Big B Tweet ಗೆ ಕನ್ಫ್ಯೂಸ್ ಆದ ಅಭಿಮಾನಿಗಳು Amitabh Bachchan ಗೆ ಹೇಳಿದ್ದೇನು ಗೊತ್ತಾ?

Big B ಅವರ ಬ್ಲಾಗ್ ಪರೀಶೀಲಿಸದೆಯೇ ಸಾಮಾಜಿಕ ಮಾಧ್ಯಮಗಲ್ಲಿ ಅವರ ಆರೋಗ್ಯ ಹದಗೆಟ್ಟಿರುವ ಸುದ್ದಿಗಳು ಭಾರಿ ವೈರಲ್ ಆಗತೊಡಗಿವೆ,  

Written by - Nitin Tabib | Last Updated : Feb 28, 2022, 07:27 PM IST
  • ಬಿಗ್ ಬಿ ಟ್ವೀಟ್ ನಿಂದ ಆತಂಕಕ್ಕೆ ಒಳಗಾದ ಅಭಿಮಾನಿಗಳು.
  • ಅಭಿಮಾನಿಗಳಿಂದ ಬಂದ Get Well Soon, Take Care ಸಂದೇಶಗಳು
  • ನಂತರ ಬ್ಲಾಗ್ ಮೂಲಕ ಸ್ಪಷ್ಟೀಕರಣ ನೀಡಿದ ಅಭಿಮಾನಿಗಳು
Big B Tweet ಗೆ ಕನ್ಫ್ಯೂಸ್ ಆದ ಅಭಿಮಾನಿಗಳು Amitabh Bachchan ಗೆ ಹೇಳಿದ್ದೇನು ಗೊತ್ತಾ? title=
Amitabh Bachchan Cryptic Post (File Photo)

Amitabh Bachchan Cryptic Post: ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ (Social Media) ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಗಳಲ್ಲಿ ಒಬ್ಬರು. ಅವರೇ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ತಮ್ಮ ಪೋಸ್ಟ್‌ಗಳ ಮೂಲಕ ತಮ್ಮ ಬಗ್ಗೆ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ಸ್ ನೀಡುತ್ತಲೇ ಇರುತ್ತಾರೆ. ಭಾನುವಾರ ರಾತ್ರಿ ಅಮಿತಾಭ್ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ. ಅಭಿಮಾನಿಗಳ ಗಾಬರಿಯನ್ನು ನೋಡಿದ ಅವರು ತಮ್ಮ ಬ್ಲಾಗ್‌ನಲ್ಲಿ ತಮ್ಮ ಪೋಸ್ಟ್ ನ ಅರ್ಥವನ್ನು ವಿವರಿಸಿದ್ದಾರೆ.

ಭಾನುವಾರ ಈ ಕುರಿತು ಬರೆದುಕೊಂಡ ಅಮಿತಾಭ್, 'ಹೃದಯ ಮಿಡಿಯುತ್ತಿದೆ, ಚಿಂತೆಗೀಡಾಗಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂದು ಪ್ರಾರ್ಥಿಸುತ್ತೇನೆ ಲವ್'. ಬಿಗ್ ಬಿ ಅವರ ಈ ಟ್ವೀಟ್‌ಗೆ (Amitabh Bachchan Twitter)  ಅಭಿಮಾನಿಗಳು ಅವರಿಗೆ 'ಗೆಟ್ ವೆಲ್ ಸೂನ್' ಮತ್ತು 'ಟೇಕ್ ಕೇರ್' ಎಂಬ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ. ಇದಾದ ನಂತರ ಬಿಗ್ ಬಿ ಬ್ಲಾಗ್ (Amitabh Bachchan Blog) ಮೂಲಕ ಇಡೀ ಘಟನೆಯನ್ನು ಹೇಳಿದ್ದು, ತಮ್ಮ ಪೋಸ್ಟ್‌ನ ಅರ್ಥವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-Puneeth Rajkumar: ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ

"ಸಾಲುಗಳನ್ನು ಕಲಿಯುವ ಒತ್ತಡ ಮತ್ತು ಅಭಿನಯವು ಸರಿ ಅಥವಾ ಕನಿಷ್ಠ ಸ್ವೀಕಾರಾರ್ಹ ಎಂಬ ಭಯದ ಪರೀಕ್ಷೆಯಾಗಿದೆ, ಆದರೆ ನಿಜವಾದ ಪರೀಕ್ಷೆಯು ಮಡ್ ಐಲ್ಯಾಂಡ್‌ನಿಂದ ಮನೆಗೆ ತಲುಪುವುದಾಗಿತ್ತು. ಸಂಜೆ 5:30ಕ್ಕೆ ಕೆಲಸ ಮುಗಿಸಿ ಹೊರಟು ರಾತ್ರಿ 8.30ಕ್ಕೆ ಜಲ್ಸಾ ತಲುಪಿದೆ' ಎಂದು ಅಮಿತಾಭ್ ವಿವರಣೆಯನ್ನು ನೀಡಿದ್ದಾರೆ.

ಇದನ್ನೂ ಓದಿ-ಸಿಂಪಲ್‌ ಸುನಿ ಹೊಸ ಸಿನಿಮಾ 'ಗತವೈಭವ'.. ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ ಟೀಸರ್‌!

ಬಿಗ್ ಬಿ ಅವರ ಬ್ಲಾಗ್ ಅನ್ನು ಪರಿಶೀಲಿಸದೆಯೇ, ಅವರ ಅನಾರೋಗ್ಯದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ನೀವೂ ಕೂಡ ಅಮಿತಾಭ್ ಅವರ ಅನಾರೋಗ್ಯದ ಯಾವುದೇ ಸುದ್ದಿಯನ್ನು ನೋಡಿದ್ದರೆ, ಚಿಂತಿಸಬೇಡಿ, ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದಾರೆ ಮತ್ತು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. 

ಇದನ್ನೂ ಓದಿ-ಗುಪ್ತವಾಗಿ ಮದುವೆಯಾದರೇ ಸಲ್ಮಾನ್ ಖಾನ್? ಈ ಫೋಟೋ ಹೇಳುವುದಾದರೂ ಏನು ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News