ಶ್ರೀನಗರ: ಪಾಕಿಸ್ತಾನವು ನಿರಂತರವಾಗಿ ಗಡಿಪ್ರದೇಶದ ಕದನ ವಿರಾಮವನ್ನು ಉಲ್ಲಂಘಿಸಿದೆ. ಕಳೆದ ರಾತ್ರಿ ಜಮ್ಮು ಕಾಶ್ಮೀರದ ಆರ್ಎಸ್ ಪುರಾ ಸೆಕ್ಟರ್ನಲ್ಲಿ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ. LoC ಗಡಿಪ್ರದೇಶದಲ್ಲಿ ಪಾಕಿಸ್ತಾನ ರಾತ್ರಿ ಇಡೀ ಗುಂಡಿನದಾಳಿ ನಡೆಸಿದ್ದು, ತನ್ನ ಉದ್ಧಟತನ ಪ್ರದರ್ಶಿಸಿದೆ. ರೇಂಜರ್ಸ್ ವಸತಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ನಾಗರೀಕರು ಗಾಯಗೊಂಡಿದ್ದಾರೆ.
One Border Security Force (BSF) soldier has lost his life in ceasefire violation by Pakistan in RS Pura sector #JammuAndKashmir pic.twitter.com/15vk7dmTOY
— ANI (@ANI) May 17, 2018
ಪಾಕಿಸ್ತಾನ ಗುಂಡಿನ ದಾಳಿ ನಡೆಸುತ್ತಿದ್ದಂತೆ ಜನರನ್ನು ಮನೆಯಿಂದ ಹೊರಬರದಂತೆ ನಾಗರೀಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಅಂತರರಾಷ್ಟ್ರೀಯ ಗಡಿಯಿಂದ 3 ಕಿಲೋಮೀಟರ್ ವ್ಯಾಪ್ತಿಯೊಳಗೆ ಇರುವ ಎಲ್ಲಾ ಶಾಲೆಗಳನ್ನು ಮುಚ್ಚಲು ಆಡಳಿತವು ಸೂಚನೆಗಳನ್ನು ನೀಡಿದೆ.
#UPDATE Two civilians injured in ceasefire violation by Pakistan in RS Pura sector. Schools within 3 kms radius of International border have been declared closed by the administration #JammuAndKashmir
— ANI (@ANI) May 18, 2018