ನವದೆಹಲಿ : ನೆಲದ ಮೇಲೆ ಓಡಾಡುವ ಎಲ್ಲಾ ವಾಹನಗಳಲ್ಲಿಯೂ ಹಾರ್ನ್ (Horn) ಇರುತ್ತದೆ ಅನ್ನುವ ವಿಚಾರ ಎಲ್ಲರಿಗೂ ತಿಳಿದಿರುತ್ತದೆ. ಆದರೆ ವಿಮಾನಗಳಲ್ಲಿಯೂ ಹಾರ್ನ್ ಇರುತ್ತದೆ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ ಹೌದು ವಿಮಾನಗಳಲ್ಲಿಯೂ (Plane Horn)ಹಾರ್ನ್ ಇರುತ್ತದೆ. ಆದರೆ ಈ ಹಾರ್ನ್ ವಿಮಾನವನ್ನು ಬೇರೆಡೆಗೆ ತಿರುಗಿಸಲು ಅಥವಾ ಪಕ್ಷಿಗಳನ್ನು ಓಡಿಸಲು ಸಲುವಾಗಿ ಬಳಸುವಂತದ್ದಲ್ಲ. ಈ ಹಾರ್ನ್ ಗಳನ್ನು ಬೇರೆಯೇ ಉದ್ದೇಶಕ್ಕೆ ಬಳಸಲಾಗುತ್ತದೆ.
ವಿಮಾನದ ಹಾರ್ನ್ ಎಲ್ಲಿರುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ ?
ವಿಮಾನದ ಹಾರ್ನ್ (Plane's Horn) ಅನ್ನು ಅದರ ಚಕ್ರಗಳ ಬಳಿ ಅಳವಡಿಸಲಾಗಿರುತ್ತದೆ. ಇದು ಸಾಮಾನ್ಯ ಹಾರ್ನ್ ಅನ್ನೇ ಹೋಲುತ್ತದೆ. ವಿಮಾನವನ್ನು ತಯಾರಿಸುವ ಕಂಪನಿಯು ಈ ಹಾರ್ನ್ ಶಬ್ದ ಹೇಗಿರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಈಗ ಚಕ್ರಗಳ ಬಳಿ ಹಾರ್ನ್ ಇದೆ ಎಂದರೆ ಆಶ್ಚರ್ಯವಾಗಬಹುದು. ಚಕ್ರದ ಬಳಿ ಹಾರ್ನ್ ಯಾವ ರೀತಿ ಕೆಲಸ ಮಾಡುತ್ತದೆ ಎಂದುಕೊಳ್ಳಬಹುದು. ವಾಸ್ತವವಾಗಿ ಈ ಹಾರ್ನ್ ಅನ್ನು ಸಿಬ್ಬಂದಿಯನ್ನು ಅಲರ್ಟ್ (Staff alert) ಮಾಡಲು ಬಳಸಲಾಗುತ್ತದೆ.
ಇದನ್ನೂ ಓದಿ : Amazon Deal of the Day: ಇಂದು 5G Smartphones ಮೇಲೆ ಪಡೆಯಿರಿ ಬಂಪರ್ ರಿಯಾಯಿತಿ
ವಿಮಾನದ ಹಾರ್ನ್ ಬಳಕೆ ಹೀಗಿರುತ್ತದೆ :
ವಿಮಾನದ (Aeroplane) ಹಾರ್ನ್ ಅನ್ನು ಎರಡು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮೊದಲನೆಯದ್ದು, , ಈ ಮೂಲಕ, ವಿಮಾನದ ಕ್ಯಾಬಿನ್ನಲ್ಲಿ ಕುಳಿತ ಪೈಲಟ್ಗಳು (Pilot) ಉಳಿದ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಾರೆ. ಸಮಸ್ಯೆ ಇದ್ದಾಗ ಈ ಹಾರ್ನ್ ಮೂಲಕವೇ ಸಿಬ್ಬಂದಿಯನ್ನು ಎಚ್ಚರಿಸುತ್ತಾರೆ. ಇದಲ್ಲದೇ, ವಿಮಾನ ಹೊರಡಲು ಸಿದ್ಧವಾದಾಗ ವಿಮಾನ ನಿಲ್ದಾಣದಲ್ಲಿ ಹಾರ್ನ್ ಅನ್ನು ಬಳಸಲಾಗುತ್ತದೆ. ಹಾರ್ನ್ ಮೂಲಕ ವಿಮಾನದ ಹಾರಾಟದ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತದೆ. ಇದನ್ನು ಹಾರ್ನ್ ಗಿಂತ ಅಲಾರಂ (Alarm) ಬಟನ್ನಂತೆ ಬಳಸಲಾಗಿದೆ ಎಂದು ಹೇಳಬಹುದು.
ಇದನ್ನೂ ಓದಿ: Ration Card Services: ಈಗ ರೇಷನ್ ಕಾರ್ಡ್ ಸೌಲಭ್ಯ ಪಡೆಯುವುದು ತುಂಬಾ ಸುಲಭ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯ ಈ ಸೇವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.