ಸಾವಿರ ಅರ್ಥ ಹೇಳುವ ಮೋದಿ-ಯೋಗಿಯ ಎರಡು ಫೋಟೊ ಮತ್ತೊಂದು ಕವಿತೆ..!

ಯೋಗಿ ಆದಿತ್ಯನಾಥ  ಅವರು ಮಾಡಿರುವ ಟ್ವೀಟ್ ನಲ್ಲಿ ಎರಡು ಫೋಟೋ ಇದೆ. ಅದು ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ  ಜತೆಗಿರುವ ಫೋಟೋ.  

Written by - Ranjitha R K | Last Updated : Nov 21, 2021, 05:58 PM IST
  • ಮೋದಿ-ಯೋಗಿಯ ಎರಡು ಫೋಟೋ ಸಾಕಷ್ಟು ವೈರಲ್ ಆಗಿವೆ.
  • ಎರಡು ಫೋಟೊ ಜೊತೆ ಒಂದು ಕವಿತೆ ಟ್ವೀಟ್ ಮಾಡಿರುವ ಯೋಗಿ
  • ಯೋಗಿಗೆ ಟ್ವೀಟ್ ಗೆ ಬಿಜೆಪಿ ನಾಯಕರಿಂದಲೂ ಸಾಕಷ್ಟು ರಿಟ್ವೀಟ್
 ಸಾವಿರ ಅರ್ಥ ಹೇಳುವ ಮೋದಿ-ಯೋಗಿಯ ಎರಡು ಫೋಟೊ ಮತ್ತೊಂದು ಕವಿತೆ..! title=
ಮೋದಿ-ಯೋಗಿಯ ಎರಡು ಫೋಟೋ ಸಾಕಷ್ಟು ವೈರಲ್ ಆಗಿವೆ. (photo twitter)

ಲಖನೌ :  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Aadityanath) ಅವರು ಇಂದು ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ. ಮುಖ್ಯಮಂತ್ರಿ ಯೋಗಿ ಮಾಡಿರುವ ಟ್ವೀಟ್ ನಲ್ಲಿ ಅಂಥಾದ್ದೇನಿದೆ..? ಆ ಟ್ವೀಟ್ ಅಷ್ಟೊಂದು ವೈರಲ್ ಆಗಲು ಕಾರಣಗಳೇನು..?

ಸಾವಿರ ಅರ್ಥ ಹೇಳುವ ಎರಡು ಫೋಟೋ, ಒಂದು ಕವಿತೆ..!
ಯೋಗಿ ಆದಿತ್ಯನಾಥ  (Yogi Aadityanath)ಅವರು ಮಾಡಿರುವ ಟ್ವೀಟ್ ನಲ್ಲಿ ಎರಡು ಫೋಟೋ ಇದೆ. ಅದು ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ (PM narendra Modi) ಜತೆಗಿರುವ ಫೋಟೋ. ಮೋದಿ-ಯೋಗಿ ಗಹನ ಸಂಭಾಷಣೆಯಲ್ಲಿ ನಿರತವಾಗಿರುವಂತೆ ತೋರಿಸುತ್ತಿದೆ ಆ ಭಾವಚಿತ್ರ. ಒಂದು ಫೋಟೋ ಫ್ರಂಟ್ ಲುಕ್ ನಲ್ಲಿದೆ. ಇನ್ನೊಂದು ಫೋಟೋ ಬ್ಯಾಕ್ ಲುಕ್ ನಲ್ಲಿದೆ. ಬಾಕ್ ಲುಕ್ ನಲ್ಲಿರುವ ಫೋಟೋದಲ್ಲಿ ಪ್ರಧಾನಿ ನರೆಂದ್ರ ಮೋದಿ (PM Modi) ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಗಲಿಗೆ ಕೈ ಹಾಕಿಕೊಂಡು ಮುಂದೆ ನಡೆಯುವ ದೃಶ್ಯ ಸೆರೆಯಾಗಿದೆ.  ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

 

ಇದನ್ನೂ ಓದಿ : ದೆಹಲಿ ವಾಯುಮಾಲಿನ್ಯದ ಭೀತಿಯಿಂದಾಗಿ ಶಾಲಾ-ಕಾಲೇಜುಗಳು ಅನಿರ್ಧಿಷ್ಟ ಅವಧಿವರೆಗೆ ಬಂದ್

ಟ್ವೀಟ್ ಮಾಡಲಾದ ಕವಿತೆಯಲ್ಲೇನಿದೆ..?
ಮೋದಿ-ಯೋಗಿಯ ಫೋಟೋ ಜೊತೆ ಒಂದು ಕವಿತೆ ಇದೆ. ಅದು ಹಿಂದಿಯಲ್ಲಿದೆ. ಅದರ ಕನ್ನಡದ  ಅನುವಾದ ಹೀಗಿದೆ.`` ಪ್ರತಿಜ್ಞೆ ಮಾಡಿ ನಾವು ಹೊರಟಿದ್ದೇವೆ. ನಮ್ಮ ತನು-ಮನ  ಅರ್ಪಿಸಿದ್ದೇವೆ. ಹೊಸ ಸೂರ್ಯೋದಯದ ಹಠವಿದೆ. ಆಕಾಶದ ಎತ್ತರವನ್ನೂ ಮೀರಿ ಸಾಗಬೇಕಿದೆ.  ಒಂದು ಹೊಸ ಭಾರತವನ್ನು ಕಟ್ಟಬೇಕಿದೆ’’ ಯೋಗಿ ಬರೆದ ಕವಿತೆಯಲ್ಲಿರುವುದು ಇಷ್ಟೆ.  ಈ ಕವಿತೆ ಮತ್ತು ಭಾವಚಿತ್ರ ಕೂಡಾ ಈಗ ಸಾಕಷ್ಟು ಗಮನ ಸೆಳೆದಿದೆ.  ಬಿಜೆಪಿಯ ಸಾಕಷ್ಟು ನಾಯಕರು, ಕಾರ್ಯಕರ್ತರು ಈ ಟ್ವೀಟ್ ರಿಟ್ವೀಟ್ (Tweet) ಮಾಡಿದ್ದಾರೆ. ಸಾಕಷ್ಟು ಕಂಮೆಂಟ್ಸ್ ಹಾಕಿದ್ದಾರೆ. ಈ ಕಮೆಂಟ್ಸ್ ಕೂಡಾ ಸ್ವಾರಸ್ಯಕರವಾಗಿದೆ. 

ಇದನ್ನೂ ಓದಿ : Flipkart ಆರಂಭಿಸಿದೆ ‘SastaSundar’ ಬ್ಯುಸಿನೆಸ್, ನಿಮ್ಮ ಆರೋಗ್ಯದ ಬಗ್ಗೆ ವಹಿಸಲಿದೆ ವಿಶೇಷ ಕಾಳಜಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News