ನವಿಲುಕೋಸಿನ ಎಲೆಗಳಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಕೂಡ ಇದೆ. ನವಿಲುಕೋಸು ಸೇವಿಸುವುದರಿಂದ ದೊರೆಯುವ 5 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ನಾವು ಸಾಮಾನ್ಯವಾಗಿ ಟರ್ನಿಪ್ ಅಥವಾ ನವಿಲುಕೋಸನ್ನು ಸೇವಿಸಲು ಇಷ್ಟಪಡುವುದಿಲ್ಲ. ಆದರೆ ಇದು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ವಿಟಮಿನ್-ಸಿ ಮತ್ತು ವಿಟಮಿನ್-ಕೆ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ನವಿಲುಕೋಸಿನ ಎಲೆಗಳಲ್ಲಿ(Health Benefits of Turnips)ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಕೂಡ ಇದೆ. ನವಿಲುಕೋಸು ಸೇವಿಸುವುದರಿಂದ ದೊರೆಯುವ 5 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನವಿಲುಕೋಸು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಸ್ನಾಯುಗಳಿಗೂ ಒಳ್ಳೆಯದು. ಕಚ್ಚಾ ನವಿಲುಕೋಸನ್ನು ಅಗಿಯುವುದರಿಂದ ಹಲ್ಲುಗಳು ಸುಂದರ ಮತ್ತು ಬಲವಾಗಿರುತ್ತವೆ.
ನವಿಲುಕೋಸು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಕಣ್ಣುಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳೂ ದೂರವಾಗುತ್ತವೆ. ಏಕೆಂದರೆ ಇದರಲ್ಲಿ ವಿಟಮಿನ್ A ಇದೆ. ಕಣ್ಣಿನ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.
ನವಿಲುಕೋಸು ಬೊಜ್ಜಿನ ಅಪಾಯವನ್ನು ಉಂಟುಮಾಡುವುದಿಲ್ಲ, ಏಕೆಂದರೆ ಇದು ಅತ್ಯಲ್ಪ ಕೊಬ್ಬನ್ನು ಹೊಂದಿರುತ್ತದೆ. ಟರ್ನಿಪ್ ಕ್ಯಾನ್ಸರ್ ವಿರುದ್ಧವೂ ರಕ್ಷಿಸುತ್ತದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳನ್ನೂ ಗುಣಪಡಿಸುತ್ತದೆ. ನವಿಲುಕೋಸು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ, ಇದು ದೇಹದಿಂದ ಎಲ್ಲಾ ಹಾನಿಕಾರಕ ವಸ್ತುಗಳನ್ನು ಹೊರಹಾಕುತ್ತದೆ.
ಹವಾಮಾನ ಬದಲಾದ ತಕ್ಷಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಶೀತ ಮತ್ತು ಕೆಮ್ಮು ಉಂಟಾಗುತ್ತದೆ. ಕೆಮ್ಮಿನ ಸಮಸ್ಯೆಗೆ ಕತ್ತರಿಸಿದ ನವಿಲುಕೋಸನ್ನು ತೆಗೆದುಕೊಂಡು ಅದನ್ನು ಹುರಿಯಬೇಕು. ಅದಕ್ಕೆ ಉಪ್ಪು ಸೇರಿಸಿ ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ. ನಿಮ್ಮ ಜೀವನಶೈಲಿ ಅಸಮತೋಲಿತವಾಗಿದ್ದರೆ ಮತ್ತು ಈ ಕಾರಣದಿಂದ ನೀವು ಏನು ತಿಂದರೂ ಜೀರ್ಣವಾಗುವುದಿಲ್ಲ. ಶುಂಠಿಯೊಂದಿಗೆ ನವಿಲುಕೋಸನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚಾಗುತ್ತದೆ.
ನೀವು ಹೆಚ್ಚು ಮಸಾಲೆಯುಕ್ತ ಮತ್ತು ಕಟುವಾದ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದರೆ ಆಗ ಪೈಲ್ಸ್ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಆಗ ಮನೆಮದ್ದಾಗಿ ನವಿಲುಕೋಸು ನಿಮಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ನವಿಲುಕೋಸಿನ ಎಲೆಗಳಿಂದ ಅಡುಗೆ ಮಾಡಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗಿರುತ್ತದೆ.