Sharad Purnima 2021: ಇಂದು ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ, ಇಲ್ಲವೇ ನಷ್ಟವಾಗಬಹುದು

Sharad Purnima 2021: ಶರದ್ ಪೂರ್ಣಿಮಾ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಇಂದು, ಈ ಕೆಲಸವನ್ನು ಮಾಡುವುದು ವ್ಯಕ್ತಿಯ ಜೀವನದಲ್ಲಿ ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Oct 19, 2021, 07:57 AM IST
  • ಇಂದು ಈ ಕೆಲಸಗಳನ್ನು ಮಾಡುವುದನ್ನು ತುಂಬಾ ಅಶುಭಕರ ಎಂದು ಪರಿಗಣಿಸಲಾಗಿದೆ
  • ಶರದ್ ಪೂರ್ಣಿಮಾವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ
  • ಶರದ್ ಪೂರ್ಣಿಮೆಯಂದು ಈ ಕೆಲಸವನ್ನು ಮಾಡುವುದರಿಂದ ಬಡತನ ಬರುತ್ತದೆ
Sharad Purnima 2021: ಇಂದು ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ, ಇಲ್ಲವೇ ನಷ್ಟವಾಗಬಹುದು title=
Dos don'ts of Sharad Purnima

Sharad Purnima 2021: ಇಂದು (ಅಕ್ಟೋಬರ್ 19, 2021, ಮಂಗಳವಾರ) ಶರದ್ ಪೂರ್ಣಿಮಾ 2021 (Sharad Purnima 2021) ರ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸವನ್ನು ಮಾಡುತ್ತಾರೆ ಮತ್ತು ಒಣ ಹಣ್ಣುಗಳೊಂದಿಗೆ ಹಾಲು ಅಥವಾ ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಟ್ಟುಕೊಳ್ಳುತ್ತಾರೆ. ಶರದ್ ಪೂರ್ಣಿಮಾ ದಿನದಂದು ಆಕಾಶದಿಂದ ಅಮೃತ ಮಳೆಯಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಈ ಖೀರ್ ಅಥವಾ ಹಾಲನ್ನು ಸೇವಿಸುವುದರಿಂದ, ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ವ್ಯಕ್ತಿಯು ಏಳ್ಗೆಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಹಿಂದೂ ಧರ್ಮದಲ್ಲಿ ಶರದ್ ಪೂರ್ಣಿಮಾವನ್ನು (Sharad Purnima) ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ, ಆದ್ದರಿಂದ ಈ ದಿನದ ಬಗ್ಗೆ ಕೆಲವು ಪ್ರಮುಖ ನಿಯಮಗಳನ್ನು  (Rules) ನೀಡಲಾಗಿದೆ. ಇದರ ಪ್ರಕಾರ, ಶರದ್ ಪೂರ್ಣಿಮೆಯ ದಿನದಂದು, ಅಶುಭಕರವಾದ ಇಂತಹ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.  

ಇದನ್ನೂ ಓದಿ- Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ

ಇಂದು ಮಾಡುವ ಇಂತಹ ಕೆಲಸಗಳಿಂದ ಬಡತನ ಬರುತ್ತದೆ:
>> ಶರದ್ ಪೂರ್ಣಿಮಾ ದಿನದಂದು ಅಪ್ಪಿ-ತಪ್ಪಿಯೂ ಮಾಂಸಾಹಾರವನ್ನು  ಸೇವಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗುತ್ತದೆ.

>> ಶರದ್ ಪೂರ್ಣಿಮಾವನ್ನು ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನ ಬ್ರಹ್ಮಚರ್ಯವನ್ನು ಅನುಸರಿಸಿ. 

>> ಶರದ್ ಪೂರ್ಣಿಮೆಯ ದಿನ, ಚಂದ್ರನ ಪ್ರಭಾವವು ತುಂಬಾ ಬಲವಾಗಿರುತ್ತದೆ. ಚಂದ್ರನ ಪ್ರಭಾವವು ಮನಸ್ಸಿನ ಮೇಲೆ ಇರುವುದರಿಂದ, ಈ ದಿನ ಕೋಪಗೊಳ್ಳುವುದನ್ನು ಅಥವಾ ಆಕ್ರಮಣಶೀಲತೆಯನ್ನು ತಪ್ಪಿಸಿ. ಏಕೆಂದರೆ ಈಗಾಗಲೇ ಚಂದ್ರನ ಕಾರಣದಿಂದಾಗಿ, ಪ್ರಕೃತಿಯಲ್ಲಿ ಹೆಚ್ಚು ಉತ್ಸಾಹ ಅಥವಾ ಭಾವನಾತ್ಮಕತೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ, ಕೆಲವು ತಪ್ಪು ಮಾಡುವ ಸಾಧ್ಯತೆ ತುಂಬಾ ಹೆಚ್ಚಾಗಿದೆ. 

ಇದನ್ನೂ ಓದಿ- Garuda Purana: ಕೆಟ್ಟ ಕೆಲಸಗಳು ಮಾತ್ರವಲ್ಲ, ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರಬಹುದು, ಇಲ್ಲಿದೆ ಕಾರಣ

>> ಶರದ್ ಪೂರ್ಣಿಮೆಯ ದಿನ ವಹಿವಾಟುಗಳನ್ನು ಮಾಡಬೇಡಿ. ಅದೇ ಸಮಯದಲ್ಲಿ, ಈ ವರ್ಷ ಶರದ್ ಪೂರ್ಣಿಮಾ ಮಂಗಳವಾರ ಇದೆ. ಈ ದಿನವನ್ನು ವಹಿವಾಟುಗಳಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ಎರಡೂ ಕಾರಣಗಳಿಂದಾಗಿ, ಇಂದು ಸಾಲ ನೀಡುವುದು ಅಥವಾ ತೆಗೆದುಕೊಳ್ಳುವುದರಿಂದ ಹಣದ ನಷ್ಟದ ಬಲವಾದ ಅವಕಾಶಗಳಿವೆ ಎಂದು ಹೇಳಲಾಗುತ್ತದೆ.

>> ಶರದ್ ಪೂರ್ಣಿಮೆಯಂದು ಕಪ್ಪು ಬಟ್ಟೆಗಳನ್ನು ಧರಿಸಬೇಡಿ. 

>> ಶರದ್ ಪೂರ್ಣಿಮಾವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lord Lakshmi) ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇಂದು ಸೂರ್ಯಾಸ್ತದ ನಂತರ ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ಬಡತನ ಬರುತ್ತದೆ. 

>> ಇದರ ಹೊರತಾಗಿ, ಇಂದು ಮಹಿಳೆಯರು ಸೂರ್ಯಾಸ್ತದ ನಂತರ ಮುಡಿ ಬಿಚ್ಚಬಾರದು. ಇದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. 

ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News