ನವದೆಹಲಿ:ಆರೋಪಿಯನ್ನು ನೇಣುಗಂಬಕ್ಕೆ ಎರಿಸುವುದು ಸರಿಯಾದ ವಿಧಾನ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ ಗೆ ತಿಳಿಸಿದೆ.
ಸುಪ್ರಿಂಕೋರ್ಟ್ ವಕೀಲೆ ರಿಷಿ ಮಲ್ಹೊತ್ರಾರವರು ಘನತೆಯೊಂದಿಗೆ ಸಾವನ್ನಪ್ಪುವುದು ಕೂಡ ಮೂಲಭೂತ ಹಕ್ಕು 21 ರ ಅಡಿಯಲ್ಲಿ ಬರುತ್ತದೆ ಎಂದು ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮರು ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರ ನೇಣುಗಂಬ ಏರಿಸುವ ವಿಧಾನ ಸುಲಭ ಮತ್ತು ವೇಗವಾದದ್ದು ಎಂದು ತಿಳಿಸಿದೆ.
ರಿಷಿ ಮಲ್ಹೊತ್ರಾ ರವರು ತಮ್ಮ ಪಿಐಎಲ್ ನಲ್ಲಿ ನೇಣುಗಂಬದ ಮೂಲಕ ಮರಣದಂಡನೆ ವಿಧಿಸುವುದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಒತ್ತಾಯಿಸಿದ್ದರು.ಆದರೆ ಸರ್ಕಾರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಪುನರ್ ಅರ್ಜಿಯನ್ನು ಸಲ್ಲಿಸಿದೆ.