ನಾಗಪುರ: ಇಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರ್ ಎಸ್ ಎಸ್ ಗೆ ಯಾರು ಕೂಡ ಹೊರಗಿನವರಲ್ಲ ಎಂದು ತಿಳಿಸಿದರು.
ಮೋಹನ್ ಭಾಗವತ್ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಾವೆಲ್ಲಾ ಒಂದು ಎನ್ನುವುದೇ ನಮ್ಮ ದೃಷ್ಟಿಕೋನ ಇದು ಕೆಲವರಿಗೆ ಅರ್ಥವಾದರೆ ಇನ್ನು ಕೆಲವರಿಗೆ ಇದು ಅರ್ಥವಾಗುದಿಲ್ಲ, ಹಲವರಿಗೆ ಇದು ಅರ್ಥವಾಗುವುದು ಬೇಕಾಗಿಲ್ಲ ಎಂದು ಅವರು ತಿಳಿಸಿದರು. ಸಂಘಕ್ಕೆ ಇಡೀ ಸಮಾಜವನ್ನು ಒಂದು ಗೂಡಿಸಬೇಕಾಗಿದೆ ಆದ್ದರಿಂದ ಆರ್ ಎಸ್ ಎಸ್ ಗೆ ಯಾರು ಕೂಡ ಹೊರಗಿನವರಲ್ಲ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿರುವ ಹಲವು ಸಿದ್ದಾಂತಗಳ ಮೂಲ ಉದ್ದೇಶವಿಷ್ಟೇ ದೇಶವನ್ನು ಮುಂದಕ್ಕೆ ತೆಗದುಕೊಂಡು ಹೋಗುವುದು ಮತ್ತು ಅದರ ಭವಿಷ್ಯವನ್ನು ಹಸನಗೊಳಿಸುವುದು ಎಂದು ತಿಳಿಸಿದರು.