/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಶುಕ್ರವಾರದಂದು ಅವಿಶ್ವಾಸ ಮತಕ್ಕೂ ಮುನ್ನ ಸಂಸತ್ ಹಲವು ಸ್ವಾರಸ್ಯಕರ ಘಟನೆಗಳಿಗೆ ಕಾರಣವಾಯಿತು. ಅದರಲ್ಲಿ ಪ್ರಮುಖವಾಗಿ ರಾಹುಲ್ ಗಾಂಧಿ ತಮ್ಮ ಭಾಷಣದ ನಂತರ ಪ್ರಧಾನಿ ಮೋದಿಯವರನ್ನು ತಬ್ಬಿಕೊಂಡಿದ್ದು ತದನಂತರ ಕಣ್ಸನ್ನೆ ಮಾಡಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಧಾನಿ ಮೋದಿ ಇದೆಲ್ಲವನ್ನು ತಮ್ಮ ಭಾಷಣದಲ್ಲಿ  ಮಿಮಿಕ್ರಿ ರೀತಿಯಲ್ಲಿ ತೋರಿಸಿದ್ದು ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು , ಹೀಗೆ ಶುಕ್ರವಾರದ ಅಧಿವೇಶನ  ಹಲವು ಘಟನಾವಳಿಗಳಿಗೆ ಸಾಕ್ಷಿಯಾಗಿತ್ತು.

ಈ ಎಲ್ಲ ಘಟನಾವಳಿಗಳ ಮಧ್ಯದಲ್ಲಿ ಸರ್ಕಾರಕ್ಕೆ ಪ್ರತಿಪಕ್ಷಗಳು ಅವಿಶ್ವಾಸ ಮತಯಾಚನೆ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದರು.ಇಂತಹ ಹಲವು ಹಗ್ಗ ಜಗ್ಗಾಟ,ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾದ ಶುಕ್ರವಾರದ ಅಧಿವೇಶನ ಕೊನೆಗೆ ಅವಿಶ್ವಾಸ ಪ್ರಸ್ತಾವನೆಯನ್ನು ಮಂಡಿಸಿತು. ಈ ಸಂದರ್ಭದಲ್ಲಿ  ಒಟ್ಟು 451 ಸದಸ್ಯರಲ್ಲಿ 126 ಸದಸ್ಯರು ಅವಿಶ್ವಾಸ ಪ್ರಸ್ತಾವನೆಯನ್ನು ಬೆಂಬಲಿಸಿದರೆ. ಉಳಿದ 325 ಸದಸ್ಯರು ಮೋದಿ ಸರ್ಕಾರದ ಪರವಾಗಿ ಬೆಂಬಲಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಆ ಮೂಲಕ  ಮೋದಿ ಸರ್ಕಾರ ಸದನದ ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆದಂತಾಗಿದೆ.

ಸುಮಾರು 15 ವರ್ಷಗಳ ನಂತರ ಮೊದಲ ಬಾರಿಗೆ ಅವಿಶ್ವಾಸ ಅಗ್ನಿಪರೀಕ್ಷೆಯನ್ನು ಮೋದಿ ಸರ್ಕಾರ ಎದುರಿಸಿತು.ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ಧ 2003 ರಲ್ಲಿ ಮಂಡಿಸಲಾಗಿತ್ತು. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರವಾಗಿ ಕೇಂದ್ರ ಸರ್ಕಾರವು ಅನ್ಯಾಯ ಮಾಡಿದೆ ಎಂದು  ಅವಿಶ್ವಾಸ ಮಂಡನೆಯ ಪ್ರಸ್ತಾಪವನ್ನು ಮಂಡಿಸಿತ್ತು. ಆದರೆ ಅವಿಶ್ವಾಸ ಮಂಡನೆ ವೇಳೆ ಅದರ ಪರವಾಗಿ ಕೇವಲ 126 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.   

Section: 
English Title: 
modi govt won no confidence motion
News Source: 
Home Title: 

'ಅವಿಶ್ವಾಸ'ದಲ್ಲಿ ಮೋದಿಗೆ ಬಂತು ವಿ'ಶ್ವಾಸ

'ಅವಿಶ್ವಾಸ'ದಲ್ಲಿ ಮೋದಿಗೆ ಬಂತು ವಿ'ಶ್ವಾಸ
Caption: 
Photo courtesy: ANI
Author No use : 
Manjunath Naragund
Yes
Is Blog?: 
No
Tags: 
Facebook Instant Article: 
Yes
Mobile Title: 
'ಅವಿಶ್ವಾಸ'ದಲ್ಲಿ ಮೋದಿಗೆ ಬಂತು ವಿ'ಶ್ವಾಸ