IPL ಮಾಧ್ಯಮ ಹಕ್ಕಿಗಾಗಿ ಪ್ರತ್ಯೇಕ ಬಿಡ್ಡಿಂಗ್ : ಬಿಸಿಸಿಐನ ನೂತನ ಪ್ಲ್ಯಾನ್‌

ಮುಂಬರುವ ಐಪಿಎಲ್‌ ಕ್ರಿಕೆಟ್‌ ಸೀಸನ್‌ಗಾಗಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದೆ. ಬಹುಕೋಟಿ ಹರಾಜು ಪ್ರಕ್ರಿಯೆ ಬಹುತೇಕ ಜೂನ್ -ಜುಲೈ ತಿಂಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಪ್ರತಿಷ್ಠಿತ ಟೆಕ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಹರಾಜು ಪ್ರಕ್ರಿಯೆ ಭಾಗವಹಿಸಲಿವೆ ಎನ್ನಲಾಗಿದೆ.

Written by - Zee Kannada News Desk | Last Updated : Apr 7, 2022, 09:22 AM IST
  • IPL ಮಾಧ್ಯಮ ಹಕ್ಕಿಗಾಗಿ ಪ್ರತ್ಯೇಕ ಬಿಡ್ಡಿಂಗ್
  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಮತ್ತೊಂದು ಹರಾಜು ಪ್ರಕ್ರಿಯೆ
  • ಅತಿದೊಡ್ಡ ಟೆಕ್ ಕಂಪನಿಗಳು, ಮಾಧ್ಯಮ ಕಂಪನಿಗಳನ್ನು ಸೆಳೆಯಲು ನೂತನ ತಂತ್ರ
IPL ಮಾಧ್ಯಮ ಹಕ್ಕಿಗಾಗಿ ಪ್ರತ್ಯೇಕ ಬಿಡ್ಡಿಂಗ್ : ಬಿಸಿಸಿಐನ ನೂತನ ಪ್ಲ್ಯಾನ್‌ title=
BCCI

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL)15ನೇ ಆವೃತಿಯ ಪಂದ್ಯಗಳು ಈಗಾಗಲೇ ನಡೆಯುತ್ತಿದೆ. ಇನ್ನು ಈ ಯಶಸ್ಸಿನ ಸಂಭ್ರಮದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಮತ್ತೊಂದು ಹರಾಜು ಪ್ರಕ್ರಿಯೆಗೆ ಸಜ್ಜಾಗುತ್ತಿದೆ.  ಐಪಿಎಲ್‌ನ ಮಾಧ್ಯಮ ಹಕ್ಕಿಗಾಗಿ ಪ್ರತ್ಯೇಕ ಬಿಡ್ಡಿಂಗ್ ಕಾರ್ಯತಂತ್ರ ಅನುಸರಿಸುತ್ತಿದೆ. ಈ ಮೂಲಕ ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳು, ಮಾಧ್ಯಮ ಕಂಪನಿಗಳನ್ನು ಐಪಿಎಲ್‌ನತ್ತ ಸೆಳೆಯುವಂತೆ ಮಾಡುತ್ತಿದೆ. 

ಇದನ್ನೂ ಓದಿ: Kolkata vs Mumbai: ಮಿಂಚಿದ ಕಮಿನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಐದು ವಿಕೆಟ್ ಗಳ ಜಯ

ಮುಂಬರುವ ಐಪಿಎಲ್‌ ಕ್ರಿಕೆಟ್‌ ಸೀಸನ್‌ಗಾಗಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದೆ. ಬಹುಕೋಟಿ ಹರಾಜು ಪ್ರಕ್ರಿಯೆ ಬಹುತೇಕ ಜೂನ್ -ಜುಲೈ ತಿಂಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಪ್ರತಿಷ್ಠಿತ ಟೆಕ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಹರಾಜು ಪ್ರಕ್ರಿಯೆ ಭಾಗವಹಿಸಲಿವೆ ಎನ್ನಲಾಗಿದೆ.

ಟೆಕ್ ಲೋಕದ ದಿಗ್ಗಜರಾದ ಅಮೆಜಾನ್, ಫೇಸ್ ಬುಕ್, ಆಪಲ್, ನೆಟ್ ಫ್ಲಿಕ್ ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಲ್ಲದೆ, ಮಾಧ್ಯಮ ಸಂಸ್ಥೆಗಳಾದ ಡಿಸ್ನಿ, ಜೀ-ಸೋನಿ, ಅಮೆಜಾನ್ ಪ್ರೈಂ, ಟಿವಿ 18 ವಯಾಕಾಂ ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: NEET-UG: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಯುಜಿ 2022ರ ಪರೀಕ್ಷಾ ದಿನಾಂಕ ಪ್ರಕಟ

ಪ್ರತ್ಯೇಕ ಬಿಡ್ಡಿಂಗ್‌: 
ಟಿವಿ ಪ್ರಸಾರ, ಡಿಜಿಟಲ್, ಉದ್ಘಾಟನಾ ಪಂದ್ಯ, ಪ್ಲೇ ಆಫ್, ಉದ್ಘಾಟನಾ ಸಮಾರಂಭ, ವಿದೇಶದಲ್ಲಿ ಪ್ರಸಾರ ಹಕ್ಕು ಹೀಗೆ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಎಲ್ಲದ್ದಕ್ಕೂ ಪ್ರತ್ಯೇಕ ಬಿಡ್ಡಿಂಗ್ ಮೊತ್ತ ನಿಗದಿಯಾಗಿದೆ. ಇನ್ನು ಸಂಸ್ಥೆಗಳು ಪ್ರತ್ಯೇಕವಾಗಿ ಬಿಡ್ ಸಲ್ಲಿಸಬೇಕಾಗುತ್ತದೆ. 

ಟಿವಿ ಪ್ರಸಾರ ಬಿಡ್ ಹಾಗೂ ಡಿಜಿಟಲ್ ಬಿಡ್ ಎಂಬ ಎರಡು ಪ್ಯಾಕೇಜ್ ಇದ್ದು, ಟಿವಿ ಪ್ರಸಾರ ಬಿಡ್ 2023-2027ನೇ ಸಾಲಿನಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರದ ಹಕ್ಕು ಮಾರಾಟಕ್ಕೆ ಹರಾಜು ನಡೆಸಲಾಗುತ್ತದೆ. ಬಿಸಿಸಿಐ ಇದಕ್ಕಾಗಿ ಮೂಲಬೆಲೆ 16347.5 ಕೋಟಿ ರೂ.ನಿಂದ 18,130 ಕೋಟಿ ರೂ. ಎಂದು ನಿಗದಿಪಡಿಸಿದೆ. ಹಾಲಿ ಮೂಲ ಬೆಲೆಗೆ ಹೋಲಿಸಿದರೆ ಶೇ 300ರಷ್ಟು ದರ ಏರಿಕೆಯಾಗಲಿದೆ. ಒಟ್ಟಾರೆ ಟಿವಿ ಪ್ರಸಾರ ಹಕ್ಕು ಮೂಲ ಬೆಲೆ 32, 890 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಡಿಜಿಟಲ್ ಹಕ್ಕು 18 ಪ್ರೀಮಿಯರ್ ಪಂದ್ಯಗಳನ್ನು ಒಳಗೊಂಡಿದ್ದು, ಪ್ಲೇ ಆಫ್ ಪಂದ್ಯಗಳು ಸೇರಿವೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಕಳೆದ 14 ಆವೃತ್ತಿಗೆ ಹೋಲಿಸಿದರೆ ಮುಂದಿನ ಬಾರಿ ಐಪಿಎಲ್ ಮಾಧ್ಯಮ ಹಕ್ಕು ಭರ್ಜರಿ ಬೆಲೆ ಪಡೆದುಕೊಳ್ಳಲಿದೆ. 10 ತಂಡಗಳು ಐಪಿಎಲ್ 2022ರಲ್ಲಿ ಆಟವಾಡುತ್ತಿದ್ದು, ಸದ್ಯ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರದ ಹಕ್ಕನ್ನು ಹೊಂದಿದೆ. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News