Plastic in Lungs: ಮಾನವನ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್, ಹೊಸ ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

Plastic In Lungs - ಸಾಮಾನ್ಯವಾಗಿ ಮನುಷ್ಯರು ಫಿಟ್ ಆಗಿರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಜೀವನಶೈಲಿ ಮತ್ತು ಹೊರಗಿನ ವಾತಾವರಣದಿಂದಾಗಿ ಅನೇಕ ಸವಾಲುಗಳು ಎದುರಾಗುತ್ತಿವೆ. ಇದೀಗ ಇತ್ತೀಚಿನ ಸಂಶೋಧನೆಯಲ್ಲಿ ಮಾನವನ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ.  

Written by - Nitin Tabib | Last Updated : Apr 11, 2022, 09:00 PM IST
  • ಮನುಷ್ಯನ ಶ್ವಾಸಕೋಶ ತಲುಪಿದ ಪ್ಲಾಸ್ಟಿಕ್
  • ಶೇ.1ರಷ್ಟು ಜನರು ಮಾತ್ರ ಶುದ್ಧ ಗಾಳಿ ಪಡೆಯುತ್ತಾರೆ
  • ಪ್ಲಾಸ್ಟಿಕ್ ದೇಹವನ್ನು ಹೇಗೆ ಪ್ರವೇಶಿಸಿತು?
Plastic in Lungs: ಮಾನವನ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್, ಹೊಸ ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ title=
Plastic in Lungs

ನವದೆಹಲಿ: Plastic Particles Found In Lungs - ಇಂದಿನ ಕಾಲದಲ್ಲಿ ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ನೀರು ಕುಡಿಯುವುದಾಗಲಿ, ಮಾರುಕಟ್ಟೆಯಿಂದ ಸರಕುಗಳನ್ನು ತರುವುದಾಗಲಿ, ಮನೆಯೇ ಆಗಿರಲಿ ಅಥವಾ ಕಚೇರಿಯೇ ಆಗಿರಲಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ದರಬಾರು. ಆದರೆ ಈ ಪ್ಲಾಸ್ಟಿಕ್ ನಮ್ಮ ದೇಹದಲ್ಲಿಯೂ ಇದೀಗ ಸ್ಥಾನ ಪಡೆದಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಬ್ರಿಟನ್ ನ ಹಲ್ ವಿಶ್ವವಿದ್ಯಾನಿಲಯ ನಡೆಸಿದ ಒಂದು ಸಂಶೋಧನೆಯಲ್ಲಿ ಈ ಆಶ್ಚರ್ಯಕರ ಅಂಶ ಬಹಿರಂಗವಾಗಿದೆ.ಈ ಪ್ಲಾಸ್ಟಿಕ್ ನಮ್ಮ ದೇಹ ಅಷ್ಟೇ ಅಲ್ಲ, ನಮ್ಮ ಶ್ವಾಸಕೋಶಕ್ಕೂ ತಲುಪಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇಡೀ ಸಂಶೋಧನೆ ಏನನ್ನು ಹೇಳಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಶೇ.1ರಷ್ಟು ಅದೃಷ್ಟವನ್ತರಿಗೆ ಶುದ್ಧ ಗಾಳಿ ಸಿಗುತ್ತಿದೆ
ಇಂದು ಇಡೀ ಜಗತ್ತು ಸಲೀಸಾಗಿ ಮಾತ್ರವಲ್ಲದೆ ಶುದ್ಧ ಗಾಳಿಯನ್ನು ಉಸಿರಾಡಲು ಸಹ ಹೆಣಗಾಡುತ್ತಿದೆ. ಗಾಳಿ ವಿಷಕಾರಿಯಾಗಿದೆ ಮತ್ತು ಉಸಿರಾಟದ ಮೂಲಕ ನಿಧಾನವಾಗಿ ಈ ವಿಷ ಪ್ರಾಷಣ ಮಾಡುವುದು ನಮ್ಮ ಕೆಲಸವಾಗಿ ಬಿಟ್ಟಿದೆ. WHO ಪ್ರಕಾರ, ಇಡೀ ಪ್ರಪಂಚದಲ್ಲಿ ಕೇವಲ ಶೇ.1 ರಷ್ಟು ಜನರು ಮಾತ್ರ ಶುದ್ಧ ಗಾಳಿಯನ್ನು ಉಸಿರಾಡಲು ಸಮರ್ಥರಾಗಿದ್ದಾರೆ ಎನ್ನಲಾಗಿದೆ. ಅಂದರೆ, ವಿಶ್ವದ ಶೇ.99 ರಷ್ಟು ಜನರಿಗೆ ಉಸಿರಾಡಲು ತಾಜಾ ಮತ್ತು ಶುದ್ಧ ಗಾಳಿ ಸಿಗುತ್ತಿಲ್ಲ ಎಂದರ್ಥ.

ಆದರೆ ಈ ವಿಷದಲ್ಲಿಯೂ ಒಂದು ಅಪಾಯಕಾರಿ ವಿಷವಿದ್ದು, ಅದಕ್ಕೆ ಪರಿಹಾರ ಯಾರ ಬಳಿಯೂ ಕೂಡ ಇಲ್ಲ. ವಾಸ್ತವದಲ್ಲಿ, ಸಂಶೋಧನೆಯ ಸಮಯದಲ್ಲಿ, ಮೊದಲ ಬಾರಿಗೆ ಪ್ಲಾಸ್ಟಿಕ್ ಕಣಗಳು ಮಾನವನ ಶ್ವಾಸಕೋಶದಲ್ಲಿ ಕಂಡುಬಂದಿವೆ. UKಯ ಹಲ್ ವಿಶ್ವವಿದ್ಯಾನಿಲಯದ ಸಂಶೋಧನೆಯು ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಪ್ಲಾಸ್ಟಿಕ್ ಶ್ವಾಸಕೋಶದಲ್ಲಿ ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ. ಅದು ಗಾಳಿಯಲ್ಲಿ ಕರಗಿ ನಮ್ಮ ದೇಹವನ್ನು ಸೇರುತ್ತಿದೆ ಎಂದು ಸಂಶೋಧನೆ ಹೇಳಿದೆ.

ಶ್ವಾಸಕೋಶದಲ್ಲಿ ಕಂಡು ಬಂದ ಪ್ಲಾಸ್ಟಿಕ್ ಕಣಗಳು
ಶ್ವಾಸಕೋಶದ ಸೋಂಕಿನ ಹಿನ್ನೆಲೆ ಚಿಕಿತ್ಸೆಗಾಗಿ ಬ್ರಿಟನ್‌ನಿಂದ 13 ಜನರು ಆಸ್ಪತ್ರೆಗೆ ತಲುಪಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಅವರೆಲ್ಲರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಾಗಿತ್ತು. ಆದರೆ ನಂತರ ಅನುಮಾನಗೊಂಡ ವಿಜ್ಞಾನಿಗಳು ಪ್ರತಿಯೊಬ್ಬರ ಶ್ವಾಸಕೋಶದ ಅಂಗಾಂಶವನ್ನು ಪರೀಕ್ಷೆಗೆ ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಮಾದರಿಗಳನ್ನು ಪರಿಶೀಲಿಸಿದಾಗ, ವಿಜ್ಞಾನಿಗಳಿಗೂ ಕೂಡ ಆಶ್ಚರ್ಯ ಕಾದಿತ್ತು. ಈ 13 ಜನರ ಪೈಕಿ 11 ಜನರ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.

ಅಧ್ಯಯನದ ಪ್ರಕಾರ, 11 ಜನರ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಅವುಗಳಲ್ಲಿ ಹೆಚ್ಚಿನ ಪ್ರಮಾಣವು ಪಾಲಿಪ್ರೊಪಿಲೀನ್ ಆಗಿದೆ. ಇದೇ ಪ್ಲಾಸ್ಟಿಕ್‌ನಿಂದ ಪಾಲಿಬ್ಯಾಗ್‌ಗಳನ್ನು ಅಂದರೆ ತೆಳುವಾದ ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸಲಾಗುತ್ತದೆ. ಶೇ.23 ರಷ್ಟು ಜನರ ಶ್ವಾಸಕೋಶದಲ್ಲಿ ಈ ಪ್ಲಾಸ್ಟಿಕ್ ಕಂಡುಬಂದಿದೆ. ಎರಡನೇ ಸ್ಥಾನದಲ್ಲಿ PTE ಅಂದರೆ, ನೀರಿನ ಬಾಟಲಿಗಳ ತಯಾರಿಕೆಗೆ ಬಳಸಲಾಗುವ ಪ್ಲಾಸ್ಟಿಕ್ ಕಂಡುಬಂದಿದೆ. ಇದು ಶೇ. 18ರಷ್ಟು ಪ್ರಕರಣಗಳಲ್ಲಿ ಕಂಡುಬಂದಿದೆ, ಮೂರನೇ ಸ್ಥಾನದಲ್ಲಿ ರೆಜಿಲ್ ಪ್ಲಾಸ್ಟಿಕ್ ಇದ್ದು, ಅದು, ಶೇ.15 ರಷ್ಟು ಶ್ವಾಸಕೋಶಗಳಲ್ಲಿ ಕಂಡುಬಂದಿದೆ.ಇದೆ ರೀತಿ 16 ವಿವಿಧ ರೀತಿಯ ಪ್ಲಾಸ್ಟಿಕ್‌ಗಳು ಮಾನವನ ಶ್ವಾಸಕೋಶದಲ್ಲಿ ಕಂಡುಬಂದಿವೆ.

ರಕ್ತದಲ್ಲಿ ಪ್ಲಾಸ್ಟಿಕ್ನ ದೃಢೀಕರಣ
ಮಾನವರ ರಕ್ತದಲ್ಲಿ ಪ್ಲಾಸ್ಟಿಕ್ ದೊರೆತ ಸಂಗತಿ ನಮಗೆ ಈಗಾಗಲೇ ತಿಳಿದಿದೆ. ನೆದರ್ಲೆಂಡ್ಸ್‌ನ ವಿಶ್ವವಿದ್ಯಾನಿಲಯದ ವರದಿಯಲ್ಲಿ, ಶೇ.80 ಮಾನವರ ರಕ್ತದಲ್ಲಿ ಪ್ಲಾಸ್ಟಿಕ್ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇದಕ್ಕಾಗಿ ವಿಜ್ಞಾನಿಗಳು 22 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ 17 ಜನರ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಅಂದರೆ ಶೇ.80ರಷ್ಟು ಜನರ ರಕ್ತದಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.

ದೇಹಕ್ಕೆ ಹೇಗೆ ಪ್ರವೇಶ ಪಡೆಯುತ್ತದೆ?
ಈ ಹೊಸ ಸಂಶೋಧನೆಯ ನಂತರ, ಈ ಪ್ಲಾಸ್ಟಿಕ್ ಮೊದಲು ಗಾಳಿಯಲ್ಲಿ ಕರಗಿ ಉಸಿರಾಟದ ಮೂಲಕ ಜನರ ಶ್ವಾಸಕೋಶವನ್ನು ತಲುಪಿ ನಂತರೆ ಅಲ್ಲಿಂದ ಅದು ಅವರ ರಕ್ತವನ್ನು ತಲುಪುತ್ತದೆ ಎಂಬುದು ದೊಡ್ಡ ಪ್ರಮಾಣದಲ್ಲಿ ಸ್ಪಷ್ಟವಾಗಿದೆ. ತಜ್ಞರ ಪ್ರಕಾರ, ಪ್ಲಾಸ್ಟಿಕ್ ಮಾನವ ದೇಹವನ್ನು ಪ್ರವೇಶಿಸುವ ಇದು ಏಕೈಕ ಮಾರ್ಗವಲ್ಲ ಎನ್ನಲಾಗಿದೆ. ಮೀನು ಅಥವಾ ಪ್ರಾಣಿಗಳ ಹೊಟ್ಟೆಯಲ್ಲಿರುವ ಪ್ಲಾಸ್ಟಿಕ್ ಮಾಂಸಾಹಾರಿ ಆಹಾರದೊಂದಿಗೆ ದೇಹದ ಒಳಗೂ ಸೇರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

ವಾಸ್ತವದಲ್ಲಿ, ಇಂದು ಪ್ಲಾಸ್ಟಿಕ್ ಜನರ ಜೀವನದ ಒಂದು ಭಾಗವಾಗಿದೆ. ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳಿಂದ ಹಿಡಿದು, ಔಷಧಗಳು, ಬಟ್ಟೆಗಳು ಹಾಗೂ ನೀರು ಕುಡಿಯಲು ಪ್ಲಾಸ್ಟಿಕ್ ಬಳಕೆ ಮಾಡುತ್ತೇವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನದ್ದೇ ದರಬಾರು ಇದೆ. ಪ್ಲಾಸ್ಟಿಕ್ ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಆದಾಗ್ಯೂ, ನಮ್ಮ ಎಚ್ಚರಿಕೆ ನಮಗೆ ಅಪಾಯದಿಂದ ರಕ್ಷಿಸಲಿದೆ. ಪ್ಲಾಸ್ಟಿಕ್ ದೇಹವನ್ನು ತಲುಪದಂತೆ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ-Viral Video: ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಬಾಯ್ ಫ್ರೆಂಡ್ ಗೆ ಕಿಸ್ ಮಾಡಲು ಮುಂದಾದ ಯುವತಿ

ಬಚಾವಾಗಲು ಈ ಕೆಲಸ ಮಾಡಿ
ಇದಕ್ಕಾಗಿ ಮೊದಲು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿಯಾದ ಆಹಾರವನ್ನು ಸೇವಿಸಬೇಡಿ. ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಪಾತ್ರೆಗಳನ್ನು ಬಳಸಬೇಕು. ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ಕುಡಿಯುವ ಬದಲು ಕುಲ್ಹಡ್ ಬಳಸಿ. ಪ್ಲಾಸ್ಟಿಕ್ ವಸ್ತುಗಳು ಮತ್ತು ಕಸವನ್ನು ಎಂದಿಗೂ ತೆರೆದ ಸ್ಥಳದಲ್ಲಿ ಎಸೆಯಬೇಡಿ. ನೀವು ನೀರು ಕುಡಿಯಲು ಬಯಸಿದರೆ, ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ತಾಮ್ರ, ಸ್ಟೀಲ್ ಅಥವಾ ಗಾಜಿನ ಬಾಟಲಿಗಳನ್ನು ಬಳಸಿ. ಏಕೆಂದರೆ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಪ್ಲಾಸ್ಟಿಕ್‌ನ ಈ ಮಾರಣಾಂತಿಕ ಅಪಾಯದಿಂದ ದೂರಾಗಿ, ಆರೋಗ್ಯವಂತರಾಗಿರಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News