ಮಧುಮೇಹದ ಈ ಸಾಮಾನ್ಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ

ಮಧುಮೇಹದ ಲಕ್ಷಣಗಳು: ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಮೂಲಕ ಇದನ್ನು ತಪ್ಪಿಸಬಹುದು. ದೇಹದಲ್ಲಿ 5 ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಮಧುಮೇಹದ ಲಕ್ಷಣವಾಗಿರಬಹುದು.

Written by - Yashaswini V | Last Updated : Apr 18, 2022, 12:48 PM IST
  • ಮಧುಮೇಹದ ಸಾಮಾನ್ಯ ಲಕ್ಷಣಗಳು
  • ಮಧುಮೇಹ ರೋಗಿಗಳಿಗೆ ಮತ್ತೆ ಮತ್ತೆ ಹಸಿವಾಗುತ್ತದೆ
  • ಪದೇ ಪದೇ ಗಂಟಲು ಒಣಗುತ್ತಿದ್ದರೆ ನೀರು ಕುಡಿದರೂ ಸಹ ಬಾಯಾರಿಕೆ ತಣಿಯದಿದ್ದರೆ ಇದು ಕೂಡ ಮಧುಮೇಹದ ಮುನ್ಸೂಚನೆ ಆಗಿರಬಹುದು
ಮಧುಮೇಹದ ಈ ಸಾಮಾನ್ಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ title=
Diabetes Symptoms

ಮಧುಮೇಹದ ಎಚ್ಚರಿಕೆಯ ಸಂಕೇತ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಮಧುಮೇಹವು ಆಜೀವ ದೀರ್ಘಕಾಲದ ಸ್ಥಿತಿಯಾಗಿದೆ. ಇದು ಟೈಪ್ 1 ಮತ್ತು ಟೈಪ್ 2 ಎಂಬ ಎರಡು ವಿಧಗಳನ್ನು ಹೊಂದಿದೆ. ಈ ರೋಗವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಇದು ಇತರ ಅನೇಕ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹವನ್ನು ನಿಯಂತ್ರಿಸಲು, ಅದರ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. 

ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಮೂಲಕ ಇದನ್ನು ತಪ್ಪಿಸಬಹುದು. ದೇಹದಲ್ಲಿ 5 ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಮಧುಮೇಹದ ಲಕ್ಷಣವಾಗಿರಬಹುದು. ದೇಹದಲ್ಲಿ ಕಂಡು ಬರುವ ಕೆಲವು ಸಾಮಾನ್ಯ ಲಕ್ಷಣಗಳು ಮಧುಮೇಹದ ಎಚ್ಚರಿಕೆಯ ಗಂಟೆಯಾಗಿರಬಹುದು. ಅಂತಹ ರೋಗಲಕ್ಷಣಗಳು ಯಾವುವು ಎಂದು ತಿಳಿಯೋಣ...

ಮಧುಮೇಹದ ಸಾಮಾನ್ಯ ಲಕ್ಷಣಗಳು:
1. ಆಗಾಗ್ಗೆ ಹಸಿವು :

ಮಧುಮೇಹ ರೋಗಿಗಳಿಗೆ ಮತ್ತೆ ಮತ್ತೆ ಹಸಿವಾಗುತ್ತದೆ. ಪ್ರತಿ ದಿನ ಈ ರೀತಿಯ ಅನುಭವವಾದರೆ ತಕ್ಷಣ ಬ್ಲಡ್ ಶುಗರ್ ಟೆಸ್ಟ್ ಮಾಡಿಸಿ.

ಇದನ್ನೂ ಓದಿ- ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಗಳಿಂದ ದೂರ ಉಳಿಯಬಹುದು!

2. ಆಗಾಗ್ಗೆ ಬಾಯಾರಿಕೆ ಆಗುವುದು:
ಪದೇ ಪದೇ ಗಂಟಲು ಒಣಗುತ್ತಿದ್ದರೆ ನೀರು ಕುಡಿದರೂ ಸಹ ಬಾಯಾರಿಕೆ ತಣಿಯದಿದ್ದರೆ ಇದು ಕೂಡ ಮಧುಮೇಹದ ಮುನ್ಸೂಚನೆ ಆಗಿರಬಹುದು. ಇಂತಹ ಪರಿಸ್ಥಿತಿ ಎದುರಾದಾಗ ಎಚ್ಚರದಿಂದಿರಬೇಕು. 

3. ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ
ರಾತ್ರಿಯಲ್ಲಿ ನೀವು ನಾಲ್ಕೈದು ಬಾರಿ ಮೂತ್ರ ವಿಸರ್ಜಿಸಲು ಎದ್ದರೆ ಅಂತಹ ಸಂದರ್ಭದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ ಶುಗರ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.

4. ತೂಕ ನಷ್ಟ:
ನಿಮ್ಮ ತೂಕವು ಇದ್ದಕ್ಕಿದ್ದಂತೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿದರೆ ಅದು ಮಧುಮೇಹದ ಸಂಕೇತವಾಗಿರಬಹುದು. ಇಂತಹ ಸಂದರ್ಭದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಇದನ್ನೂ ಓದಿ- ಮಧುಮೇಹಿಗಳೆ ಈ ಪದಾರ್ಥಗಳಿಂದ ದೂರವಿರಿ : ಇಲ್ಲದಿದ್ದರೆ ಅಪಾಯ ತಪ್ಪಿದಲ್ಲ!

5. ಅತಿಯಾದ ಆಯಾಸ:
ಯಾವುದೇ ಕೆಲಸವನ್ನು ಸಲೀಸಾಗಿ ಮಾಡುವ ನೀವು ಇದ್ದಕ್ಕಿದ್ದಂತೆ ಆಯಾಸವನ್ನು ಅನುಭವಿಸಿದರೆ ಅರ್ಥಾಥ್ ಸಣ್ಣ ಪುಟ್ಟ ಕೆಲಸ ಮಾಡಿದರೂ ಆಯಾಸವನ್ನು ಅನುಭವಿಸುತ್ತಿದ್ದರೆ ಅದು ಸಹ ಮಧುಮೇಹದ ಲಕ್ಷಣವಾಗಿರಬಹುದು. ಇದನ್ನು ನಿರ್ಲಕ್ಷಿಸಬೇಡಿ.

ಮಧುಮೇಹದ ಇಂತಹ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ:
ಪ್ರಸ್ತುತ ಯುಗದಲ್ಲಿ ಮಧುಮೇಹದ ಲಕ್ಷಣಗಳಿಗಾಗಿ ಜನರು ಕಾಯಬಾರದು, ವಯಸ್ಸು 30 ದಾಟಿದ ನಂತರ ಕಾಲಕಾಲಕ್ಕೆ ಬ್ಲಡ್ ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಕ್ಷಣದಲ್ಲಿ ನಿಮ್ಮಲ್ಲಿ ಮಧುಮೇಹದ ಲಕ್ಷಣಗಳು ಕಂಡುಬಂದರೆ, ನೀವು ವಿಳಂಬ ಮಾಡದೆ ಮಧುಮೇಹ ಪರೀಕ್ಷೆಗೆ ಒಳಗಾಗಬೇಕು, ಏಕೆಂದರೆ ಮಧುಮೇಹ ರೋಗವನ್ನು ಸಮಯಕ್ಕೆ ಪತ್ತೆ ಮಾಡದಿರುವುದು ಮತ್ತು ಮಧುಮೇಹದ ಲಕ್ಷಣಗಳು ಕಂಡು ಬಂದರೂ ಸಹ ಅವುಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News