ಬೆಂಗಳೂರು: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳ ಜೊತೆಗೆ ‘ಅಭಿನಯ ಚಕ್ರವರ್ತಿ’ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕೆ ಕಿಚ್ಚ ಸುದೀಪ್ ನೆರವು ನೀಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್‍ನ ಇಬ್ಬರು ವಿಧ್ಯಾರ್ಥಿಗಳಿಗೆ ಕಿಚ್ಚ ಸಹಾಯಹಸ್ತ ಚಾಚಿದ್ದಾರೆ.
ಕಿಚ್ಚ ಸುದೀಪ್ ಅವರು ತರುಣ್ ಮತ್ತು ಸುದೀಪ್ ಅನ್ನೋ ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ್ದಾರೆ. ಶಾಲಾ ಶುಲ್ಕ ಕಟ್ಟಲು ಆಗದೆ ಈ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಸ್ಕೂಲ್ ಫೀಸ್ ಕಟ್ಟದ ಕಾರಣ ಶಾಲೆ ಆಡಳಿತ ಮಂಡಳಿ ಈ ಮಕ್ಕಳಿಗೆ ಅಡ್ಮೀಷನ್ ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ: ಇದು ಟ್ರೈಲರ್ ಮಾತ್ರ, ಮುಂದೆ ಇದೆ ರಿಯಲ್..! ಭಾರಿ ಸಂಚಲನ ಸೃಷ್ಟಿಸಿದ ನಟ ಕಿಚ್ಚ ಸುದೀಪ್ ಹೇಳಿಕೆ..!
ಚಾಮರಾಜನಗರದಲ್ಲಿರುವ ರಘು ಚಾರ್ಲಿ ಎಂಬುವರ ಮಕ್ಕಳಾಗಿರುವ ಸುದೀಪ್ ಮತ್ತು ತರುಣ್‍ಗೆ ಕಿಚ್ಚ ನೆರವು ನೀಡಿದ್ದಾರೆ. ರಘು ಚಾರ್ಲಿ ಸಣ್ಣ ಕಲಾವಿದರಾಗಿದ್ದು, ಸಿನಿಮಾ ಕೆಲಸವಿಲ್ಲದೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಕಷ್ಟ ಪಡುತ್ತಿದ್ದರು. ಇದನ್ನು ತಿಳಿದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯು ಇಬ್ಬರು ಮಕ್ಕಳು ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದೆ.
ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಕಿಚ್ಚ ಸುದೀಪ್ ತಂಡವು ಶಾಲೆಗೆ ಅಡ್ಮೀಷನ್ ಮಾಡಿಸಿದೆ. ‘ಕಿಚ್ಚ’ನ ಈ ನೆರವಿಗೆ ರಘು ಚಾರ್ಲಿ ಮತ್ತು ಮಕ್ಕಳು ಧನ್ಯವಾದ ಹೇಳಿದ್ದಾರೆ. ಸಾವಿರಾರು ಅಭಿಮಾನಿಗಳು ಸುದೀಪ್ ಮಾಡಿರುವ ಸಹಾಯಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
ಇದನ್ನೂ ಓದಿ: Sudeep in DKD: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್! ಈ ದಿನದಂದು ಪ್ರಸಾರವಾಗಲಿದೆ ಶೋ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ