PFRDA New Rule: NPS ಹೂಡಿಕೆದಾರರಿಗೊಂದು ಗುಡ್ ನ್ಯೂಸ್, ಹೊಸ ಮಾರ್ಗಸೂಚಿಗಳ ಬಿಡುಗಡೆ

PFRDA New Rule: ಎನ್ಪಿಎಸ್ ಅಡಿ ಬರುವ ಚಂದಾದಾರರು ಹಲವು ಬಾರಿ ಯಾವ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು ಎಂಬುದರ ಕುರಿತು ಗೊಂದಲಕ್ಕೆ ಒಳಗಾಗುತ್ತಾರೆ. ಅಂತಹ ಚಂದಾದಾರರನ್ನು ಗಮನದಲ್ಲಿಟ್ಟುಕೊಂಡು ಪಿಎಫ್ಆರ್ಡಿಎ ಹೊಸ ನಿಯಮಗಳನ್ನು ರೂಪಿಸಿದೆ. ಇದರಿಂದ ಯಾವ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು? ಎಂಬ ಚಂದಾದಾರರ ಗೊಂದಲಕ್ಕೆ ತೆರೆಬೀಳಲಿದೆ.   

Written by - Nitin Tabib | Last Updated : Jun 1, 2022, 08:22 PM IST
PFRDA New Rule: NPS ಹೂಡಿಕೆದಾರರಿಗೊಂದು ಗುಡ್ ನ್ಯೂಸ್, ಹೊಸ ಮಾರ್ಗಸೂಚಿಗಳ ಬಿಡುಗಡೆ title=
PFRDA New Rule

PFRDA New Rule: ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಇದೀಗ ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯೋಜನೆಗಳಲ್ಲಿ ಒಳಗೊಂಡಿರುವ ಅಪಾಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ ಪಿಎಫ್‌ಆರ್‌ಡಿಎ ಹೊಸ ನಿಯಮ ರೂಪಿಸಿದೆ. ಇನ್ಮುಂದೆ ಹೊಸ ನಿಯಮಗಳ ಪ್ರಕಾರ, ಪಿಂಚಣಿ ನಿಧಿಗಳು ಈಗ ಪ್ರತಿ ತ್ರೈಮಾಸಿಕ ಅಂತ್ಯದ ಮೊದಲು 15 ದಿನಗಳ ಒಳಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ಎಲ್ಲಾ NPS ಯೋಜನೆಗಳ ಅಪಾಯದ ಮಾಹಿತಿಯನ್ನು ಸಲ್ಲಿಸಬೇಕಾಗಲಿದೆ.

ಎನ್‌ಪಿಎಸ್‌ ಅಡಿ ಬರುವ ಚಂದಾದಾರರು ಸಾಮಾನ್ಯವಾಗಿ ಯಾವ ಆಸ್ತಿಯಲ್ಲಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.  ಹೀಗಾಗಿ PFRDA ಯ ಈ ಹೊಸ ಕ್ರಮ NPS ಚಂದಾದಾರರಿಗೆ ಹೂಡಿಕೆ ಮಾಡಲು ಯಾವ ಸ್ವತ್ತುಗಳು ಪ್ರಯೋಜನಕಾರಿ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

 ಮಾರ್ಗಸೂಚಿಗಳನ್ನು ಹೊರಡಿಸಿದ PFRDA
ದೇಶದ ಪಿಂಚಣಿ ನಿಧಿ ನಿಯಂತ್ರಕ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಇದಕ್ಕಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿವೆ. ಅವುಗಳ ಪ್ರಕಾರ, ನಿಯಂತ್ರಕರು ಹೂಡಿಕೆದಾರರಿಗೆ ಅರಿವು ಮೂಡಿಸಲು ಆರು ಅಪಾಯದ ಹಂತಗಳನ್ನು ಆಯ್ಕೆ ಮಾಡಿದ್ದಾರೆ. ವಿವಿಧ NPS ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು, ಅವುಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಅವರು ನೀಡಲಿದ್ದಾರೆ. ಹೊಸ ನಿಯಮಗಳು ಜುಲೈ 15, 2022 ರಿಂದ ಜಾರಿಗೆ ಬರಲಿವೆ. ಅಲ್ಲದೆ, ಇ, ಸಿ, ಜಿ ಮತ್ತು ಎ ವರ್ಗಗಳ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳಿಗೆ ಅನ್ವಹಿಸಲಿವೆ.

ಹೊಸ ನಿಯಮ ಏನು?
FRDA ಹೊರಡಿಸಿದ ಸುತ್ತೋಲೆಯ ಪ್ರಕಾರ, "ಪಿಂಚಣಿ ನಿಧಿ ಯೋಜನೆಗಳ ವಿವಿಧ ಆಸ್ತಿ ವರ್ಗಗಳ ಅಡಿಯಲ್ಲಿ ಹೂಡಿಕೆಯು ಚಂದಾದಾರರಿಗೆ ಅಪಾಯದ ವಿವಿಧ ಹಂತಗಳನ್ನು ಒಳಗೊಂಡಿರಲಿದೆ." ಇದರಿಂದ ಎನ್‌ಪಿಎಸ್‌ನ ವಿವಿಧ ಯೋಜನೆಗಳಲ್ಲಿ ಒಳಗೊಂಡಿರುವ ಅಪಾಯಗಳ ಬಗ್ಗೆ ಮಾಹಿತಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಲ್ಲಿ ಅಪಾಯದ ಒಟ್ಟು ಆರು ಹಂತಗಳನ್ನು ಸೂಚಿಸಲಾಗಿದೆ. ಮೊದಲನೆಯದು ಕಡಿಮೆ ಅಪಾಯ, ಎರಡನೆಯದು ಕಡಿಮೆಯಿಂದ ಮಧ್ಯಮ ಅಪಾಯ, ಮೂರನೆಯದು ಮಧ್ಯಮ ಅಪಾಯ, ನಾಲ್ಕನೆಯದು ಮಧ್ಯಮ-ಹೆಚ್ಚಿನ ಅಪಾಯ, ಐದನೆಯದು ಹೆಚ್ಚಿನ ಅಪಾಯ ಮತ್ತು ಆರನೆಯದು ಅತಿ ಹೆಚ್ಚಿನ ಅಪಾಯ.

ಇದನ್ನೂ ಓದಿ-Banking: ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ

ಅಷ್ಟೇ ಅಲ್ಲ ಶ್ರೇಣಿ-I ಮತ್ತು ಶ್ರೇಣಿ-II ಆಸ್ತಿ ವರ್ಗಗಳು ಇಕ್ವಿಟಿ (ಇ), ಕಾರ್ಪೊರೇಟ್ ಸಾಲ (ಸಿ), ಸರ್ಕಾರಿ ಭದ್ರತೆಗಳು (ಜಿ), ಮತ್ತು ಪಿಂಚಣಿ ನಿಧಿಗಳನ್ನು ನಿರ್ವಹಿಸುವ ಸ್ಕೀಮ್ ಎ. ನಿರ್ವಹಣೆ ಮತ್ತು ಅಪಾಯದ ಪ್ರೊಫೈಲ್ ಅನ್ನು ನಿಯಂತ್ರಕರು ಮೊದಲೇ ನಿಯಂತ್ರಕರು ಪಿಂಚಣಿ ನಿಧಿ ಹೊಂದಿದವರಿಗೆ ತಿಳಿಸಬೇಕು ಎಂದೂ ಕೂಡ ನಿಯಂತ್ರಕ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ.

ಇದನ್ನೂ ಓದಿ-Airtel New Plan: ಮೂರು ಅತ್ಯದ್ಭುತ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಏರ್ಟೆಲ್

ಹೂಡಿಕೆ ಮಾಡುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ
>> ಯೋಜನೆಯ ಗುಣಲಕ್ಷಣಗಳನ್ನು ಅವಲಂಬಿಸಿ ಪಿಂಚಣಿ ನಿಧಿ ಇ-ಟೈರ್ 1, ಇ-ಟೈರ್ 2, ಸಿ-ಟೈರ್ 1, ಸಿ-ಟೈರ್-2, ಜಿ-ಟೈರ್-1, ಜಿ-ಟೈರ್-2 ಮತ್ತು ಸ್ಕೀಮ್ ಎ ಅಪಾಯದ ಮಟ್ಟಗಳು ನಿರ್ಧರಿಸಲಾಗುವುದು.
>> ಪ್ರತಿ ತ್ರೈಮಾಸಿಕ ಅಂತ್ಯದ ಮೊದಲು 15 ದಿನಗಳ ಒಳಗೆ ಪಿಂಚಣಿ ನಿಧಿಯ ವೆಬ್‌ಸೈಟ್‌ನ 'ಪೋರ್ಟ್‌ಫೋಲಿಯೋ ಡಿಸ್‌ಕ್ಲೋಸರ್' ವಿಭಾಗದಲ್ಲಿ ಅಪಾಯ ಮಟ್ಟದ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
>> ಪಿಂಚಣಿ ನಿಧಿಯಿಂದ ನಿರ್ಧರಿಸಲಾದ ಅಪಾಯದ ಮಟ್ಟವನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುವುದು ಮತ್ತು ಯಾವುದೇ ಬದಲಾವಣೆಗಳಿದ್ದರೆ, ಅದನ್ನು ಪಿಂಚಣಿ ನಿಧಿಯ ವೆಬ್‌ಸೈಟ್‌ಗಳು ಮತ್ತು ಎನ್‌ಪಿಎಸ್ ಟ್ರಸ್ಟ್‌ನ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.
>> ಪಿಂಚಣಿ ನಿಧಿ ನಿಯಂತ್ರಕಗಳು ಪ್ರತಿ ವರ್ಷ ಮಾರ್ಚ್ 31 ರೊಳಗೆ ಯೋಜನೆಗಳ ಬಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತವೆ.
>> ಒಂದು ವರ್ಷದಲ್ಲಿ ಅಪಾಯದ ಮಟ್ಟ ಬದಲಾದಾಗ, ಪ್ರತಿ ಬಾರಿ ಅದನ್ನು ವರದಿ ಮಾಡುವುದು ಕಡ್ಡಾಯವಾಗಿರಲಿದೆ.
ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News