Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ

ಕಾಲಿಗೆ ಕಾಲುಂಗುರ ತೊಟ್ಟುಕೊಂಡು ಸಲ್ವಾರ್ ಸೂಟ್ ಧರಿಸಿ ವಿದ್ಯುತ್ ಕಂಬ ಏರುತ್ತಿರುವ ಬಾಲಕಿಯೊಬ್ಬಳಿಗೆ ಸರ್ಕಾರಿ ಕೆಲಸ ಸಿಕ್ಕಿದೆ. 21ರ ಹರೆಯದ ಈ ಯುವತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿದ್ದಾಳೆ.

Written by - Puttaraj K Alur | Last Updated : May 17, 2022, 11:15 PM IST
  • ಸರಸರನೆ ವಿದ್ಯುತ್ ಕಂಬ ಏರುವ ಯುವತಿಗೆ ಸಿಕ್ಕಿತ್ತು ಸರ್ಕಾರಿ ಕೆಲಸ
  • ತೆಲಂಗಾಣ ಪವರ್ ಕಾರ್ಪೊರೇಷನ್‌ನಲ್ಲಿ ಮೊದಲ ಬಾರಿ ಮಹಿಳಾ ಲೈನ್‌ಮ್ಯಾನ್ ಆಗಿ ಆಯ್ಕೆ
  • ತೆಲಂಗಾಣದ 21 ವರ್ಷದ ಯುವತಿಯ ಸಾಹಸಗಾದೆಗೆ ಸಲಾಂ ಎನ್ನುತ್ತಿರುವ ಜನರು
Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ title=
21 ವರ್ಷದ ಯುವತಿಗೆ ಸಾಹಸಗಾದೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಮನೆ ಜವಾಬ್ದಾರಿಯಿಂದ ಹಿಡಿದು ದೇಶವನ್ನು ಮುನ್ನೆಡೆಸುವ ಮಹತ್ತರ ಜವಾಬ್ದಾರಿವರೆಗೂ ಮಹಿಳೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಈ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೇ ತೆಲಂಗಾಣದ ಈ 21 ವರ್ಷದ ಯುವತಿ.

ತೆಲಂಗಾಣದ ಈ ಯುವತಿ ಯಶಸ್ವಿಯಾಗಿ ಲೈಟ್ ಕಂಬ ಹತ್ತುವ ಮೂಲಕ ಲೈನ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾಳೆ. ಈ ಮೂಲಕ ತಾನು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ತೆಲಂಗಾಣದ ಪವರ್ ಕಾರ್ಪೊರೇಷನ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಲೈನ್‌ಮ್ಯಾನ್ ಆಗಿ ಆಯ್ಕೆಯಾಗಿದ್ದಾಳೆ. ಅಂದಹಾಗೆ ಈ ಯುವತಿಯ ಹೆಸರು ಸಿರಿಶಾ. ಈಕೆ ಲೈಟ್ ಕಂಬವನ್ನು ಸರಸರನೇ ಏರುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Ration Card : ಪಡಿತರ ಚೀಟಿದಾರರೆ ತಕ್ಷಣ ಈ ಕೆಲಸ ಮಾಡಿ : ಇಲ್ಲದಿದ್ದರೆ ನಿಮಗೆ ಸಿಗಲ್ಲ ರೇಷನ್!

ಲೈಟ್ ಕಂಬಗಳನ್ನು ಹತ್ತುವುದು ಸರಳ ಕೆಲಸವೆಂದು ಅನಿಸಿದ್ರೂ ಮಹಿಳೆಯರು ಈ ಕೆಲಸ ಮಾಡುವುದೇ ದೊಡ್ಡ ವಿಷಯ. ಸಿರಿಶಾ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಗಣೇಶಪಲ್ಲಿ ಎಂಬ ಪುಟ್ಟ ಗ್ರಾಮದವರು. ತೆಲಂಗಾಣದ ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸಿರಿಶಾ ಜೂನಿಯರ್ ಲೈನ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸ್ವತಃ ತೆಲಂಗಾಣ ಇಂಧನ ಸಚಿವ ಜಗದೀಶ್ ರೆಡ್ಡಿ ಅವರೇ ಸಿರಿಶಾಗೆ ನೇಮಕಾತಿ ಪತ್ರ ನೀಡಿದ್ದಾರೆ.

2019ರಲ್ಲಿ ಸಿರಿಶಾ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಆ ಸಮಯದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು. ನಂತರ ಸಿರಿಶಾ ತನ್ನ ಕುಟುಂಬದವರ ನೆರವಿನೊಂದಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ 23 ಡಿಸೆಂಬರ್ 2020ರಂದು ನೇಮಕಾತಿಗಾಗಿ 8 ಮೀಟರ್ ಲೈಟ್ ಕಂಬ ಹತ್ತುವ ಪರೀಕ್ಷೆ ಇತ್ತು. ಇದರಲ್ಲಿ ಸಿರಿಶಾ ಯಶಸ್ವಿಯಾಗಿದ್ದಾರೆ. ಸಿರಿಶಾರ ಈ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: PM Kisan : ರೈತರೆ ಈಗ ತಿಂಗಳಿಗೆ ₹6,000 ಜೊತೆಗೆ 3,000 ಸಿಗುತ್ತದೆ : ಈ ಲಾಭ ಪಡೆಯಲು ಹೀಗೆ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News