ನವದೆಹಲಿ: ದೇಶಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಈಗ ಮಳೆ ಪ್ರಾರಂಭವಾಗಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ದೇಶಾದ್ಯಂತ ಮುಂಗಾರು ಪ್ರವೇಶಿಸಿದೆ ಎಂದು ತಿಳಿಸಿದೆ. ಅದೇ ರೀತಿ ರಾಜಧಾನಿ ದೆಹಲಿ ಸೇರಿದಂತೆ ಛತ್ತೀಸ್ಗಢ ಮತ್ತು ಒಡಿಶಾದ ವಿವಿಧ ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಕರ್ನಾಟಕ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಮೇಘಾಲಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. IMD ಪ್ರಕಾರ ರಾಜಸ್ಥಾನ ಮತ್ತು ಗುಜರಾತ್ನಲ್ಲಿಯೂ ಮಳೆ ಪ್ರಾರಂಭವಾಗಿದೆ. ಜುಲೈ 8ಕ್ಕೆ ಆಗಮಿಸಬೇಕಾಗಿದ್ದ ಮುಂಗಾರು ಈಗಾಗಲೇ ಎಂಟ್ರಿ ಕೊಟ್ಟಿದೆ.
6 ದಿನ ಮುಂಚಿತವಾಗಿ ಮುಂಗಾರು ಪ್ರವೇಶ
IMD ಪ್ರಕಾರ ನೈಋತ್ಯ ಮುಂಗಾರು ಸಾಮಾನ್ಯ ದಿನಾಂಕಕ್ಕಿಂತ 6 ದಿನಗಳ ಮೊದಲೇ ದೇಶದಲ್ಲಿ ಪ್ರವೇಶವಾಗಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಶುಕ್ರವಾರ ಋತುವಿನ ಮೊದಲ ಮಳೆಯಾಗಿದೆ. ನೈಋತ್ಯ ಮಾನ್ಸೂನ್ ಜೂನ್ 1ರ ಸಾಮಾನ್ಯ ದಿನಾಂಕಕ್ಕಿಂತ 3 ದಿನಗಳ ಮೊದಲು ಮೇ 29ರಂದು ಕೇರಳದಲ್ಲಿ ಪ್ರಾರಂಭವಾಯಿತು. ‘ನೈರುತ್ಯ ಮುಂಗಾರು ಜುಲೈ 8ರ ಸಾಮಾನ್ಯ ದಿನಾಂಕಕ್ಕಿಂತ 6 ದಿನಗಳ ಮೊದಲು ಶನಿವಾರ ದೇಶದಾದ್ಯಂತ ಅಪ್ಪಳಿಸಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಕಣಕ್ಕೆ ಸಾಧ್ಯತೆ
ಶೇ.5ರಷ್ಟು ಮಳೆ ಕಡಿಮೆಯಾಗಿದೆ
ಪಶ್ಚಿಮ ರಾಜಸ್ಥಾನ ಮತ್ತು ಉತ್ತರ ಗುಜರಾತ್ನ ವಿವಿಧ ಭಾಗಗಳಲ್ಲಿ ಶುಕ್ರವಾರ ಮೊದಲ ಮಾನ್ಸೂನ್ ಮಳೆಯಾಗಿದೆ. ಈ ಪ್ರದೇಶಗಳಲ್ಲಿ ಇದುವರೆಗೆ ಮಳೆಯಾಗಿರಲಿಲ್ಲ. ಆದರೆ, ಶನಿವಾರ ದೇಶದಲ್ಲಿ ಶೇ.5ರಷ್ಟು ಮಳೆ ಕೊರತೆ ದಾಖಲಾಗಿದೆ. IMD ಪ್ರಕಾರ ರಾಜಸ್ಥಾನವನ್ನು ಹೊರತುಪಡಿಸಿ, ಮಾನ್ಸೂನ್ನ ಮುಖ್ಯ ವಲಯದಲ್ಲಿ ಬೀಳುವ ಎಲ್ಲಾ ರಾಜ್ಯಗಳು ಇದುವರೆಗೆ ಮುಂಗಾರು ಮಳೆ ಕೊರತೆ ಎದುರಿಸಿವೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಒಡಿಶಾ ಪ್ರಮುಖ ಮಾನ್ಸೂನ್ ಪ್ರದೇಶದಲ್ಲಿ ಬರುತ್ತವೆ, ಇವು ಮಳೆಯಾಶ್ರಿತ ಕೃಷಿ ಪ್ರದೇಶಗಳಾಗಿವೆ.
ಹರಿಯಾಣದಲ್ಲಿ ಮುಂಗಾರು ಮುನ್ನೆಚ್ಚರಿಕೆ, ಇಂದು ಮಳೆ ಸಾಧ್ಯತೆ
ದೆಹಲಿ ಮತ್ತು ಹರಿಯಾಣದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹರಿಯಾಣದಲ್ಲಿ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಇಳಿಕೆ ಕಂಡುಬರಲಿದೆ. ಜುಲೈ 3ರಂದು ಹವಾಮಾನ ಇಲಾಖೆಯು ಹರ್ಯಾಣದ 11 ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಮತ್ತು ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಈ 11 ಜಿಲ್ಲೆಗಳಲ್ಲಿ ಪಂಚಕುಲ, ಅಂಬಾಲ, ಯಮುನಾನಗರ, ಕುರುಕ್ಷೇತ್ರ, ಕರ್ನಾಲ್, ಗುರುಗ್ರಾಮ್, ಮೇವಾತ್, ಪಲ್ವಾಲ್, ಫರಿದಾಬಾದ್, ಸೋನಿಪತ್ ಮತ್ತು ಪಾಣಿಪತ್ ಸೇರಿವೆ.
ಇದನ್ನೂ ಓದಿ: "ಬಂಡಾಯ ಶಾಸಕರನ್ನು ಸೇರಲು ನಂಗೂ ಆಫರ್ ಬಂದಿತ್ತು"
ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ
ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿಯೂ ಭಾರೀ ಮಳೆ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮೊಡ ಕವಿತ ವಾತಾವರಣವಿದ್ದು, ಜೋರು ಗಾಳಿ ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ