ಬಾಲಿವುಡ್ ಸಿನಿಮಾ ಜಗತ್ತು ಸದ್ಯ ಸೊರಗಿ ಹೋಗಿದೆ, ಸೋತು ಹೋಗಿದೆ ಅನ್ನೋ ಮಾತುಗಳು ಪದೇ ಪದೆ ಕೇಳಿಬರುತ್ತಿವೆ. ಅದರಲ್ಲೂ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬಳಿಕ ಬಾಲಿವುಡ್ ಬಿಗ್ ಸ್ಟಾರ್ಗಳ ಎದೆ ನಡುಗಿ ಹೋಗಿದೆ. ಈ ಹಿಂದೆ ₹500 ಕೋಟಿ ಸುಲಭವಾಗಿ ಗಳಿಸುತ್ತಿದ್ದ ಸ್ಟಾರ್ಸ್ ಸಿನಿಮಾಗಳು ₹10 ಕೋಟಿ ಗಡಿ ದಾಟೋದಕ್ಕೂ ಪರದಾಡುತ್ತಿವೆ. ಈ ಹೊತ್ತಲ್ಲೇ ಕನ್ನಡದ ಹಿಟ್ ಸಿನಿಮಾ ಒಂದು ಹಿಂದಿಗೆ ರೀಮೇಕ್ ಆಗಲಿದೆ.
ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ 'ರಂಗಿತರಂಗ' ಸಿನಿಮಾ ರಿಲೀಸ್ ಆಗಿ 7 ವರ್ಷ ತುಂಬಿದೆ. ಈ ಹೊತ್ತಲ್ಲೇ ಸಿಹಿಸುದ್ದಿ ಒಂದು ಸಿಕ್ಕಿದ್ದು, ಕನ್ನಡ ಸಿನಿಮಾ 'ರಂಗಿತರಂಗ' ಬಾಲಿವುಡ್ಗೆ ಹಾರಲು ಸಜ್ಜಾಗಿದೆ. ಅಂದಹಾಗೆ 'ರಂಗಿತರಂಗ' 7 ವರ್ಷಗಳ ಹಿಂದೆ ಕನ್ನಡ ಸಿನಿಮಾ ರಂಗದಲ್ಲಿ ಭಾರಿ ಸಂಚಲನ ಸೃಷ್ಟಿಮಾಡಿತ್ತು. ಹೊಸ ಪ್ರಯತ್ನದಲ್ಲಿ, ತಮ್ಮ ಮೊದಲ ಸಿನಿಮಾದಲ್ಲೇ ಅನೂಪ್ ಭಂಡಾರಿ ದೊಡ್ಡ ಸಕ್ಸಸ್ ಪಡೆದಿದ್ದರು.
ಇದನ್ನೂ ಓದಿ: ಸಲಿಂಗಿ ಜೋಡಿಯ ಅದ್ಧೂರಿ ವಿವಾಹ : ಇಲ್ಲಿದೆ ಮದುವೆಯ ಫೋಟೋ ಗಳು
ಹೀಗೆ 'ರಂಗಿತರಂಗ'ಕ್ಕೆ 7 ವರ್ಷ ತುಂಬಿರುವ ಸಂದರ್ಭದಲ್ಲೇ ಬಾಲಿವುಡ್ ಅಂಗಳದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಹಿಂದಿ ಭಾಷೆಗೆ ಕನ್ನಡ ಸಿನಿಮಾ ರೀಮೇಕ್ ಮಾಡುವ ಪ್ರಯತ್ನಗಳು ಬಲವಾಗಿ ಸಾಗಿವೆ. ಹಾಗೇ ಬಂಡವಾಳ ಹೂಡುವುದಕ್ಕೂ ಸಾಕಷ್ಟು ನಿರ್ಮಾಪಕರು ಮುಂದೆ ಬಂದಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದು 'ರಂಗಿತರಂಗ' ರೀಮೇಕ್ಗೆ ಜೀವ ತುಂಬಿದೆ.
'ರಂಗಿತರಂಗ' ಬಾಲಿವುಡ್ಗೆ..?
ದಕ್ಷಿಣ ಭಾರತದ ಸಿನಿಮಾ ಕಥೆಗಳಿಗೆ ಬಾಲಿವುಡ್ ಅಂಗಳದಲ್ಲಿ ಭಾರಿ ಡಿಮ್ಯಾಂಡ್ ಇದೆ. ಅದ್ರಲ್ಲೂ 'ರಂಗಿತರಂಗ' ಸಿನಿಮಾ ರೀಮೇಕ್ ರೈಟ್ಸ್ ಪಡೆದುಕೊಳ್ಳಲು ಹಲವರು ಪ್ರಯತ್ನ ಮುಂದುವರಿಸಿದ್ದಾರೆ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ ಇದೀಗ ಈ ಕುರಿತು ಮಾತುಕತೆ ಫೈನಲ್ ಸ್ಟೇಜ್ಗೆ ಬಂದಿದೆ ಎನ್ನಲಾಗುತ್ತಿದೆ. ಪ್ರೊಡ್ಯೂಸರ್ ಒಬ್ಬರು 'ರಂಗಿತರಂಗ' ರೀಮೇಕ್ ಮಾಡಲು ಇಚ್ಛಿಸಿದ್ದು, ಮುಂಬೈನ ಕಾರ್ಪೊರೇಟ್ ಸ್ಟುಡಿಯೋ ಜೊತೆಗೂ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಅಕ್ಷಯ್ ಹೀರೋ..?
'ರಂಗಿತರಂಗ' ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಎಂಬ ದೊಡ್ಡ ಸುದ್ದಿ ಸೌತ್ ಟು ನಾರ್ತ್ ಚರ್ಚೆಯಲ್ಲಿದೆ. ಬಿ-ಟೌನ್ ಸ್ಟಾರ್ ನಟ ರಂಗಿತರಂಗ ರಿಮೇಕ್ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಇನ್ನೂ ಗಮನ ಸೆಳೆಯುವ ಸಂಗತಿ ಏನೆಂದರೆ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ 'ರಂಗಿತರಂಗ'ದಲ್ಲಿ ನಟಿಸುವ ಸಾಧ್ಯತೆ ಇದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಗಾಳಿ ಸುದ್ದಿ ಕೂಡ ಬಲವಾಗಿ ಹಬ್ಬಿದೆ. ಆದರೆ ಇದಕ್ಕೂ ಮೊದಲು ಅನೂಪ್ ಭಂಡಾರಿ ತಮ್ಮ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರ ಜೊತೆ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಒಂದು ರೂ.ನಾಣ್ಯದಿಂದ ಹೀಗೆ ಮಾಡಿ: ಆರ್ಥಿಕ ಸಮಸ್ಯೆ ದೂರವಾಗುತ್ತೆ!
'ರಂಗಿತರಂಗ' ಸಿನಿಮಾದಲ್ಲಿ ಅನೂಪ್ ಸಹೋದರ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಅಭಿನಯಿಸಿದ್ದರು. ರಾಧಿಕಾ ನಾರಾಯಣ್ ಹಾಗೂ ಸಾಯಿ ಕುಮಾರ್ 'ರಂಗಿತರಂಗ'ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇನ್ನು ಈ ಸಿನಿಮಾಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದರು. ಹೀಗೆ 7 ವರ್ಷಗಳ ಹಿಂದೆ 'ರಂಗಿತರಂಗ' ರಿಲೀಸ್ ಆಗಿ ಯಾರೂ ಊಹಿಸಲು ಸಾಧ್ಯವಾಗದ ಯಶಸ್ಸು ಕಂಡಿತ್ತು. ಇದೀಗ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿ ರೀಮೇಕ್ ರೈಟ್ಸ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ. ಸದ್ಯ ಅನೂಪ್ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ಘರ್ಜಿಸಲು ಕೌಂಟ್ಡೌನ್ ಶುರುವಾಗಿದೆ. ಈ ಹೊತ್ತಲ್ಲೇ 'ರಂಗಿತರಂಗ' ಕೂಡ ಸದ್ದು ಮಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.