ಮಾವಿನಕಾಯಿ ಚಟ್ನಿ ರೆಸಿಪಿ: ಮಾವಿನಕಾಯಿ ತಿನ್ನಲು ಇಷ್ಟಪಡದವರು ಯಾರೂ ಇಲ್ಲ. ಮಕ್ಕಳಾಗಲಿ, ಮುದುಕರಾಗಲಿ ಎಲ್ಲರಿಗೂ ಇಷ್ಟವಾದ ಹಣ್ಣುಗಳಲ್ಲಿ ಮಾವು ಒಂದು. ಮಾವನ್ನು ಹಲವು ವಿಧದಲ್ಲಿ ತಿನ್ನುತ್ತಾರೆ. ಮಾವನ್ನು ಹಸಿಯಾಗಿ ತಿನ್ನಬಹುದು. ಇದರೊಂದಿಗೆ ನೀವು ಹಸಿ ಮಾವಿನ ಖಾರದ ಚಟ್ನಿ, ಮಾವಿನಕಾಯಿ ಸಿಹಿ ಮತ್ತು ಹುಳಿ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್ ಮುಂತಾದ ವಿವಿಧ ರೀತಿಯ ರುಚಿಕರವಾದ ಪಾಕವಿಧಾನಗಳನ್ನು ಸಹ ಮಾಡಿ ತಿನ್ನಬಹುದು. ಆದರೆ ಅಂತಹದ್ದೇ ಇನ್ನೊಂದು ವಿಧಾನವಿದೆ ಎಂದು ನಿಮಗೆ ತಿಳಿದಿದೆಯೇ.
ಇದನ್ನು ಓದಿ: ಮಹಿಳೆಯನ್ನು ಕೊಂದ ಟಗರಿಗೆ ಮೂರು ವರ್ಷ ಸೆರೆವಾಸ!
ಮಾವಿನಕಾಯಿ ಮತ್ತು ಪುದೀನಾದಿಂದ ಮಾಡುವ ಸಿಹಿ ಚಟ್ನಿ ಬಗ್ಗೆ ಇಲ್ಲಿನ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ಚಟ್ನಿ ಮಾಡುವುದು ಸುಲಭ ಜೊತೆಗೆ ಬೇಸಿಗೆಯಲ್ಲಿ ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಆರೋಗ್ಯ ಸಂಬಂಧಿತ ಪ್ರಯೋಜನಗಳು ಇದರಲ್ಲಿ ಅಡಗಿದೆ. ಅದಕ್ಕಾಗಿಯೇ ಈ ಚಟ್ನಿಯನ್ನು ನಿಮ್ಮ ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ಮಾವಿನಕಾಯಿ ಮತ್ತು ಪುದೀನಾ ಸಿಹಿ ಚಟ್ನಿಗೆ ಬೇಕಾಗುವ ಪದಾರ್ಥಗಳು:
500 ಗ್ರಾಂ ಮಾವು, 200 ಗ್ರಾಂ ಪುದೀನಾ, ರುಚಿಗೆ ತಕ್ಕಂತೆ ಸಕ್ಕರೆ, 1 ಚಮಚ ಕೆಂಪು ಮೆಣಸಿನ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಶುಂಠಿ ಪುಡಿ, ಅರ್ಧ ಚಮಚ ಕಪ್ಪು ಉಪ್ಪು, ರುಚಿಗೆ ತಕ್ಕಂತೆ ಉಪ್ಪು,
ಇದನ್ನು ಓದಿ: ಮ್ಯೂಚುಯಲ್ ಫಂಡ್‌ನ 5 ಬಹು ದೊಡ್ಡ ಪ್ರಯೋಜನಗಳಿವು
ಮಾವಿನಕಾಯಿ ಮತ್ತು ಪುದೀನಾ ಚಟ್ನಿ ಮಾಡುವುದು ಹೇಗೆ:
ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ನಂತರ ಸಿಪ್ಪೆ ಸುಲಿದು ತುರಿ ಮಾಡಿ. ಅದಕ್ಕೆ ಉಪ್ಪು ಮತ್ತು ಕಪ್ಪು ಉಪ್ಪು ಸೇರಿದ ಉಳಿದ ಮಸಾಲೆಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಾವಿನಕಾಯಿ ಮತ್ತು ಪುದೀನಾ ಹುಳಿ ಸಿಹಿ ಚಟ್ನಿ ಸಿದ್ಧವಾಗಿದೆ. ನೀವು ಇದನ್ನು ಚಪಾತಿ, ಪರಾಠದೊಂದಿಗೆ ತಿನ್ನಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.