ಭಾರತದ ಭೂಪಟದೊಂದಿಗೆ ಸದಾ ಅಂಟಿಕೊಂಡಿರುವ ಶ್ರೀಲಂಕಾ ನಕ್ಷೆ.. ಇದಕ್ಕಿದೆ ಒಂದು ಮುಖ್ಯ ಕಾರಣ

Sri Lanka is in Map of India: ಭಾರತದ ನಕ್ಷೆಯು ಶ್ರೀಲಂಕಾದ ನಕ್ಷೆಯನ್ನು ಹೊಂದಿದೆ. ಇದರರ್ಥ ಶ್ರೀಲಂಕಾದ ಮೇಲೆ ಭಾರತಕ್ಕೆ ಯಾವುದೇ ಹಕ್ಕಿದೆ ಎಂದು ಅರ್ಥವಲ್ಲ. 

Edited by - Chetana Devarmani | Last Updated : Jan 5, 2022, 05:58 PM IST
  • ಭಾರತದ ನಕ್ಷೆಯು ಶ್ರೀಲಂಕಾದ ನಕ್ಷೆಯನ್ನು ಒಳಗೊಂಡಿದೆ
  • ವಿಶ್ವಸಂಸ್ಥೆಯು ಮಹತ್ವದ ಕಾನೂನನ್ನು ಮಾಡಿದೆ
  • ಶ್ರೀಲಂಕಾ ಭಾರತದಿಂದ 18 ಮೈಲಿ ದೂರದಲ್ಲಿದೆ
ಭಾರತದ ಭೂಪಟದೊಂದಿಗೆ ಸದಾ ಅಂಟಿಕೊಂಡಿರುವ ಶ್ರೀಲಂಕಾ ನಕ್ಷೆ.. ಇದಕ್ಕಿದೆ ಒಂದು ಮುಖ್ಯ ಕಾರಣ  title=
ಭಾರತದ ನಕ್ಷೆ

ನವದೆಹಲಿ: ಭಾರತದ ಭೂಪಟದಲ್ಲಿ (Map Of India) ಶ್ರೀಲಂಕಾದ ನಕ್ಷೆಯನ್ನೂ (Sri Lanka Map) ತೋರಿಸಿರುವುದನ್ನು ನೀವು ಯಾವಾಗಲೂ ನೋಡಿರಬೇಕು. ಆದರೆ ಭಾರತದ ನಕ್ಷೆಯಲ್ಲಿ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಅಥವಾ ಮ್ಯಾನ್ಮಾರ್ ಅಥವಾ ಯಾವುದೇ ನೆರೆಯ ರಾಷ್ಟ್ರದ ನಕ್ಷೆ ಇಲ್ಲ. ಆದರೆ ಶ್ರೀಲಂಕಾ ಎಂದಿಗೂ ಭಾರತದ ಭಾಗವಾಗಿರಲಿಲ್ಲ. 

ಅದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದಿಂದ ಬೇರ್ಪಟ್ಟ ನಂತರ ಇತರ ದೇಶಗಳಾಗಿವೆ. ಇದಾದ ನಂತರವೂ ಶ್ರೀಲಂಕಾದ ನಕ್ಷೆ ಭಾರತದ ಭೂಪಟದಲ್ಲಿ ಏಕೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಶ್ರೀಲಂಕಾದ ಮೇಲೆ ಭಾರತಕ್ಕೆ ಏನಾದರೂ ಹಕ್ಕಿದೆ ಎಂದು ನೀವು ಯೋಚಿಸುತ್ತೀರಾ? ಇಲ್ಲ. ಅದು ಹಾಗಲ್ಲ. ಭಾರತದ ನಕ್ಷೆಯು ಶ್ರೀಲಂಕಾದ ನಕ್ಷೆಯನ್ನು ಹೊಂದಿದೆ. ಇದರರ್ಥ ಶ್ರೀಲಂಕಾದ ಮೇಲೆ ಭಾರತಕ್ಕೆ ಯಾವುದೇ ಹಕ್ಕಿದೆ ಅಥವಾ ನಕ್ಷೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಅಂತಹ ಯಾವುದೇ ಒಪ್ಪಂದವಿದೆ ಎಂದು ಅರ್ಥವಲ್ಲ. ಬದಲಿಗೆ, ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ.

ಇದನ್ನು ಮಾಡುವುದರ ಹಿಂದೆ ಒಂದು ಕಾನೂನು ಇದೆ. ಇದನ್ನು The law of the sea ಎಂದು ಕರೆಯಲಾಗುತ್ತದೆ. ಈ ಕಾನೂನನ್ನು ವಿಶ್ವಸಂಸ್ಥೆಯು 1956 ರಲ್ಲಿ ಮಾಡಿದೆ, ಈ ಕಾನೂನನ್ನು ಮಾಡಲು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ (UNCLOS-1) ಎಂಬ ಸಮ್ಮೇಳನವನ್ನು ಆಯೋಜಿಸಲಾಯಿತು. 

1958 ರಲ್ಲಿ, ವಿಶ್ವಸಂಸ್ಥೆಯು ಈ ಸಮ್ಮೇಳನದ ಫಲಿತಾಂಶವನ್ನು ಘೋಷಿಸಿತು. ಈ ಸಮ್ಮೇಳನದಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಗಡಿಗೆ ಸಂಬಂಧಿಸಿದಂತೆ ಒಮ್ಮತ ಮೂಡಿತು. 1982ರ ವರೆಗೆ ಮೂರು ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು. ಇದು ಸಮುದ್ರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ.

200 ನಾಟಿಕಲ್ ಮೈಲುಗಳ ಅಂತರವನ್ನು ತೋರಿಸುವುದು ಅವಶ್ಯಕ:

ಭಾರತದ ಭೂಪಟದಲ್ಲಿ ಯಾವುದೇ ದೇಶದ ಬೇಸ್ ಲೈನ್ ನಿಂದ 200 ನಾಟಿಕಲ್ ಮೈಲುಗಳ ಒಳಗೆ ಬರುವ ಸ್ಥಳವನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಕಾನೂನಿನಲ್ಲಿ ನಿರ್ಧರಿಸಲಾಗಿದೆ. ಅಂದರೆ, ಒಂದು ದೇಶವು ಸಮುದ್ರದ ದಡದಲ್ಲಿ ನೆಲೆಗೊಂಡಿದ್ದರೆ, ಈ ಪರಿಸ್ಥಿತಿಯಲ್ಲಿ ಅದರ ಗಡಿಯಿಂದ 200 ನಾಟಿಕಲ್ ಮೈಲುಗಳ ನಡುವೆ ಬೀಳುವ ಪ್ರದೇಶವನ್ನು ಸಹ ಆ ದೇಶದ ನಕ್ಷೆಯಲ್ಲಿ ತೋರಿಸಲಾಗುತ್ತದೆ.

200 ನಾಟಿಕಲ್ ಮೈಲುಗಳು 370 ಕಿಲೋಮೀಟರ್. ಆದ್ದರಿಂದ, ಭಾರತದ ಗಡಿಯಿಂದ 370 ಕಿಲೋಮೀಟರ್ ದೂರದವರೆಗಿನ ಪ್ರದೇಶವನ್ನು ನಕ್ಷೆಯಲ್ಲಿ ತೋರಿಸಲಾಗಿದೆ. ಶ್ರೀಲಂಕಾದ ಭೂಪಟವನ್ನು ಭಾರತದ ನಕ್ಷೆಯಲ್ಲಿ ಸೇರಿಸಲು ಇದೇ ಕಾರಣ. ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ಅಂತರವು ಕೇವಲ 18 ನಾಟಿಕಲ್ ಮೈಲುಗಳು. ಅದಕ್ಕಾಗಿಯೇ ಭಾರತದ ಭೂಪಟದಲ್ಲಿ ಶ್ರೀಲಂಕಾ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಅಥವಾ ಮ್ಯಾನ್ಮಾರ್ ಸಮುದ್ರ ವಲಯದ ಅಡಿಯಲ್ಲಿ ಬರುವುದಿಲ್ಲ.

ಇದನ್ನೂ ಓದಿ: WATCH:ಬೆಕ್ಕಿನಂತೆ ಸಿಂಹಿಣಿಯನ್ನು ಹೊತ್ತು ತಂದ ಮಹಿಳೆ.. ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ. 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News