ಸ್ಕಿನ್‌ ಗ್ಲೋ ಹೆಚ್ಚಿಸಲು ಹಸಿ ಹಾಲನ್ನು ಈ ರೀತಿ ಮುಖಕ್ಕೆ ಹಚ್ಚಿ!

ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಯ ಆರೈಕೆಗೆ ಹಸಿ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಸಿ ಹಾಲನ್ನು ಬಳಸಲು ನೀವು ಕಷ್ಟಪಡಬೇಕಾಗಿಲ್ಲ. ಇದು ತ್ವಚೆಗೆ ಉತ್ತಮವಾದ ಮನೆಮದ್ದು ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಸಹ ಕಡಿಮೆಯಾಗುತ್ತದೆ.

Written by - Chetana Devarmani | Last Updated : Apr 17, 2022, 07:02 PM IST
  • ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು
  • ಕಪ್ಪು ಕಲೆಗಳು ಹೋಗುತ್ತವೆ
  • ಮುಖದಲ್ಲಿ ಹೊಳಪು ಹೆಚ್ಚುತ್ತದೆ
ಸ್ಕಿನ್‌ ಗ್ಲೋ ಹೆಚ್ಚಿಸಲು ಹಸಿ ಹಾಲನ್ನು ಈ ರೀತಿ ಮುಖಕ್ಕೆ ಹಚ್ಚಿ! title=
ಸ್ಕಿನ್‌ ಗ್ಲೋ

ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಯ ಆರೈಕೆಗೆ ಹಸಿ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಸಿ ಹಾಲನ್ನು ಬಳಸಲು ನೀವು ಕಷ್ಟಪಡಬೇಕಾಗಿಲ್ಲ. ಇದು ತ್ವಚೆಗೆ ಉತ್ತಮವಾದ ಮನೆಮದ್ದು ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಸಹ ಕಡಿಮೆಯಾಗುತ್ತದೆ. 

ಇದನ್ನೂ ಓದಿ: ಬೇಸಿಗೆಯಲ್ಲಿ ಈ ಒಂದು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ!

ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲು ವಿಟಮಿನ್, ಬಯೋಟಿನ್, ಲ್ಯಾಕ್ಟಿಕ್ ಆಮ್ಲ, ಮೆಗ್ನೀಸಿಯಮ್, ಪ್ರೋಟೀನ್ ಗಳಿಂದ ಸಮೃದ್ಧವಾಗಿದೆ. ವಿಶೇಷವೆಂದರೆ ಆರೋಗ್ಯಕ್ಕೆ ಹಾಲು ಮಾತ್ರವಲ್ಲ, ತ್ವಚೆಯ ರಕ್ಷಣಗೂ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಹೊಳೆಯುವ ತ್ವಚೆಗೆ ಹಸಿ ಹಾಲು ತುಂಬಾ ಪ್ರಯೋಜನಕಾರಿ. ಹಸಿ ಹಾಲನ್ನು ಹಚ್ಚುವುದರಿಂದ ಸುಕ್ಕುಗಳು ಮತ್ತು ಕಪ್ಪು ಕಲೆಗಳಿಂದ ಮುಕ್ತಿ ಪಡೆಯಬಹುದು.

ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು:

ಮುಖದ ಕಾಂತಿಯನ್ನು ಹೆಚ್ಚಿಸಲು, ನೀವು ಹಸಿ ಹಾಲನ್ನು ಮುಖಕ್ಕೆ ಹಚ್ಚಬಹುದು. ಇದು ಮುಖದ ಮೇಲಿನ ಡೆಡ್ ಸ್ಕಿನ್ ಅನ್ನು ಹೋಗಲಾಡಿಸುವುದರ ಜೊತೆಗೆ ಹೊಳಪನ್ನು ನೀಡುತ್ತದೆ. ಪ್ರತಿದಿನ ಹಸಿ ಹಾಲನ್ನು ಮುಖಕ್ಕೆ ಹಚ್ಚಬೇಕು. 

ತ್ವಚೆಯನ್ನು ಹೈಡ್ರೇಟ್ ಮಾಡಲು ಹಸಿ ಹಾಲು ಕೂಡ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ತ್ವಚೆಗೆ ತಾಜಾತನವನ್ನು ನೀಡುತ್ತದೆ. ಇದಲ್ಲದೆ, ಚರ್ಮವು ಯಾವಾಗಲೂ ಹೊಳೆಯುತ್ತಿರುತ್ತದೆ. ನಿಮ್ಮ ಮುಖದ ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸಲು ನೀವು ಬಯಸಿದರೆ, ಹಸಿ ಹಾಲನ್ನು ನಿಮ್ಮ ಮುಖಕ್ಕೆ ಇಂದೇ ಹಚ್ಚಿ.

ಇದನ್ನೂ ಓದಿ: ನಿಮಗೆ BP ಸಮಸ್ಯೆ ಇದೆಯಾ? ಹಾಗಿದ್ರೆ ಸೌತೆಕಾಯಿ ಜ್ಯೂಸ್ ಕುಡಿಯಿರಿ!

ಹಾಲಿನಲ್ಲಿರುವ ವಿಟಮಿನ್ ಎ ಮತ್ತು ಬಿ ಆ್ಯಂಟಿ ಏಜಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ. ನೀವು ಹಾಲಿನ ಮಸಾಜ್ ಮಾಡಿದರೆ, ಮುಖದ ಮೇಲಿನ ಸುಕ್ಕುಗಳು ದೂರವಾಗುತ್ತವೆ. ಆದ್ದರಿಂದ ಇಂದೇ ಹಸಿ ಹಾಲನ್ನು ಬಳಸಿ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News