ಐಶ್ವರ್ಯ ರೈ ಜೊತೆ ತೇಜ್ ಪ್ರತಾಪ್ ಯಾದವ್ ನಿಶ್ಚಿತಾರ್ಥ!

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್- ಐಶ್ವರ್ಯಾ ರೈ ಅವರ ನಿಶ್ಚಿತಾರ್ಥ ಹೋಟೆಲ್ ಮೌರ್ಯದಲ್ಲಿ ಇಂದು ನೆರವೇರಿತು.   

Last Updated : Apr 18, 2018, 05:10 PM IST
ಐಶ್ವರ್ಯ ರೈ ಜೊತೆ ತೇಜ್ ಪ್ರತಾಪ್ ಯಾದವ್ ನಿಶ್ಚಿತಾರ್ಥ! title=

ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್- ಐಶ್ವರ್ಯಾ ರೈ ಅವರ ನಿಶ್ಚಿತಾರ್ಥ ಹೋಟೆಲ್ ಮೌರ್ಯದಲ್ಲಿ ಇಂದು ನೆರವೇರಿತು. 

ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್ ರೈ ಮೊಮ್ಮಗಳು ಮತ್ತು RJD ನಾಯಕ ಮತ್ತು ಬಿಹಾರ ಸಾರಿಗೆ ಸಚಿವ ಚಂದ್ರಿಕಾ ರೈ ಅವರ ಮಗಳಾದ ಐಶ್ವರ್ಯ ರೈ ಜೊತೆ ತೇಜ್ ಪ್ರತಾಪ್ ನಿಶ್ಚಿತಾರ್ಥ ನೆರವೇರಿತು. 

ಬಹಳ ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರೂ ಸೇರಿದಂತೆ ಹತ್ತಿರದ ಸಂಬಂಧಿಕರು ಆಗಮಿಸಿದ್ದರು. ನಿಶ್ಚಿತಾರ್ಥ ಸಭಾಂಗಣದ ಅಲಂಕಾರಕ್ಕಾಗಿ ಬೆಂಗಳೂರು, ಕಲ್ಕತ್ತಾ, ದೆಹಲಿ ಮತ್ತು ಪುಣೆಯಿಂದ ಹೂಗಳನ್ನು ತರಿಸಲಾಗಿತ್ತು. 

ಪಾಟ್ನಾದ ನೊಟ್ರೆ ಡೆಮೆ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಐಶ್ವರ್ಯ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಮೇವು ಹಣಗರದಲ್ಲಿ ಲಾಲೂ ಪ್ರಸಾದ್ ಯಾದವ್‌ ಜೈಲು ಸೇರಿದ ಬಳಿಕ ತೇಜ್‌ ಪ್ರತಾಪ್‌ ಯಾದವ್‌ ರಾಜಕೀಯದಲ್ಲಿ ಸಕ್ರೀಯರಾಗಿದ್ದು ಆರ್‌ಜೆಡಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ದಂಪತಿಗೆ 7 ಜನ ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದಾರೆ.

Trending News