ಕೋಪದ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ ಈ ಮೂರು ಆಹಾರ

ನಾವು ನಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಮಂದಿಯನ್ನು ನೋಡುತ್ತೇವೆ. ವಿನಾ ಕಾರಣ ಅವರಿಗೆ ಕೋಪ ಬರುತ್ತದೆ. ಅವರ ಮುಂದೆ ನಿಂತು ಏನು ಮಾತನಾಡಿದರೂ ಕಷ್ಟವೇ.  ನಿಮಗೂ ಇಂಥಹ ಸಮಸ್ಯೆ ಇದ್ದರೆ ಕೋಪವನ್ನು ನಿಯಂತ್ರಿಸುವುದು ಹೇಗೆ?

Written by - Ranjitha R K | Last Updated : Feb 9, 2022, 10:42 AM IST
  • ಕೆಲವರಿಗೆ ಬಹಳ ಬೇಗ ಕೋಪ ಬರುತ್ತದೆ
  • ಕೋಪ ನಿಯಂತ್ರಣಕ್ಕೆ ಈ ಮೂರೂ ಆಹಾರದಿಂದ ದೂರವಿರಿ
  • ಆರೋಗ್ಯಕರ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಿ
ಕೋಪದ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ ಈ ಮೂರು ಆಹಾರ  title=
ಕೋಪ ನಿಯಂತ್ರಣಕ್ಕೆ ಈ ಮೂರೂ ಆಹಾರದಿಂದ ದೂರವಿರಿ (file photo)

ನವದೆಹಲಿ :  ಒಬ್ಬ  ವ್ಯಕ್ತಿಯ ಜೀವನದಲ್ಲಿ ವಯಸ್ಸು ಹೆಚ್ಚಾದಂತೆ ಜವಾಬ್ದಾರಿಗಳು ಕೂಡಾ ಹೆಚ್ಚಾಗುತ್ತವೆ. ಜವಾಬ್ದಾರಿಗಕು ಹೆಚ್ಚಾದಂತೆ ಉದ್ವೇಗ, ಕೋಪ, ಕಿರಿಕಿರಿ ಸಾಮಾನ್ಯವಾಗಿದೆ.  ಆದರೆ ಅತಿಯಾದ ಕಿರಿಕಿರಿಯಿಂದ, ಕೆಲಸದಲ್ಲಿನ ಸಮತೋಲನವು ಸಂಪೂರ್ಣವಾಗಿ ಹದಗೆಡುತ್ತದೆ. ಹೀಗಾದಾಗ ಮಾತು ಮಾತಿಗೂ ಕೋಪಗೊಳ್ಳುವುದು, ಕಿರುಚಾಡುವುದು ಮಾಡಲು ಶುರು ಮಾಡುತ್ತಾರೆ. ನಾವು ನಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಮಂದಿಯನ್ನು ನೋಡುತ್ತೇವೆ. ವಿನಾ ಕಾರಣ ಅವರಿಗೆ ಕೋಪ ಬರುತ್ತದೆ. ಅವರ ಮುಂದೆ ನಿಂತು ಏನು ಮಾತನಾಡಿದರೂ ಕಷ್ಟವೇ.  ನಿಮಗೂ ಇಂಥಹ ಸಮಸ್ಯೆ ಇದ್ದರೆ ಕೋಪವನ್ನು ನಿಯಂತ್ರಿಸುವುದು ಹೇಗೆ (how to control anger)?  

ಕೋಪವನ್ನು ನಿಯಂತ್ರಣದಲ್ಲಿಡಲು ಅನುಸರಿಸಿ ಈ ಕ್ರಮ : 
ದೇಹದಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್  ಹೆಚ್ಚಿನ ಪ್ರಮಾಣದಲ್ಲಿ  ಸಂಗ್ರಹವಾದಾಗ, ವ್ಯಕ್ತಿಯ ಕೋಪವೂ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ಮೆದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದ ಎನ್ನುವ ಅಂಶ ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ಇದಕ್ಕೆ ವಿರುದ್ಧವಾಗಿ, ಒಮೆಗಾ 3 ಫ್ಯಾಟಿ ಆಸಿಡ್ (omega 3 fatty acid) ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹ ಒಮೆಗಾ 3 ಫ್ಯಾಟಿ ಆಸಿಡ್ ಪಡೆಯಬೇಕಾದರೆ ಕೆಲವೊಂದು ಆಹಾರ ವಸ್ತುಗಳನ್ನು ಸೇವಿಸಬೇಕು. 

ಇದನ್ನೂ ಓದಿ : Flax Seeds : ಮಹಿಳೆಯರೆ 'ಅಗಸೆ ಬೀಜ' ಸೇವಿಸುವ ಮುನ್ನ ಎಚ್ಚರ : ಹೇಗೆ ಸೇವಿಸಬೇಕು ಇಲ್ಲಿ ತಿಳಿಯಿರಿ

-ನಿಮ್ಮ ಆಹಾರದಲ್ಲಿ ವಿವಿಧ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. 
-ಅಣಬೆಗಳು, ಬೀಜಗಳು, ವಾಲ್‌ನಟ್‌ಗಳಂತಹ ಒಮೆಗಾ 3 ಫ್ಯಾಟಿ ಆಸಿಡ್ ಇರುವಂಥಹ ಆಹಾರವನ್ನು ಸೇವಿಸಿ. 
-ಮೊಟ್ಟೆ (Egg), ಮೀನು (Fish) ಮತ್ತು ಕೋಳಿಯಂತಹ ಡೋಪಮೈನ್ ಆಹಾರವು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 
- ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಪಾಲಕ್ (Spinach)ಮುಂತಾದ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
-ಸಾಧ್ಯವಾದಷ್ಟು,  ಸಿಹಿ ಪದಾರ್ಥಗಳನ್ನು ತಿನ್ನುವುದನ್ನು  ಕಡಿಮೆ ಮಾಡಿ. 
- ಹಣ್ಣನ್ನು ಜ್ಯೂಸ್ ತೆಗೆದು ಕುಡಿಯುವ ಬದಲು, ಹಾಗೆಯೇ ತಿನ್ನಿ. 
- ವಿಟಮಿನ್ ಡಿ ಪಡೆಯಲು ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.

ಇದನ್ನೂ ಓದಿ : Milk-Almonds : ಆರೋಗ್ಯಕ್ಕೆ ಬೇಕು ಬಾದಾಮಿ ಹಾಲು : ಇದರಿಂದ ಎಷ್ಟು ಲಾಭ ಇದೆ ಗೊತ್ತಾ?

ಕೋಪವನ್ನು ನಿಯಂತ್ರಿಸಲು ಈ ಆಹಾರವನ್ನು ಸೇವಿಸಬೇಡಿ : 
1. ಡ್ರೈ ಫ್ರುಟ್ಸ್ :
 ಡ್ರೈ ಫ್ರುಟ್ಸ್ ಗಳು (Dry fruits) ಬಹಳ ಹೀಟ್ ಆಗಿರುತ್ತವೆ. ಇದನ್ನು ಸೇವಿಸುವುದರಿಂದ ಮನಸ್ಸಿನಲ್ಲಿ ಕೋಪ ಹೆಚ್ಚಾಗಬಹುದು. ಹಾಗಾಗಿ ಡ್ರೈ ಫ್ರುಟ್ಸ್  ಅನ್ನು ಹಾಗೆಯೇ ತಿನ್ನಬೇಡಿ. ಇದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನುವುದು ಉತ್ತಮ.

2. ಬದನೆ :
ಬದನೆಕಾಯಿಯನ್ನು ಹೆಚ್ಚಿನ  ಪ್ರಮಾಣದಲ್ಲಿ ತಿನ್ನಬೇಡಿ. ಏಕೆಂದರೆ ಅದು ಕೋಪವನ್ನು ಹೆಚ್ಚಿಸುತ್ತದೆ.

3. ಟೊಮ್ಯಾಟೊ :
ಟೊಮೇಟೊ (Tomato) ನಿಮ್ಮ ದೇಹದಲ್ಲಿ ಶಾಖವನ್ನು ಹೆಚ್ಚಿಸಬಹುದು ಮತ್ತು ಇದನ್ನು ಹೆಚ್ಚು ತಿನ್ನುವುದರಿಂದ ಕೋಪವೂ ಬರುತ್ತದೆ. ಹಾಗಾಗಿ ನಿಮಗೆ ಬಹಲ ಬೇಗ ಕೋಪಗೊಳ್ಳುವವರಾದರೆ, ಟೊಮೆಟೊವನ್ನು ಹೆಚ್ಚು ತಿನ್ನಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News