ಅಡುಗೆ ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳು ಮಲಬದ್ದತೆಯಿಂದ ನೀಡುತ್ತದೆ ಪರಿಹಾರ

 ದೇಹದಲ್ಲಿ ಸಂಗ್ರಹವಾಗಿರುವ ಈ ಕೊಳೆಯನ್ನು ಹೊರತೆಗೆಯಲು, ಕೆಲವು ಆಹಾರ ವಸ್ತುಗಳನ್ನು ಬಳಸಿ,  ತಕ್ಷಣವೇ ಅದನ್ನು ದೇಹದಿಂದ ಹೊರಹಾಕಬೇಕು. 
 

 ಬೆಂಗಳೂರು : ಕೆಟ್ಟ ಜೀವನಶೈಲಿಯೊಂದಿಗೆ, ಕೆಟ್ಟ ಆಹಾರ ಪದ್ಧತಿಗಳು  ದೇಹವನ್ನು ರೋಗಗಳ ಮನೆಯಾಗಿ ಮಾಡಿ ಬಿಡುತ್ತವೆ. ನೀವು ಸೇವಿಸುವ  ಆಹಾರವೇ ನಿಮಗೆ ಅನಾರೋಗ್ಯವನ್ನುಂಟುಮಾಡುತ್ತದೆ. ಏಕೆಂದರೆ ಕರಿದ ಆಹಾರಗಳು, ಸಕ್ಕರೆ ಸೇರಿಸಿದ ಮತ್ತು ಕೊಬ್ಬಿನ ಆಹಾರಗಳು ನಿಮ್ಮ ದೇಹದಲ್ಲಿನ ಕೊಳೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಈ ಕೊಳೆಯು ಕರುಳಿನಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ವಿವಿಧ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ಸಂಗ್ರಹವಾಗಿರುವ ಈ ಕೊಳೆಯನ್ನು ಹೊರತೆಗೆಯಲು, ಕೆಲವು ಆಹಾರ ವಸ್ತುಗಳನ್ನು ಬಳಸಿ,  ತಕ್ಷಣವೇ ಅದನ್ನು ದೇಹದಿಂದ ಹೊರಹಾಕಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ 

1 /4

ನಿಮ್ಮ ದೇಹದಲ್ಲಿ ಕೊಳಕು ಸಂಗ್ರಹವಾಗಲು ಪ್ರಾರಂಭಿಸಿದಾಗ, ಅದನ್ನು ದೇಹದಿಂದ ಹೊರ ಹಾಕಲು  ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ದೇಹದಲ್ಲಿನ ಇಂತಹ ಸಮಸ್ಯೆಗಳಿಗೆ ಕಾರಣವೆಂದರೆ ದೇಹದಲ್ಲಿ ಕೊಳಕು ಸಂಗ್ರಹವಾಗುತ್ತದೆ. 

2 /4

ಚಕ್ಕೆ ಮತ್ತು ಜೇನುತುಪ್ಪ ಎರಡೂ ತಮ್ಮ ನಿರ್ವಿಶೀಕರಣ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಎರಡರಿಂದ ಮಾಡಿದ ಪಾನೀಯವನ್ನು ಸೇವಿಸಿದರೆ ಬೆಳಿಗ್ಗೆ ಹೊಟ್ಟೆ ಶುಚಿಗೊಳಿಸಲು ಸಾಧ್ಯವಾಗುತ್ತದೆ. ದಾಲ್ಚಿನ್ನಿ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಮ್ಮ ದೇಹದ ಕರುಳಿನಲ್ಲಿ ಅಡಗಿರುವ ಕೊಳೆಯನ್ನು ಹೊರಹಾಕುವ ಕೆಲಸ ಮಾಡುತ್ತದೆ. ಇದಲ್ಲದೆ, ಜೇನುತುಪ್ಪವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಿದರೆ, ನಿಮ್ಮ ಹೊಟ್ಟೆಯು ಬೇಗನೆ ಸ್ವಚ್ಛಗೊಳ್ಳುತ್ತದೆ. 

3 /4

ಬೆಳಿಗ್ಗೆ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ  ಖಾಲಿ ಹೊಟ್ಟೆಯಲ್ಲಿ ಪುದೀನಾ ಮತ್ತು ಸೌತೆಕಾಯಿಯಿಂದ ಮಾಡಿದ ಪಾನೀಯವನ್ನು ಸೇವಿಸಬೇಕು. ಇದುಕರುಳಿನ ಚಲನೆಯನ್ನು ಸರಳಗೊಳಿಸುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುತ್ತದೆ.  ಪುದೀನ ಎಲೆಗಳು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ  ಮಾಡುತ್ತದೆ.

4 /4

ಬೆಳಗ್ಗೆ ಮಲವಿಸರ್ಜನೆ ಮಾಡಲು ಸಾಧ್ಯವಾಗದವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮೊಸರಿನಲ್ಲಿ ಇಸಬ್ಗೋಲ್ ಬೆರೆಸಿ ಸೇವಿಸಬೇಕು. ಈ ವಿಧಾನವು ನಿಮ್ಮ ಹೊಟ್ಟೆಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮುಕ್ತವಾಗಿ ಮಲವಿಸರ್ಜನೆ ಮಾಡಲು ಸಹ ಸಹಾಯ ಮಾಡುತ್ತದೆ. ಮೊಸರು ಪ್ರೋಬಯಾಟಿಕ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.