ಔಷಧಿಗಳ ಖರೀದಿ, ಮೆಡಿಕಲ್ ಕನ್ಸಲ್ ಟೆಶನ್ ಎರಡೂ ಅಗ್ಗ ..! ಎಸ್‌ಬಿಐ ನೀಡುತ್ತಿದೆ ಈ ವಿಶೇಷ ಸೌಲಭ್ಯ

SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಔಷಧಗಳು ಮತ್ತು ಮೆಡಿಕಲ್ ಕನ್ಸಲ್ ಟೆಶನ್  ಬುಕ್ ಮಾಡುವುದು ಅಗ್ಗವಾಗಿದೆ. ಕೆಳಗೆ ನೀಡಲಾದ ವಿವರಗಳ ಮೂಲಕ ಪ್ರಕ್ರಿಯೆಯನ್ನು ಅನುಸರಿಸಿ

Written by - Ranjitha R K | Last Updated : Jun 23, 2022, 01:17 PM IST
  • ಎಸ್‌ಬಿಐ ಗ್ರಾಹಕರಿಗೆ ನೀಡುತ್ತಿದೆ ಈ ವಿಶೇಷ ಸೌಲಭ್ಯ
  • ಆನ್‌ಲೈನ್‌ನಲ್ಲಿ ಔಷಧಿ ಖರೀದಿ ಮೇಲೆ ಸಿಗುತ್ತದೆ ಭಾರೀ ರಿಯಾಯಿತಿ
  • ಸಿಗುವ ರಿಯಾಯಿತಿ ಎಷ್ಟು? ಪಡೆಯುವುದು ಹೇಗೆ ನೋಡೋಣ
ಔಷಧಿಗಳ ಖರೀದಿ, ಮೆಡಿಕಲ್ ಕನ್ಸಲ್ ಟೆಶನ್ ಎರಡೂ ಅಗ್ಗ ..! ಎಸ್‌ಬಿಐ ನೀಡುತ್ತಿದೆ ಈ ವಿಶೇಷ ಸೌಲಭ್ಯ  title=
SBI YONO Benefit

ಬೆಂಗಳೂರು :  SBI ಈಗ ತನ್ನ ಗ್ರಾಹಕರಿಗೆ ವೈದ್ಯರು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಸೌಲಭ್ಯವನ್ನು YONO ಆಪ್‌ನಲ್ಲಿ ಒದಗಿಸುತ್ತದೆ. ಇದರಲ್ಲಿ ಅಪೋಲೋ, ಫಾರ್ಮ್ ಈಸಿ, ಡಾ. ಲಾಲ್ ಪಾಥ್‌ಲ್ಯಾಬ್‌ಗಳಿಗೆ ಸಂಬಂಧಿಸಿದ ಅನೇಕ ಆನ್‌ಲೈನ್ ಮೆಡಿಕಲ್ ಪ್ಲಾಟ್ ಫಾರಂಗಳಿವೆ. ಇವುಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಔಷಧಿಗಳನ್ನು ಖರೀದಿಸುವುದು ಮತ್ತು  ವೈದ್ಯರೊಂದಿಗೆ ಸಮಾಲೋಚಿಸುವುದು ಸಾಧ್ಯವಾಗುತ್ತದೆ.

ಆನ್‌ಲೈನ್‌ನಲ್ಲಿ ಔಷಧಿ ಖರೀದಿ ಮೇಲೆ ಸಿಗುತ್ತದೆ ಭಾರೀ ರಿಯಾಯಿತಿ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಔಷಧ ಖರೀದಿ ಮತ್ತು ಮೆಡಿಕಲ್ ಕನ್ಸಲ್ ಟೆಶನ್ ಬುಕ್ ಮಾಡಬಹುದು. ಇದಕ್ಕಾಗಿ  SBI YONO ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದೆ. 

ಇದನ್ನೂ ಓದಿ : ಚೀನಾ ಬಳಿ ಆರ್ಥಿಕ ನೆರವು ಕೋರಿದ ಪಾಕಿಸ್ತಾನ.. 2.3 ಬಿಲಿಯನ್ ಡಾಲರ್ ಸಾಲ ಸೌಲಭ್ಯ ಒಪ್ಪಂದಕ್ಕೆ ಸಹಿ

YONO SBI ಹೆಲ್ತ್ ಅಂಡ್ ವೆಲ್ ನೆಸ್ ಬ್ರಾಂಡ್‌ಗಳ ಮೇಲೆ ಭಾರೀ  ರಿಯಾಯಿತಿಗಳನ್ನು ನೀಡುತ್ತಿದೆ. ಗ್ರಾಹಕರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಔಷಧಿಗಳನ್ನು ಖರೀದಿಸಬಹುದು ಮಾತ್ರವಲ್ಲ ಮೆಡಿಕಲ್ ಕನ್ಸಲ್ ಟೆಶನ್  ಕೂಡಾ ಬುಕ್ ಮಾಡಬಹುದು. 

 

ಸಿಗುವ ರಿಯಾಯಿತಿ ಎಷ್ಟು? ಪಡೆಯುವುದು ಹೇಗೆ ನೋಡೋಣ : 
ಈ ವೈದ್ಯಕೀಯ ಪ್ಲಾಟ್ಫಾರ್ಮ್ ನಲ್ಲಿ ಭಾರೀ ರಿಯಾಯಿತಿಗಳು ಸಿಗುತ್ತವೆ. 
1. ಅಪೊಲೊ 24*7- ಔಷಧಿಗಳು ಮತ್ತು  ಮೆಡಿಕಲ್ ಕನ್ಸಲ್ ಟೆಶನ್  ಮೇಲೆ  18% ವರೆಗೆ ರಿಯಾಯಿತಿ ಪಡೆಯಬಹುದು.
2. PharmEasy- ಈ ಔಷಧಿಗಳನ್ನು ಇಲ್ಲಿ ಖರೀದಿಸಲು ನೀವು ಸುಮಾರು 25% ರಿಯಾಯಿತಿ ಸಿಗುತ್ತದೆ. 
3. ಡಾ.ಲಾಲ್ ಪಾಥ್‌ಲ್ಯಾಬ್ಸ್- ಪ್ಯಾಥೋಲಜಿ ಟೆಸ್ಟ್ ಮಾಡಿಸಿಕೊಂಡರೆ 15% ರಿಯಾಯಿತಿ
4. ಇಂಡಸ್ ಹೆಲ್ತ್ - ಪ್ರೈವೇಟ್ ಚೆಕ್ ಅಪ್ ಮೇಲೆ 13%  ರಿಯಾಯಿತಿ
5. ಟಾಟಾ 1mg- ಇಲ್ಲಿ ನೀವು ಪ್ರಿಸ್ಕ್ರಿಪ್ಷನ್ ಮೂಲಕ ಔಷಧಿಗಳ ಮೇಲೆ ಸುಮಾರು 25% ರಿಯಾಯಿತಿಯನ್ನು ಪಡೆಯಬಹುದು.

ಇದನ್ನೂ ಓದಿ : 23-06-2022 Today Vegetable Price: ಇಂದಿನ ತರಕಾರಿ-ಹಣ್ಣುಗಳ ದರ ಹೀಗಿದೆ

ಈ ರಿಯಾಯಿತಿ ಪಡೆಯಬೇಕಾದರೆ ಮೊದಲು SBI YONO ಆಪ್ ಡೌನ್‌ಲೋಡ್ ಮಾಡಿಕೊಳ್ಳಿ
*ನಂತರ ಶಾಪ್ & ಆರ್ಡರ್ ಆಯ್ಕೆಯನ್ನು ಕ್ಲಿಕ್ ಮಾಡಿ
*ನಂತರ Heath & Wellness ಗೆ ಹೋಗಿ
*ಇಲ್ಲಿ ಮೆಡಿಕಲ್ ಪ್ಲಾಟ್ ಫಾರ್ಮರ್ಸ್ ಅನ್ನು ಆಯ್ಕೆ ಮಾಡಬಹುದು
* ನಂತರ ಔಷಧಿ ಖರೀದಿಸಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News