Yatharv Yash Video: ಕೆಜಿಎಫ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ತಮ್ಮ ಮಗ ಯಥರ್ವ್ ಅವರೊಂದಿಗೆ ಯಶ್ ಅವರ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಂದೆ-ಮಗ ಕ್ಯೂಟ್ ಆಗಿ ಜಗಳವಾಡುತ್ತಿರುವುದನ್ನು ಕಾಣಬಹುದು. ಪುಟಾಣಿ ಯಶ್ ಯಾವುದೋ ವಿಷಯಕ್ಕೆ ಅಸಮಾಧಾನಗೊಂಡಂತೆ ತೋರುತ್ತಿದೆ.
ಇದನ್ನೂ ಓದಿ: Vikrant Rona Making: ಕಿಚ್ಚ ಸುದೀಪ ಅಭಿನಯದ 'ವಿಕ್ರಾಂತ್ ರೋಣ' ಮೇಕಿಂಗ್ ವಿಡಿಯೋ ಹೈಲೈಟ್ಸ್
ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ್ಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ. ಜುಲೈ 15 ರಂದು, ರಾಧಿಕಾ ಅವರು ಯಶ್ ಮತ್ತು ಅವರ ಮಗ ಯಥರ್ವ್ ಅವರ ಕ್ಯೂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, "ಅಮ್ಮ ಒಳ್ಳೆಯ ಹುಡುಗಿ" ಎಂದು ಯಥರ್ವ ಹೇಳುತ್ತಾನೆ. ಅಲ್ಲದೇ ಯಶ್ ಅವರನ್ನು 'ಬ್ಯಾಡ್ ಬಾಯ್' ಎಂದು ಕರೆಯುತ್ತಾನೆ.
"ದದ್ದಾ ಈಸ್ ದಿ ಬೆಸ್ಟ್" ಎಂದು ಯಶ್ ಹೇಳಿದಾಗ, ಯಥರ್ವ 'ಇಲ್ಲ' ಎಂದು ಉತ್ತರಿಸುತ್ತಾನೆ. ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದಕ್ಕೆ "ತೀರ್ಪು ಹೊರಬಂದಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ: Vikrant Rona: ರಾ ರಾ ರಕ್ಕಮ್ಮ ಹುಕ್ ಸ್ಟೆಪ್ ಹಿಂದಿನ ಮಾಸ್ಟರ್ ಇವರೇ ನೋಡಿ..
ಜುಲೈ 6 ರಂದು, ರಾಧಿಕಾ ಪಂಡಿತ್ ತಮ್ಮ 500 ನೇ ಪೋಸ್ಟ್ಗಾಗಿ ಸುಂದರವಾದ ಕುಟುಂಬದ ಭಾವಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಫೋಟೋದಲ್ಲಿ, ಅವರು ತಮ್ಮ ಮಗ ಯಥರ್ವ ಅನ್ನು ಎತ್ತುಕೊಂಡಿರುವುದನ್ನು ಕಾಣಬಹುದು. ಆದರೆ ಯಶ್ ತಮ್ಮ ಪುತ್ರಿ ಐರಾಳನ್ನು ಎತ್ತುಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.