಸ ರಾಷ್ಟ್ರೀಯ ದಾಖಲೆಯನ್ನು ಮಾಡಿದರು ರಮ್ಮ ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಈ ಸಾಧನೆ ಮಾಡುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಭಾರತದ ಇನ್ನೊಬ್ಬ ಆಟಗಾರ ಶಿವಪಾಲ್ ಸಿಂಗ್ ಅವರು 74.11 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎಂಟನೆ ಸ್ಥಾನವನ್ನು ಪಡೆದರು.
NEERAJ CHOPRA creates a NATIONAL RECORD WITH HIS GOLDEN THROW!
Unstoppable @Neeraj_chopra1 shatters a national record to claim a 🥇in men's Javelin Throw at the #ASIANGAMES2018. His consistent performance speaks volumes about his hard work! WAY TO GO NEERAJ 🎉🎉🌟🌟 #KheloIndia pic.twitter.com/q7GDhsSN8d
— Rajyavardhan Rathore (@Ra_THORe) August 27, 2018
ಇನ್ನೊಂದೆಡೆಗೆ ನೀನಾ ವರಕಿಲ್ ಅವರು ಲಾಂಗ್ ಜಂಪ್ ನಲ್ಲಿ 6,51 ಮೀಟರ್ ದೂರ ಜಿಗಿಯುವ ಮೂಲಕ ಎರಡನೇ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.ವಿಯಾತ್ನಾಂನ 'ಬಯಿ ತಿ ಥು ತಾವೋ' ಅವರು 6.55 ದೂರ ಜೀಗಿಯುವ ಮೂಲಕ ಚಿನ್ನದ ಪದಕವನ್ನು ಗೆದ್ದರು.