ಟೊರೊಂಟೊ: ಪಾದಾಚಾರಿಗಳ ಮೇಲೆ ಚಲಿಸಿದ ಟ್ರಕ್, 10 ಜನರ ಮರಣ

ಮಾಧ್ಯಮ ವರದಿಗಳ ಪ್ರಕಾರ ಬಂಧಿತ ಆರೋಪಿ ಚಾಲಕ 'ತನ್ನ ತಲೆಗೆ ಶೂಟ್' ಮಾಡಿ ಎಂದು ಹೇಳುತ್ತಿದ್ದ ಎಂದು ತಿಳಿದುಬಂದಿದೆ. 

Last Updated : Apr 24, 2018, 09:59 AM IST
ಟೊರೊಂಟೊ: ಪಾದಾಚಾರಿಗಳ ಮೇಲೆ ಚಲಿಸಿದ ಟ್ರಕ್, 10 ಜನರ ಮರಣ title=
Pic: Twitter@TorontoPolice

ಮಾಂಟ್ರಿಯಲ್: ಟೊರೊಂಟೊದ ಮಧ್ಯಭಾಗದಲ್ಲಿ ಮಂಗಳವಾರ ಟ್ರಕ್ ಒಂದು ಪಾದಚಾರಿಗಳ ಮೇಲರಿದು  10 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುವುದು ಎಂದು ನಿರೀಕ್ಷಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಘಟನೆಯಲ್ಲಿ ಇನ್ನೂ ಕೆಲವು ಜನರು ಗಂಭೀರವಾಗಿ ಗಾಯಗೊಂಡಿರುವುದರಿಂದ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಅಸೋಸಿಯೇಟೆಡ್ ಪ್ರೆಸ್ ನ ಸುದ್ದಿ ಪ್ರಕಾರ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. 

ಮಾಧ್ಯಮ ವರದಿಗಳ ಪ್ರಕಾರ ಬಂಧಿತ ಆರೋಪಿ ಚಾಲಕ 'ತನ್ನ ತಲೆಗೆ ಶೂಟ್' ಮಾಡಿ ಎಂದು ಹೇಳುತ್ತಿದ್ದ ಎಂದು ತಿಳಿದುಬಂದಿದೆ. 

ಇದರ ನಂತರ ಮಾಡಿದ ಇತರ ಟ್ವೀಟ್ಗಳನ್ನು "ಗಾಯಗೊಂಡವರ ಸಂಖ್ಯೆಯ ಬಗ್ಗೆ ಅಥವಾ ಅವರ ಗಾಯದ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ" ಎಂದು ಹೇಳಲಾಗಿದೆ. ಸ್ಥಳೀಯ ಸಮಯ ಮಧ್ಯಾಹ್ನ 01: 27ಕ್ಕೆ  ಅಧಿಕಾರಿಗಳು ದೌಡಾಯಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಆದಾಗ್ಯೂ ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೆ ಅಥವಾ ಇಲ್ಲವೋ ಎಂಬ ವಿವರಗಳು ತಿಳಿದುಬಂದಿಲ್ಲ.

ಕೇಂದ್ರ ಟೊರೊಂಟೊದಲ್ಲಿನ ಜನರ ಮೇಲೆ ಟ್ರಕ್ ಹರಿಸಿದ ಚಾಲಕನನ್ನು ಗುರುತಿಸಲಾಗಿದೆ. ಫೋಟೋ ಕ್ರೆಡಿಟ್ಗಳು: LINKEDIN
ಕೇಂದ್ರ ಟೊರೊಂಟೊದಲ್ಲಿನ ಜನರ ಮೇಲೆ ಟ್ರಕ್ ಹರಿಸಿದ ಚಾಲಕನನ್ನು ಗುರುತಿಸಲಾಗಿದೆ. ಫೋಟೋ ಕ್ರೆಡಿಟ್ಗಳು: LINKEDIN

ಅಪಘಾತದ ನಂತರ, ಉಪ ಪೊಲೀಸ್ ಮುಖ್ಯಸ್ಥ ಪೀಟರ್ ಇದು ಸಂಕೀರ್ಣವಾದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.  ತನಿಖೆ ಮುಂದುವರೆಯುತ್ತಿದೆ ಎಂದು ಪೀಟರ್ ಹೇಳಿದರು. ನಂತರ, ಪೋಲಿಸ್ ಮುಖ್ಯಸ್ಥ 9 ಜನರ ಸಾವು ದೃಢಪಡಿಸಿದರು. ಸ್ಥಳೀಯ ಮಾಧ್ಯಮಗಳ ಪ್ರಕಾರ, ವ್ಯಾನ್ ಡ್ರೈವರ್ ಘಟನೆಯ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ನಂತರ ಆತನನ್ನು ಬಂಧಿಸಲಾಯಿತು ಎನ್ನಲಾಗಿದೆ.

Trending News