ಆಸ್ಪತ್ರೆಗೆ ದಾಖಲಾಗಿದ್ದ ನಟ ಧರ್ಮೇಂದ್ರ ಆರೋಗ್ಯದಲ್ಲಿ ಚೇತರಿಕೆ

ಹಿರಿಯ ನಟ ಧರ್ಮೇಂದ್ರ ಅವರು 'ಸಾಮಾನ್ಯ ತಪಾಸಣೆ'ಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಎಂದಿನಂತೆ ಸಹಜ ತಪಾಸಣೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.ಟೈಮ್ಸ್ ನೌ ವರದಿಯ ಪ್ರಕಾರ, ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸುಮಾರು ನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.ಇದೆ ವೇಳೆ ಅವರ ಮಗ ಸನ್ನಿ ಡಿಯೋಲ್ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದರು ಎಂದು ವರದಿ ತಿಳಿಸಿದೆ.

Written by - Zee Kannada News Desk | Last Updated : May 1, 2022, 11:28 PM IST
  • 1960 ರಲ್ಲಿ ಅರ್ಜುನ್ ಹಿಂಗೋರಾಣಿಯವರ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಸಿನಿ ಜಗತ್ತಿಗೆ ನಟ ಧರ್ಮೇಂದ್ರ ಅವರು ಪಾದಾರ್ಪಣೆ ಮಾಡಿದರು
ಆಸ್ಪತ್ರೆಗೆ ದಾಖಲಾಗಿದ್ದ ನಟ ಧರ್ಮೇಂದ್ರ ಆರೋಗ್ಯದಲ್ಲಿ ಚೇತರಿಕೆ  title=

ನವದೆಹಲಿ: ಹಿರಿಯ ನಟ ಧರ್ಮೇಂದ್ರ ಅವರು 'ಸಾಮಾನ್ಯ ತಪಾಸಣೆ'ಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಎಂದಿನಂತೆ ಸಹಜ ತಪಾಸಣೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.ಟೈಮ್ಸ್ ನೌ ವರದಿಯ ಪ್ರಕಾರ, ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸುಮಾರು ನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.ಇದೆ ವೇಳೆ ಅವರ ಮಗ ಸನ್ನಿ ಡಿಯೋಲ್ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದರು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು "ಸ್ನೇಹಿತರೇ ನನ್ನ ಬೆನ್ನಿನಲ್ಲಿ ದೊಡ್ಡ ಸ್ನಾಯು ಸೆಳೆತ ಕಂಡು ಬಂದ ನಂತರ ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು ಅಲ್ಲಿ ೨ -೪ ದಿನಗಳ ಕಾಲ ಕಷ್ಟವಾಗಿತ್ತು, ಈಗ ನಿಮ್ಮ ಶುಭ ಹಾರೈಕೆ ಮತ್ತು ಆಶೀರ್ವಾದದೊಂದಿಗೆ ನಾನು ಹಿಂತಿರುಗಿದ್ದೇನೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.ಇದಕ್ಕೆ ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಅವರ ಪೋಸ್ಟ್‌ಗೆ,"ಲವ್ ಯೂ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್-2 ಬಿರುಗಾಳಿಗೆ ಬಾಲಿವುಡ್ ಹಳೆ ದಾಖಲೆಗಳೆಲ್ಲ ಉಡೀಸ್!

1960 ರಲ್ಲಿ ಅರ್ಜುನ್ ಹಿಂಗೋರಾಣಿಯವರ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಸಿನಿ ಜಗತ್ತಿಗೆ ನಟ ಧರ್ಮೇಂದ್ರ ಅವರು ಪಾದಾರ್ಪಣೆ ಮಾಡಿದರು.ಅವರ ಸೂಪರ್ ಹಿಟ್ ಚಿತ್ರಗಳಲ್ಲಿ ಶೋಲೆ', 'ಚುಪ್ಕೆ ಚುಪ್ಕೆ', 'ಯಾದೋನ್ ಕಿ' ಮುಂತಾದ ಕ್ಲಾಸಿಕ್‌ಗಳು ಸೇರಿವೆ.ಬಾರಾತ್', 'ಸತ್ಯಕಂ' ಮತ್ತು 'ಸೀತಾ ಔರ್ ಗೀತಾ' ಚಿತ್ರಗಳು ಸೇರಿವೆ.

ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಜಯಾ ಬಚ್ಚನ್, ಶಬಾನಾ ಅಜ್ಮಿ, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೊತೆಗೆ ಧರ್ಮೇಂದ್ರ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರವು 48 ವರ್ಷಗಳ ನಂತರ ಧರ್ಮೇಂದ್ರ ಮತ್ತು ಜಯಾ ಬಚ್ಚನ್ ಅವರ ಪುನರ್ಮಿಲನವನ್ನು ಸೂಚಿಸುತ್ತದೆ.ಇವರಿಬ್ಬರು ಕೊನೆಯದಾಗಿ 1975 ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಅತಿದೊಡ್ಡ ಬ್ಲಾಕ್‌ಬಸ್ಟರ್ 'ಶೋಲೆ' ನಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News