ನವದೆಹಲಿ : ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು (Pashu kisan credit card scheme) ಪ್ರಾರಂಭಿಸಿದೆ. ಇದರಡಿ ರೈತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುವುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್:
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಮೋದಿ ಸರ್ಕಾರದ (Modi Government) ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯನ್ನು ಹೋಲುತ್ತದೆ. ಇದರಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಸಾಕಣೆಗೆ ಗರಿಷ್ಠ 3 ಲಕ್ಷ ರೂ. ನೀಡಲಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ 1.60 ಲಕ್ಷ ರೂ.ವರೆಗಿನ ಮೊತ್ತವನ್ನು ಪಡೆಯಲು ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ.
ಇದನ್ನೂ ಓದಿ : 7th Pay Commission: 95,000 ರೂ.ನಷ್ಟು ಹೆಚ್ಚಾಗಲಿದೆ ಉದ್ಯೋಗಿಗಳ ಸಂಬಳ, ಲೆಕ್ಕಾಚಾರ ನೋಡಿ
ರೈತರ ನೆರವಿಗೆ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಎಲ್ಲಾ ಅರ್ಹ ಅರ್ಜಿದಾರರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ (Pashu kisan credit card scheme) ಪ್ರಯೋಜನವನ್ನು ಪಡೆಯಬಹುದು ಎಂದು ಬ್ಯಾಂಕರ್ಸ್ ಕಮಿಟಿ ಸರ್ಕಾರಕ್ಕೆ ಭರವಸೆ ನೀಡಿದೆ. ದೇಶದಲ್ಲಿ ಹಾಲು ನೀಡುವ ಲಕ್ಷ ಲಕ್ಷ ಕುಟುಂಬಗಳಿದ್ದು, ಅವುಗಳನ್ನು ಟ್ಯಾಗ್ ಮಾಡಲಾಗುತ್ತಿದೆ.
ಯಾವ ಪ್ರಾಣಿಗೆ ಎಷ್ಟು ಹಣ ಸಿಗುತ್ತದೆ?
ಹಸು: ಪ್ರತಿ ಹಸುವಿಗೆ 40,783 ರೂ.
- ಎಮ್ಮೆ: ಪ್ರತಿ ಎಮ್ಮೆಗೆ 60,249 ರೂ. ಇ
- ಕುರಿ: ಮೇಕೆ, ಕುರಿ-ಮೇಕೆಗೆ 4063 ರೂ.
- ಕೋಳಿ: (ಮೊಟ್ಟೆ ಇಡುವ ಕೋಳಿಗೆ ) ಪ್ರತಿ ಕೋಳಿಗೆ 720 ರೂ.
ಈ ದಾಖಲೆಗಳು ಅವಶ್ಯಕ :
ಅರ್ಜಿದಾರರು ಹರಿಯಾಣ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರ ಆಧಾರ್ ಕಾರ್ಡ್ (Aadhaar), ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ.
- ಮೊಬೈಲ್ ನಂಬರ್ .
- ಪಾಸ್ಪೋರ್ಟ್ ಗಾತ್ರದ ಫೋಟೋ.
ಇದನ್ನೂ ಓದಿ : Aadhaar Card New Rule: ಆಧಾರ್ ಕಾರ್ಡ್ ಮಾಡಿಸುವ ಮುನ್ನ ಬದಲಾಗಿರುವ UIDAI ನಿಯಮಗಳನ್ನು ತಿಳಿಯಿರಿ
ಬಡ್ಡಿ ಎಷ್ಟು ?
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಅಡಿಯಲ್ಲಿ, ಪ್ರಾಣಿಗಳ ಮಾಲೀಕರು 4 ಪ್ರತಿಶತ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಕೇಂದ್ರ ಸರಕಾರದಿಂದ ಶೇ.3ರಷ್ಟು ರಿಯಾಯಿತಿ ನೀಡಲು ಅವಕಾಶವಿದೆ. ಸಾಲದ ಮೊತ್ತವು ಗರಿಷ್ಠ 3 ಲಕ್ಷ ರೂ.ಆಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.