Shanidev: ಈ ವಸ್ತುಗಳು ಕಾಣಿಸಿಕೊಂಡರೆ ಸಿಗುತ್ತೆ ಶನಿದೇವನ ಕೃಪೆ

ಶನಿ ದೇವರಿಗೆ ಸಮರ್ಪಿಸುವ ಕಾರ್ಯಗಳ ಆಧಾರದ ಮೇಲೆ ನಿಮಗೆ ಫಲ ಸಿಗುತ್ತದೆ. ಶನಿದೇವನನ್ನು ವಿನಾಶಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಶನಿ ದೇವನಿಗೆ ಇಷ್ಟವಾಗುವ ಕೆಲಸ ಮಾಡಿದರೆ ನಿಮಗೆ ಆತನ ಕೃಪೆ ಸದಾ ಇರುತ್ತದೆ.  

Written by - Puttaraj K Alur | Last Updated : Jul 3, 2022, 07:05 AM IST
  • ಕೆಲಸಕ್ಕಾಗಿ ಹೊರಹೋದಾಗ ದಾರಿಯಲ್ಲಿ ಅರಳಿ ಮರ ನೋಡಿದ್ರೆ ನಿಮಗೆ ಶುಭವಾಗಲಿದೆ
  • ದಾರಿಯಲ್ಲಿ ಕುದುರೆ ಲಾಳ ಬಿದ್ದಿರುವುದನ್ನು ಕಂಡರೆ ಅದನ್ನು ಮನೆಗೆ ತಂದು ಬಾಗಿಲಿಗೆ ನೇತುಹಾಕಬೇಕು
  • ಶನಿದೇವನ ವಾಹನ ಕಪ್ಪು ನಾಯಿಯನ್ನು ನೋಡುವುದು ಶುಭ ಫಲಿತಾಂಶ ದೊರೆಯುತ್ತದೆ
Shanidev: ಈ ವಸ್ತುಗಳು ಕಾಣಿಸಿಕೊಂಡರೆ ಸಿಗುತ್ತೆ ಶನಿದೇವನ ಕೃಪೆ  title=
ಈ ವಸ್ತುಗಳಿಂದ ಶನಿದೇವನ ಕೃಪೆ

ನವದೆಹಲಿ: ಅನುಚಿತ ಕೆಲಸ ಮಾಡುವವರು ಶನಿದೇವನ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಜಾತಕದಲ್ಲಿನ 9 ಗ್ರಹಗಳಲ್ಲಿ ಶನಿಯ ದಶಾವು ವ್ಯಕ್ತಿಯ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಶನಿದೇವನ ಕೋಪವು ಎಲ್ಲರನ್ನೂ ನಡುಗಿಸುತ್ತದೆ. ಹೀಗಾಗಿ ಶನಿಯನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ನಿಮಗೆ ಗೊತ್ತಾ ಶನಿದೇವನ ಕೃಪೆ ನಿಮ್ಮ ಮೇಲೆ ಬೀಳಲಿದ್ದರೆ, ನಿಮಗೆ ಕೆಲವು ಸೂಚನೆಗಳು ಸಿಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ನಿಮಗೆ ಯಾವ ರೀತಿ ದಯಪಾಲಿಸುತ್ತಾನೆ ಅನ್ನೋದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಯಾವ ವಸ್ತುಗಳು ನಿಮಗೆ ಕಾಣಿಸಿಕೊಂಡರೆ ಶಿನಿದೇವನ ಕೃಪೆ ದೊರೆಯುತ್ತದೆ ಎಂದು ತಿಳಿದುಕೊಳ್ಳಿರಿ.

ಅರಳಿ ಮರ

ನೀವು ಉದ್ಯೋಗ ಅಥವಾ ವ್ಯವಹಾರದಂತಹ ಸಮಸ್ಯೆ ಎದುರಿಸುತ್ತಿದ್ದರೆ ಶನಿವಾರ ಸೂರ್ಯಾಸ್ತದ ನಂತರ ಹಿಟ್ಟು, ತುಪ್ಪ, ಕೆಂಪು ಬಣ್ಣದ ಶಾಯಿ, ಕೆಂಪು ಬಟ್ಟೆ ಮತ್ತು ಕೆಂಪು ಕಲೆಯ ದೀಪದೊಂದಿಗೆ ಅರಳಿ ಮರದ ಬಳಿ ಹೋಗಿ. ಇದಾದ ನಂತರ ನೀವು ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಅರಳಿ ಮರದ ಎಲೆಯ ಮೇಲೆ ಕೆಂಪು ಶಾಯಿಯಿಂದ ನಿಮ್ಮ ಇಚ್ಛೆಯನ್ನು ಬರೆಯಿರಿ. ಅದೇ ರೀತಿ ನೀವು ಶನಿವಾರ ಯಾವುದಾದರೂ ಕೆಲಸಕ್ಕಾಗಿ ಹೊರಹೋದಾಗ ದಾರಿಯಲ್ಲಿ ಅರಳಿ ಮರ ನೋಡಿದರೆ ನಿಮ್ಮ ದಿನವು ಉತ್ತಮವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಕಸ ಗುಡಿಸುವ ವ್ಯಕ್ತಿ

ಶನಿವಾರ ಬೆಳಗ್ಗೆ ಒಬ್ಬ ವ್ಯಕ್ತಿ ಅಥವಾ ಪೊರಕೆ ಸಮೇತ ಕಸ ಗುಡಿಸುವ ವ್ಯಕ್ತಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತ ವ್ಯಕ್ತಿ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬಂದರೆ ಆತನಿಗೆ ಏನಾದರೂ ದಾನ ನೀಡಿ. ಇದರಿಂದ ನಿಮಗೆ ಉತ್ತಮ ಲಾಭವಾಗಲಿದೆ.

ಕುದುರೆ ಲಾಳ

ಶನಿವಾರ ದಾರಿಯಲ್ಲಿ ಕುದುರೆ ಲಾಳ ಬಿದ್ದಿರುವುದನ್ನು ಕಂಡರೆ ಅದನ್ನು ಮನೆಗೆ ತಂದು ಬಾಗಿಲಿಗೆ ನೇತುಹಾಕಿ. ಇದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಮನೆಗೆ ಲಕ್ಷ್ಮಿದೇವಿಯ ಆಗಮನವಾಗಲಿದೆ. ಮನೆಯ ಮುಖ್ಯ ದ್ವಾರದಲ್ಲಿ ಕಪ್ಪು ಕುದುರೆಯ ಲಾಳವನ್ನು U ಆಕಾರದಲ್ಲಿ ಕಟ್ಟುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಇದರೊಂದಿಗೆ ಋಣಾತ್ಮಕ ಶಕ್ತಿಯೂ ಮನೆಯೊಳಗೆ ಬರುವುದಿಲ್ಲ.

ಕಾಗೆ

ಶಕುನ ಶಾಸ್ತ್ರದ ಪ್ರಕಾರ ಪಾತ್ರೆಯಲ್ಲಿ ಕಾಗೆ ನೀರು ಕುಡಿಯುವುದನ್ನು ನೀವು ನೋಡಿದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಮುಂದಿನ ದಿನಗಳಲ್ಲಿ ಹಣವನ್ನು ಗಳಿಸಲಿದ್ದೀರಿ ಅಥವಾ ನೀವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ. ಶನಿವಾರದಂದು ಮನೆಯ ಹೊರಗೆ ಕಾಗೆ ನೀರು ಕುಡಿಯುವುದನ್ನು ನೋಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಮನೆಯ ಮೇಲ್ಛಾವಣಿಯ ಮೇಲೆ ಕಾಗೆ ಕುಳಿತಿರುವುದು ಕಂಡುಬಂದರೆ ಅದನ್ನು ಸಹ ಶುಭ ಸಂಕೇತವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Mercury Transit 2022: ಮಿಥುನ ರಾಶಿಯಲ್ಲಿ ಇಂದು ಬುಧ-ಸೂರ್ಯರ ಸಂಯೋಜನೆ, 3 ರಾಶಿಗಳ ಜನರಿಗೆ ಜಬರ್ದಸ್ತ್ ಧನಲಾಭ

ಸನ್ಯಾಸಿ ಅಥವಾ ಬಡ ವ್ಯಕ್ತಿ

ಸನ್ಯಾಸಿ ಅಥವಾ ಬಡ ವ್ಯಕ್ತಿ ಶನಿವಾರದಂದು ಮನೆ ಬಾಗಿಲಿಗೆ ಬಂದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಿ. ಇಂತಹವರನ್ನು ದೇಣಿಗೆ ಮತ್ತು ದಕ್ಷಿಣೆ ನೀಡಿ ಕಳುಹಿಸಬೇಕು. ಅವರನ್ನು ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ವಾಪಸ್ ಕಳುಹಿಸಬೇಡಿ. ಇದರಿಂದ ಶನಿದೇವನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಕಪ್ಪು ನಾಯಿ

ಕಪ್ಪು ನಾಯಿಯನ್ನು ಶನಿದೇವನ ವಾಹನವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಜನರು ಶನಿ ದೇವರನ್ನು ಮೆಚ್ಚಿಸಲು ಕಪ್ಪು ನಾಯಿಯನ್ನು ಸಾಕುತ್ತಾರೆ. ಕಪ್ಪು ನಾಯಿ ಇರುವಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ಶನಿವಾರದಂದು ಬೆಳಿಗ್ಗೆ ಕಪ್ಪು ನಾಯಿಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಕಪ್ಪು ಹಸು

ಶನಿವಾರದಂದು ನೀವು ಕೆಲವು ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋದಾಗ ದಾರಿಯಲ್ಲಿ ನೀವು ಕಪ್ಪು ಹಸು ನೋಡಿದರೆ, ನೀವು ಅಂದುಕೊಂಡ ಕೆಲಸವಾಗುತ್ತದೆ. ಆ ಹಸುವಿಗೆ ಪ್ರದಕ್ಷಿಣೆ ಹಾಕಿದ ನಂತರ ಅದಕ್ಕೆ 4 ಬೂಂದಿ ಲಡ್ಡುಗಳನ್ನು ತಿನ್ನಿಸಿ. ಇದರಿಂದ ನಿಮ್ಮ ಸಮಸ್ಯೆಗಳು ಎಲ್ಲಾ ನಿವಾರಣೆಯಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News