ಹೈದರಾಬಾದ್: ತಂತ್ರಜ್ಞಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ಮಹಾತ್ಮಾ ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಬಹುದು ಎಂದು Zee Mediaದ ಸಂಸ್ಥಾಪಕರು ಮತ್ತು Essel Groupನ ಅಧ್ಯಕ್ಷರಾದ ಡಾ.ಸುಭಾಷ್ ಚಂದ್ರ ಹೇಳಿದ್ದಾರೆ.
ಹೈದರಾಬಾದ್ನ ಐಐಟಿಯಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇಂದಿನ ಸಂವಿಧಾನ ಮಹಾತ್ಮ ಗಾಂಧೀಜಿಯವರ ಕಲ್ಪನೆಯಂತೆ ಇಲ್ಲ. ಗಾಂಧೀಜಿಯವರ ಸ್ವರಾಜ್ಯದ ಅರ್ಥವು ಗ್ರಾಮ ಮಟ್ಟದಲ್ಲಿ ಆಡಳಿತವನ್ನು ನಿಯಂತ್ರಣ ಮಾಡುವುದಾಗಿತ್ತು' ಎಂದು ಹೇಳಿದರು.
ತಂತ್ರಜ್ಞಾನದ ಕುರಿತು ಮಾತನಾಡಿದ ಅವರು, ‘ತಂತ್ರಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಇಂದು ತಂತ್ರಜ್ಞಾನವು ಒಳ್ಳೆಯ ಮತ್ತು ಕೆಟ್ಟ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಸರಿಯಾದ ರೀತಿಯಲ್ಲಿ ಅದನ್ನು ಬಳಸಿಕೊಂಡರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹೀಗಾಗಿ ನಾವು ಸಮತೋಲನದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಬೇಕಿದೆ. ಕೆಟ್ಟ ಉದ್ದೇಶಗಳಿಗಿಂತ ಒಳ್ಳೆಯ ಉದ್ದೇಶಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡರೆ ಉತ್ತಮ’ವೆಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: NEET-PG ಪರೀಕ್ಷೆ ಸ್ಥಗಿತಗೊಳ್ಳುವುದಿಲ್ಲ, ಅರ್ಜಿ ವಜಾಗೊಳಿಸಿದ ಸುಪ್ರೀಂ ಹೇಳಿದ್ದೇನು?
‘ತಂತ್ರಜ್ಞಾನವು ಆಮೂಲಾಗ್ರ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಇದೇ ವೇಳೆ ಡಾ.ಸುಭಾಷ್ ಚಂದ್ರ ತಿಳಿಸಿದರು. 1990ರ ದಶಕವನ್ನು ಉಲ್ಲೇಖಿಸಿದ ಅವರು, ‘ಅಂದು ನಾವು Zee TVಯನ್ನು ಪ್ರಾರಂಭಿಸದಿದ್ದರೆ, ಇಂದು ನಮ್ಮಲ್ಲಿರುವ 500+ ಚಾನಲ್ಗಳು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ' ಎಂದು ಹೇಳಿದರು.
‘ಒಂದು ವೇಳೆ ಅಂದು ಜೀ ಟೀವಿ ಪ್ರಾರಂಭವಾಗದಿದ್ದರೆ, ಇಂದು ಭಾರತದಲ್ಲಿ ಸುಮಾರು 563 ಟಿವಿ ಚಾನೆಲ್ಗಳಿವೆ, ಇವುಗಳಲ್ಲಿ ಸುಮಾರು 12 ಮಿಲಿಯನ್ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ’ ಎಂದು ತಿಳಿಸಿದರು.
ಹೊಸ ತಂತ್ರಜ್ಞಾನ ಮತ್ತು ಒಟಿಟಿ (Over The Top) ಮಾಧ್ಯಮದ ಬೆಳವಣಿಗೆಯ ವಿಷಯಗಳ ಬಗ್ಗೆ ಚರ್ಚಿಸಿದ ಅವರು, ‘ಸದ್ಯದ ಬದಲಾವಣೆಯ ಹಾದಿಯಲ್ಲಿ ಟಿವಿ ಮಾಧ್ಯಮಗಳು ಸಹ ಬಲಗೊಳ್ಳುತ್ತಲೇ ಇವೆ. ಟಿವಿ ಮಾಧ್ಯಮಗಳ ವಿಷಯ(Content)ವು ಹಿಂದೆಂದಿಗಿಂತಲೂ ಇಂದು ಹೆಚ್ಚು ವೀಕ್ಷಿಸಲಾಗುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ: NEET PG 2022: ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಒಟಿಟಿಯನ್ನು ಹೊಸ ವಿತರಣಾ ಮಾಧ್ಯಮ ಎಂದು ಕರೆದ ಅವರು, ‘ತಂತ್ರಜ್ಞಾನವನ್ನು ಬದಲಾಯಿಸಿದಾಗಲೂ ಟಿವಿಯಂತಹ ಹಳೆಯ ಮಾಧ್ಯಮಗಳು ಸಮಾನಾಂತರವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.