ZEEL-Sony Picture Network India Mega Merger - ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ (ZEEL) ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ (SNPI) ನಡುವೆ ವಿಲೀನವನ್ನು ಘೋಷಿಸಲಾಗಿದೆ. ವಿಲೀನದಿಂದಾಗಿ ಇಡೀ ಕಾರ್ಪೊರೇಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಯಾಗಿದೆ. ಷೇರು ಮಾರುಕಟ್ಟೆ (Stock Market) ಈ ಒಪ್ಪಂದವನ್ನು ಭಾರಿ ಸ್ವಾಗತಿಸಿದೆ. ಷೇರುದಾರರು ಸಹ ಒಪ್ಪಂದದಿಂದ ಒಳ್ಳೆಯ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ಈ ಮನರಂಜನಾ ಉದ್ಯಮವು ಒಂದು ದೊಡ್ಡ ಕಂಪನಿಯಾಗಿ ಹೊರಹೊಮ್ಮಲಿದೆ. ಈ ಮೆಗಾ ವಿಲೀನದ (ZEEL-SNPI Mega Merger) ಪ್ರಕ್ರಿಯೆಯ ಕುರಿತು ಮಾರುಕಟ್ಟೆಯ ದಿಗ್ಗಜರು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಲೀನ ಪ್ರಕ್ರಿಯೆಯ ಕುರಿತು ಝೀ ಬಿಸಿನೆಸ್ ವ್ಯವಸ್ಥಾಪಕ ಸಂಪಾದಕ ಅನೀಲ್ ಸಿಂಘ್ವಿ (Anil Singhvi) ಮಾರುಕಟ್ಟೆ ತಜ್ಞ ಮತ್ತು ಎನಾಮ್ ಸೆಕ್ಯುರಿಟೀಸ್ ಅಧ್ಯಕ್ಷ ವಲ್ಲಭ್ ಬನ್ಸಾಲಿ (Vallabh Bhansali) ಜೊತೆ ಮಾತನಾಡಿದ್ದು ಉದ್ಯಮದಲ್ಲಿ ಇಂತಹ ದೊಡ್ಡ ವಿಲೀನ ಪ್ರಕ್ರಿಯೆಗಳು ಹಲವು ವಿಧಗಳಲ್ಲಿ ಪ್ರಮುಖವಾಗಿವೆ ಎಂದು ಹೇಳಿದ್ದಾರೆ.
ಮಾಧ್ಯಮ ಲೋಕದ ಅತಿ ದೊಡ್ಡ ವಿಲೀನ ಪ್ರಕ್ರಿಯೆ ಇದಾಗಿದೆ
ಈ ದೊಡ್ಡ ವಿಲೀನ ಪ್ರಕ್ರಿಯೆಯೇ ಕುರಿತು ಮಾತನಾಡಿರುವ ವಲ್ಲಭ್ ಭನ್ಸಾಲಿ, "ಈ ಮೆಗಾ ಮರ್ಜರ್ ನಲ್ಲಿ ಎರಡು ದೊಡ್ಡ ಎಂಟರ್ಪ್ರೈಸಿಸ್ ಕಂಪನಿಗಳು ಒಂದಾಗುತ್ತಿವೆ. ಎಂಟರ್ಪ್ರಿಸಿಂಗ್ ಒಂದು ಮಹತ್ವದ ವಿಷಯ. ಇದೆ ಕಾರಣಕ್ಕೆ ಎರಡು ಕಂಪನಿಗಳು ತನ್ನ ಗ್ರೌಂಡ್ ಲೆವಲ್ ಗೆ ಇಳಿದು, ಸ್ಪರ್ಧೆಯನ್ನು ಗಮನಲ್ಲಿಟ್ಟುಕೊಂಡು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಹೀಗಾಗಿ ಮಾಧ್ಯಮ ಲೋಕದಲ್ಲಿ ಭಾರತದಲ್ಲಿ ಅತಿ ದೊಡ್ಡ ಮರ್ಜರ್ ಪ್ರಕ್ರಿಯೆ ಇದಾಗಿದೆ. ಅಮೆರಿಕಾದಲ್ಲಿ ನಡೆದ ವಾಲ್ಟ್ ಡಿಸ್ನಿ ಹಾಗೂ ಸ್ಟಾರ್ ವಿಲೀನ ಪ್ರಕ್ರಿಯೆಯಂತೆಯೇ ಭಾರತದಲ್ಲಿಯೂ ಕೂಡ ಈ ವಿಲೀನ ಪ್ರಕ್ರಿಯೆ ನಡೆಯಲಿದೆ. ದೇಶದ ಆರ್ಥಿಕತೆ ಪ್ರಭುದ್ಧವಾಗುತ್ತಿದ್ದಂತೆ, ಕನ್ಸೂಮರ್ ಮಾರುಕಟ್ಟೆ ಕೂಡ ಅಭಿವೃದ್ಧಿಗೊಳ್ಳುವುದು ಮರ್ಜರ್ ನ ಒಂದು ಟ್ರೆಂಡ್. ಇದರಿಂದ ಮಾರುಕಟ್ಟೆಯಲ್ಲಿ ಕನ್ಸಾಲಿಡೆಶನ್ ನೋಡಲು ಸಿಗುತ್ತದೆ" ಎಂದು ಹೇಳಿದ್ದಾರೆ.
ಎಂಟರ್ಪ್ರೈಸಿಂಗ್ ಸಂಸ್ಕೃತಿಗಳು ಒಟ್ಟಿಗೆ ಬರುವುದು ಲಾಭ ತರಲಿದೆ
ಭನ್ಸಾಲಿ ಅವರ ಪ್ರಕಾರ, ಮಾಧ್ಯಮ ಲೋಕದಲ್ಲಿ ಈ ರೀತಿಯ ವಿಲೀನ ಪ್ರಕ್ರಿಯೆ ತುಂಬಾ ಕ್ಲಿಷ್ಟವಾಗಿರುತ್ತದೆ. ಏಕೆಂದರೆ, ಮಾಧ್ಯಮ ಜಾನರ್ ಆಧಾರಿತವಾಗಿದೆ. ಇಲ್ಲಿ ಪ್ರತಿಯೊಂದು ಮಾಧ್ಯಮಕ್ಕೆ ತನ್ನದೇ ಆದ ಆಡಿಯನ್ಸ್ ಬೇಸ್ ಇರುತ್ತದೆ. ಈ ಎರಡೂ ಕಂಪನಿಗಳು ದೀರ್ಘಕಾಲದಿಂದ ಪರಸ್ಪರ ನೋಡುತ್ತಿವೆ. ಸೋನಿ ಪಿಕ್ಚರ್ಸ್ ಬಳಿ ಸಾಕಷ್ಟು ಒಳ್ಳೆಯ ಸಂಗತಿಗಳಿದ್ದವು. ಆದರೆ, ಸಾಮರ್ಥ್ಯದ ಲೆಕ್ಕಾಚಾದಲ್ಲಿ ಅಷ್ಟೊಂದು ಹಿಡಿತ ಸಾಧಿಸಿರಲಿಲ್ಲ. ಝೀ ಟಿವಿ ಬಳಿ ತನ್ನದೇ ಆದ ಸವಾಲುಗಳಿದ್ದವು. ಇದು ಕೇವಲ ಗಾತ್ರದ ಲೆಕ್ಕಾಚಾರದಲ್ಲಿ ಮಾತ್ರ ದೊಡ್ಡ ಮರ್ಜರ್ ಆಗದೆ, ಕಾಂಪ್ಲಿಮೆಂಟರೀ ಲೆಕ್ಕಾಚಾರದಲ್ಲಿಯೂ ಕೂಡ ಒಂದು ಉತ್ತಮ ವಿಲೀನ ಪ್ರಕ್ರಿಯೆಯಾಗಿದೆ. ಎರಡು ಎಂಟರ್ಪ್ರೈಸಿಂಗ್ ಸಂಸ್ಕ್ರತಿಗಳು ಒಟ್ಟಿಗೆ ಬರುವುದರಿಂದ ಅವುಗಳಲ್ಲಿ ಹೆಚ್ಚಿನ ಭಾರವೆ ಮೂಡುತ್ತದೆ. ಉಭಯ ಕಂಪನಿಗಳು ಉತ್ತಮ ಅನುಭವವನ್ನು ಹೊಂದಿವೆ. ಗ್ರೋಥ್ ಲೆಕ್ಕಾಚಾರದಲ್ಲಿ ಉದ್ಯಮವನ್ನು ನಡೆಸುವ ಹಾಗೂ ಇಚ್ಛೆ ಎರಡೂ ಕೂಡ ಬಲವಾಗಿವೆ ಎಂದಿದ್ದಾರೆ.
ಈ ವಿಲೀನ ಪ್ರಕ್ರಿಯೆಯ ಲಾಭಗಳೇನು?
ಈ ಮೆಗಾ ಮರ್ಜರ್ ಪ್ರಕ್ರಿಯೆಯಿಂದ ಜಾಹೀರಾತು ಕಂಪನಿಗಳಿಗೆ ಸಾಕಷ್ಟು ಲಾಭ ಸಿಗಲಿದ್ದು, ಅವುಗಳಿಗೆ ಒಂದು ದೈತ್ಯ ನೆಟ್ವರ್ಕ್ ಸಿಗಲಿದೆ. ಈ ನೆಟ್ವರ್ಕ್ ನಲ್ಲಿ ಪ್ರಾದೇಶಿಕ, ವರ್ನ್ಯಾಕೂಲರ್, ಸ್ಪೋರ್ಟ್ ಇದೆ. ಇದರಲ್ಲಿ ಝೀ ಟಿವಿ ಭಾಷಾ ಸಾಮರ್ಥ್ಯವನ್ನು ಹೊಂದಿದೆ, ಇದು ಜಾಹೀರಾತುದಾರರಿಗೆ ಪ್ರಬಲ ಮತ್ತು ಉತ್ತಮ ವೇದಿಕೆಯನ್ನು ಸೃಷ್ಟಿಸುತ್ತದೆ. ಸೋನಿ ಕ್ರೀಡೆ ಮತ್ತು ಹಾಸ್ಯದಲ್ಲಿ ಹಿಡಿತವನ್ನು ಹೊಂದಿದೆ. ಕೌಟುಂಬಿಕ ಮನರಂಜನೆಯ ಮೇಲೆ ಝೀ ಹಿಡಿತ ಹೊಂದಿದೆ. ಅನೇಕ ಪ್ರಾದೇಶಿಕ ಚಾನೆಲ್ಗಳಿವೆ, ಇದು ವಿಲೀನದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ. ನಿರ್ವಹಣಾ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಪ್ರಾದೇಶಿಕ ಕಚೇರಿಯನ್ನು ಹೊಂದಿರಬೇಕು. ಅದರಿಂದಲೂ ಹೆಚ್ಚಿನ ಪ್ರಯೋಜನವಾಗಲಿದೆ. ಪ್ರತಿ ಹಂತದಲ್ಲೂ ಎರಡೂ ಕಂಪನಿಗಳಿಗೆ ಲಾಭ ಸಿಗಲಿದೆ.
ಸಂಪೂರ್ಣ ಸಂದರ್ಶನ ಇಲ್ಲಿದೆ
ZEE-SONY डील पर वल्लभ भंसाली की राय कहा 'कंपनी से मैं शुरुआत से ही जुड़ा हुआ हूं,माइनॉरिटी शेयरहोल्डर्स को बड़ा फायदा मिलेगा।
देखिए अनिल सिंघवी से खास बातचीत। @AnilSinghvi_ #ZeeEntertainment
WATCH LIVE - https://t.co/nFUmOjamL2 pic.twitter.com/BDKDHVPouz
— Zee Business (@ZeeBusiness) September 22, 2021
ಷೇರು ಹೂಡಿಕೆದಾರರಿಗೆನು ಲಾಭ?
ಅಲ್ಪಸಂಖ್ಯಾತ (ಸಣ್ಣ) ಷೇರುದಾರರ ದೃಷ್ಟಿಯಿಂದ, ಈ ವಿಲೀನ ಪ್ರಕ್ರಿಯೆ ಲಾಭದಾಯಕವಾಗಿದೆ. ಸ್ಟಾಕ್ ಈಗಾಗಲೇ ಶೇ.20 ರಷ್ಟು ಜಿಗಿತ ದಾಖಲಿಸಿದೆ. ಜೀ ಎಂಟರ್ಟೈನ್ಮೆಂಟ್ನ ಷೇರಿನ ಬೆಲೆ ಏನು ಮತ್ತು ವಿಲೀನದ ನಂತರ ಏನಾಗುತ್ತದೆ ಎಂದು ಜನರು ಊಹಿಸುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಹೇಳುವುದು ತೀರಾ ಅವಸರದ ಸಂಗತಿಯಾಗಲಿದೆ. ಆದರೆ, ಸಣ್ಣ ಷೇರುದಾರರ ವಿಷಯದಲ್ಲಿ, ವಿನ್ ವಿನ್ ಪರಿಸ್ಥಿತಿ ಇದೆ. ಏಕೆಂದರೆ, ಮಂಡಳಿಯ ವಿಸ್ತರಣೆ ನಡೆಯಲಿದೆ. ಮಂಡಳಿಯು ವೃತ್ತಿಪರತೆ ಮತ್ತು ಉದ್ಯಮದ ಸಮತೋಲನವನ್ನು ಹೊಂದಿರುತ್ತದೆ. ಗಾತ್ರ ಮತ್ತು ವ್ಯಾಪಾರದ ಗುಣಲಕ್ಷಣದ ಪ್ರಕಾರ ಸಣ್ಣ ಷೇರುದಾರರು ಗೆಲುವು ಸಾಧಿಸಲಿದ್ದಾರೆ. ಷೇರುದಾರರು ಅವರು ಇನ್ನು ಮುಂದೆ ಹಳೆಯ ಜೀ ಎಂಟರ್ಟೈನ್ಮೆಂಟ್ನ ಅದೇ ಷೇರುಗಳನ್ನು ಹೊಂದಿರುವುದಿಲ್ಲಎಂಬುದನ್ನು ಗಮನಿಸಬೇಕು. ಬದಲಾಗಿ, ಅವರು ವಿದೇಶಿ ಕಂಪನಿಯ ಭಾಗವಾಗಿರಲಿದ್ದಾರೆ ಅಂದರೆ ಒಂದು ದೊಡ್ಡ MNC ಯ ಭಾಗವಾಗಿರಲಿದ್ದಾರೆ ಎಂದು ಭನ್ಸಾಲಿ ಹೇಳಿದ್ದಾರೆ.
ಪುನೀತ್ ಗೋಯೆಂಕಾ (Punit Goenka) ಅವರನ್ನು MD, CEO ಆಗಿ ಮುಂದುವರೆಸುವುದರಲ್ಲಿ ತರ್ಕ ಇದೆ
ಪುನೀತ್ ಗೋಯೆಂಕಾ ಉದ್ಯಮದಲ್ಲಿ ಅತ್ಯುತ್ತಮ ವ್ಯವಸ್ಥಾಪಕರಾಗಿದ್ದಾರೆ. ಅವರು ಉದ್ಯಮದಲ್ಲಿ ಅತಿ ಹೆಚ್ಚು ರೇಟ್ ಪಡೆದಿದ್ದಾರೆ. ಮಂಡಳಿಯಿಂದ ಕೆಳಗಿಳಿಯುವಂತೆ ಕೇಳುವುದು ಅಚ್ಚರಿಯ ಸಂಗತಿಯಾಗಿತ್ತು. ಆದರೆ ಇದಕ್ಕೆ ಕಾರಣಗಳು ಇರಬೇಕು. ಆದರೆ, ಕುಟುಂಬದ ಷೇರುಗಳು ಕಡಿಮೆಯಿದ್ದಾಗಲೂ ಪುನೀತ್ MD, CEO ಆಗಿ ಮುಂದುವರೆದಿರುವುದರಲ್ಲಿ ಆಶ್ಚರ್ಯವಿಲ್ಲ. ಮಾರುಕಟ್ಟೆಯೊಳಗೆ ಪುನೀತ್ ಸ್ಥಾನ ಚೆನ್ನಾಗಿದೆ. ಎರಡೂ ಕಂಪನಿಗಳಲ್ಲಿ ಉದ್ಯಮಶೀಲತೆಯ ಸಂಸ್ಕೃತಿ ಇದೆ ಮತ್ತು ಅಂತಹ ಸಂಸ್ಕೃತಿಯಲ್ಲಿ ಪುನೀತ್ ಅವರನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ತಾರ್ಕಿಕವಾಗಿದೆ. ಪುನೀತ್ ಏನೇ ಜವಾಬ್ದಾರಿ ದೊರೆತರು ಕೂಡ ಅದನ್ನು ಹೇಗೆ ಉತ್ತಮವಾಗಿ ನಡೆಸಬೇಕೇಂಬುದು ಅವರಿಗೆ ತಿಳಿದಿದೆ. ಇದು ಷೇರುದಾರರ ದೃಷ್ಟಿಕೋನದಿಂದ ಉತ್ತಮ ಕ್ರಮವಾಗಿದೆ. ಸಾಂಸ್ಥಿಕ ಷೇರುದಾರರು ಇದೀಗ ಪುನೀತ್ ಅವರಿಗೆ ಈ ವ್ಯವಹಾರದ ಅನುಭವ ಮತ್ತು ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬುದಾಗಿ ನೋಡುತ್ತಿದ್ದಾರೆ.
ZEEL ಪಾಲುದಾರಿಕೆ ಹೆಚ್ಚಿಸುವುದು ಸೋನಿಗೆ ಲಾಭದಾಯಕ
ಈ ಮೆಗಾ ವಿಲೀನದಲ್ಲಿ ಶೇ. 47 ರಷ್ಟು ಪಾಲುದಾರಿಕೆ ಝೀ ಎಂಟರ್ಟೈನ್ಮೆಂಟ್ ಬಳಿ ಇರುತ್ತದೆ. ಸೋನಿ ಸುಮಾರು ಶೇ. 53 ರಷ್ಟು ಪಾಲನ್ನು ಹೊಂದಿರಲಿದೆ. ಪ್ರವರ್ತಕರು ಸಹ ತಮ್ಮ ಪಾಲನ್ನು ಶೇ 4 ರಿಂದ 20 ಕ್ಕೆ ಹೆಚ್ಚಿಸಲು ಅವಕಾಶ ಹೊಂದಿರುತ್ತಾರೆ. ಬನ್ಸಾಲಿ ಪ್ರಕಾರ, ಈ ಕುಟುಂಬವು ಈ ವ್ಯವಹಾರವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಸೋನಿಯ ದೃಷ್ಟಿಯಲ್ಲಿ ಅವುಗಳ ಮೌಲ್ಯ ಎಷ್ಟು? ಸೋನಿ ಕುಟುಂಬ ವ್ಯವಹಾರವನ್ನು ಚೆನ್ನಾಗಿ ನೋಡಿದೆ. ಸೋನಿ ಯಾರಿಗೂ ಒಲವು ತೋರುವುದಿಲ್ಲ. ಅದರಲ್ಲಿ ಝೀ ಕುಟುಂಬ ಇರುವುದು ಎಷ್ಟು ಪ್ರಯೋಜನಕಾರಿ ಎಂಬುದನ್ನು ಸೋನಿ ಕೂಡ ವೀಕ್ಷಿಸುತ್ತಿದೆ. ಕಂಪನಿಗೆ ಜಾಗತಿಕ ಅನುಭವವಿದೆ. ಮನರಂಜನೆಯ ವ್ಯವಹಾರವು ತುಂಬಾ ಸವಾಲುಗಳಿಂದ ಕೂಡಿದೆ. ಆದರೆ, ಸೋನಿ ಇದನ್ನುಸರಿಯಾಗಿ ಅರ್ಥ ಮಾಡಿಕೊಂಡಿದೆ. ಉದ್ಯಮಶೀಲ ಸಂಸ್ಕೃತಿಯನ್ನು ಹೊಂದಿರುವುದು ಬಹಳ ಮುಖ್ಯ. ಅದಕ್ಕಾಗಿಯೇ ಸೋನಿ ತನ್ನ ಸ್ವಂತ ಲಾಭಕ್ಕಾಗಿ ಝೀ ಕುಟುಂಬದ ಜೊತೆಗೆ ಕೈಜೋಡಿಸಿದೆ. ಇಷ್ಟು ದಿನ, ಝೀ ಎಂಟರ್ಟೈನ್ಮೆಂಟ್ ಉತ್ತಮ ಪ್ರದರ್ಶನ ತೋರಿದೆ. ಉಳಿದವರೆಲ್ಲರ ವ್ಯವಹಾರಗಳು ಏರಿಳಿತಗಳನ್ನು ಕಂಡರೂ ಕೂಡ ಝೀ ಎಂಟರ್ಟೈನ್ಮೆಂಟ್ ಈ ವ್ಯವಹಾರದಲ್ಲಿ ಸ್ಥಿರವಾಗಿ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಭನ್ಸಾಲಿ ಹೇಳಿದ್ದಾರೆ.
(Disclaimer: ಝೀ ಎಂಟರ್ಟೈನ್ಮೆಂಟ್ ನಮ್ಮ Sister Concern/Group Company ಅಲ್ಲ. ಎರಡು ಹೆಸರುಗಳಲ್ಲಿ ಸಾಮ್ಯತೆ ಕಾಣಿಸಬಹುದು. ಆದರೆ, ನಮ್ಮ ಮಾಲೀಕತ್ವ ಹಾಗೂ ವ್ಯವಸ್ಥಾಪನೆ ಬೇರೆ ಗ್ರೂಪ್ ಅಂದರೆ ಝೀ ಮೀಡಿಯಾ ಕೈಯಲ್ಲಿದೆ)