Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್

ಭಾನುವಾರ ಜಲಾಲಾಬಾದ್ ಅನ್ನು ತಾಲಿಬಾನಿಗಳು  ವಶಪಡಿಸಿಕೊಂಡರು. ಇದಲ್ಲದೆ, ಕುನಾರ್ ಪ್ರಾಂತ್ಯದ ರಾಜಧಾನಿ ಮತ್ತು ಪಕ್ತಿಕಾ ಪ್ರಾಂತ್ಯದ ರಾಜಧಾನಿಯಾದ ಅಸದಾಬಾದ್ ನಗರವನ್ನು ಕೂಡಾ ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 

Written by - Ranjitha R K | Last Updated : Aug 15, 2021, 04:09 PM IST
  • ಅಫ್ಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ಸಂಘರ್ಷ
  • ಕಾಬೂಲ್ ಅನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು
  • 20 ಕ್ಕೂ ಹೆಚ್ಚು ಪ್ರಾಂತ್ಯಗಳ ರಾಜಧಾನಿಗಳನ್ನು ವಶಪಡಿಸಿಕೊಂಡ ತಾಲಿಬಾನ್
Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್  title=
ಅಫ್ಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ಸಂಘರ್ಷ (photo reuters)

ಕಾಬೂಲ್ : ಅಫ್ಘಾನಿಸ್ತಾನದಲ್ಲಿ (Afghanistan) ಈ ಸಮಯದಲ್ಲಿ, ಎಲ್ಲೆಡೆ ಭಯ ವಾತಾವರಣ ಸೃಷ್ಟಿಯಾಗಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ (Taliban) ಭಯೋತ್ಪಾದಕರು ನಾಲ್ಕು ದಿಕ್ಕುಗಳಿಂದಲೂ ಸುತ್ತುವರಿದಿದ್ದಾರೆ.  ಈ ಮಧ್ಯೆ, ಬಲವಂತವಾಗಿ ಕಾಬೂಲ್ ಅನ್ನು ವಶಪಡಿಸಿಕೊಳ್ಳಲು ಬಯಸುವುದಿಲ್ಲ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.  

ತಾಲಿಬಾನ್ ಕೃತ್ಯ : 
ಭಾನುವಾರ ಜಲಾಲಾಬಾದ್ (Jalalabad) ಅನ್ನು ತಾಲಿಬಾನಿಗಳು (Taliban) ವಶಪಡಿಸಿಕೊಂಡರು. ಇದಲ್ಲದೆ, ಕುನಾರ್ ಪ್ರಾಂತ್ಯದ ರಾಜಧಾನಿ ಮತ್ತು ಪಕ್ತಿಕಾ ಪ್ರಾಂತ್ಯದ ರಾಜಧಾನಿಯಾದ ಅಸದಾಬಾದ್ ನಗರವನ್ನು (Asadabad) ಕೂಡಾ ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ : Helicopter Crash: 16 ಜನರಿದ್ದ ಹೆಲಿಕಾಪ್ಟರ್ ಪತನ; ಹಲವರು ನಾಪತ್ತೆ..!
 
ಜನರಲ್ ಸಾಮಿ ಸಾದತ್ ಮೇಲೆ ಭದ್ರತೆಯ ಜವಾಬ್ದಾರಿ : 
ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ (Kabul) ಅನ್ನು ತಾಲಿಬಾನ್ ಹಿಡಿತದಿಂದ ದೂರವಿರಿಸಲು ಅಫ್ಘಾನ್ ಸೇನೆಯು ಎಲ್ಲಾ  ಪ್ರಯತ್ನವನ್ನು ನಡೆಸುತ್ತಿದೆ. ಕಾಬೂಲ್ ಅನ್ನು ಸುರಕ್ಷಿತವಾಗಿರಿಸುವ ಜವಾಬ್ದಾರಿಯನ್ನು ಅಫ್ಘಾನ್ ವಿಶೇಷ ಪಡೆಗಳ ಮುಖ್ಯಸ್ಥ ಜನರಲ್ ಸಮಿ ಸಾದತ್ ಅವರಿಗೆ ನೀಡಲಾಗಿದೆ. 36 ವರ್ಷ ವಯಸ್ಸಿನ ಜನರಲ್ ಸಾಮಿ ಸಾದತ್, ಭಯೋತ್ಪಾದಕರನ್ನು (Terrorist) ನಿಗ್ರಹಿಸುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಆದರೂ, ಅಫಘಾನ್ ಸೈನ್ಯವು ಕಾಬೂಲನ್ನು ತಾಲಿಬಾನಿಗಳಿಂದ ದೂರವಿಡಬಹುದೇ ಎನ್ನುವ ಬಗ್ಗೆ ಇನ್ನೂ ಸಂಶಯ ಕಾಡುತ್ತಿದೆ ಎನ್ನಲಾಗಿದೆ. ಏಕೆಂದರೆ ತಾಲಿಬಾನ್ ವಶಪಡಿಸಿಕೊಂಡ ಬಹುತೇಕ ಪ್ರಾಂತ್ಯಗಳಲ್ಲಿ, ಅಫ್ಘಾಸ್ತಾನದ  ಸೇನೆಯು ಯುದ್ದ ಮಾಡದೆ, ಶಸ್ತ್ರಾಸ್ತ್ರಗಳನ್ನು ಬಿಟ್ಟು ಕೂತಿದೆ ಎನ್ನಲಾಗಿದೆ. 

 ಮಜರ್-ಇ-ಷರೀಫ್ ಅನ್ನು ವಶಪಡಿಸಿಕೊಂಡ ತಾಲಿಬಾನ್ : 
ಅಫ್ಘಾನಿಸ್ತಾನವನ್ನು ತಾಲಿಬಾನ್ ಅತಿ ವೇಗದಲ್ಲಿ ಆಕ್ರಮಿಸಿಕೊಳ್ಳುತ್ತಿದೆ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ, ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದ ರಾಜಧಾನಿ ಮತ್ತು ಅಫ್ಘಾನಿಸ್ತಾನದ ನಾಲ್ಕನೇ ದೊಡ್ಡ ನಗರವಾದ ಮಜರ್-ಇ-ಷರೀಫ್ (mazar-i-sharif) ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅಷ್ಟು ಮಾತ್ರವಲ್ಲದೆ, ಅಫ್ಘಾನಿಸ್ತಾನದ ಆರ್ಥಿಕ ಕೇಂದ್ರವಾದ ಮಜರ್-ಇ-ಷರೀಫ್ ನಗರವನ್ನು ಕೆಲವೇ ಗಂಟೆಗಳಲ್ಲಿ ತಾಲಿಬಾನ್  ವಶಪಡಿಸಿಕೊಂಡಿತು. ತಾಲಿಬಾನ್,  ಮಜರ್-ಇ-ಶರೀಫ್ ಅನ್ನು ವಶಪಡಿಸಿಕೊಂಡ ನಂತರ, ಬಲ್ಖ್ ಗವರ್ನರ್ ಮತ್ತು ಅನೇಕ ಉನ್ನತ ಸರ್ಕಾರಿ ಅಧಿಕಾರಿಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಉಜ್ಬೇಕಿಸ್ತಾನದ ಗಡಿಯನ್ನು ತಲುಪಿದ ಚಿತ್ರಗಳೂ ಹೊರಬಂದಿವೆ.  

ಇದನ್ನೂ ಓದಿ : ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ

 20 ಕ್ಕೂ ಹೆಚ್ಚು ಪ್ರಾಂತ್ಯಗಳ ರಾಜಧಾನಿಗಳನ್ನು ವಶಪಡಿಸಿಕೊಂಡ ತಾಲಿಬಾನ್ : 
ಶನಿವಾರ, ತಾಲಿಬಾನ್  ಮಜರ್-ಇ-ಶರೀಫ್ ಮತ್ತು ಮೈಮನ ನಗರಗಳನ್ನು ವಶಪಡಿಸಿಕೊಂಡಿದೆ ಎಂದು ಘೋಷಿಸಿತ್ತು. ಮೇ ತಿಂಗಳಲ್ಲಿ ಹೋರಾಟ ತೀವ್ರಗೊಂಡ ನಂತರ ತಾಲಿಬಾನ್ ಈವರೆಗೆ 20 ಕ್ಕೂ ಹೆಚ್ಚು ಪ್ರಾಂತ್ಯಗಳ ರಾಜಧಾನಿಗಳನ್ನು ವಶಪಡಿಸಿಕೊಂಡಿದೆ. ತಾಲಿಬಾನಿಗಳು ಕಾಬೂಲ್ ಪ್ರವೇಶಿಸಿದ ವರದಿಗಳ ನಡುವೆಯೇ, ಸದ್ಯಕ್ಕೆ ತಾಲಿಬಾನ್ ಹೋರಾಟಗಾರರು ಕಾಬೂಲ್ ನಗರದ ದ್ವಾರದಲ್ಲಿಯೇ ಇರುತ್ತಾರೆ. ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಸ್ತಾಂತರವಾಗುವವರೆಗೂ ಕಾಬೂಲ್ ನಗರವನ್ನು ಪ್ರವೇಶಿಸುವುದಿಲ್ಲ ಎಂದು ತಾಲಿಬಾನ್ ಅಧಿಕೃತವಾಗಿ ಘೋಷಿಸಿದೆ. 

ಈ ನಡುವೆ,  ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಿಂದ ಅಮೆರಿಕದ (America) ಸಿಬ್ಬಂದಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ.  ಅಫ್ಘಾನಿಸ್ತಾನ ರಾಯಭಾರ ಕಚೇರಿಗೆ ಮಿಲಿಟರಿ ಚಿನೂಕ್ ಹೆಲಿಕಾಪ್ಟರ್‌ಗಳನ್ನು ಕಳುಹಿಸಿರುವ ಅಮೆರಿಕ ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಚುರುಕು ಮುಟ್ಟಿಸಿದೆ. 

ಇನ್ನು ಆಗಸ್ಟ್ 10 ರಂದು,  ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರು, ಅಫ್ಘಾನಿಸ್ತಾನವನ್ನು ತೊರೆದು ಮತ್ತು ಭಾರತಕ್ಕೆ ಸಾಧ್ಯವಾದಷ್ಟು ಬೇಗ ಹಿಂದಿರುಗುವಂತೆ ಭಾರತೀಯ ಹೈಕಮಿಷನ್ ಮನವಿ ಮಾಡಿತ್ತು. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ಅಫ್ಘಾನಿಸ್ತಾನದಿಂದ ಭಾರತೀಯರು ಸುರಕ್ಷಿತವಾಗಿ ಮರಳಲು ನಿರಂತರವಾಗಿ ಸಹಾಯ ಮಾಡುತ್ತಿದೆ.

ಇದನ್ನೂ ಓದಿ : OMG ! ಈ ದೇಶದಲ್ಲಿ Ladies Fingerಗಳನ್ನು ಬೆಂಡೆಯಂತೆ ಕತ್ತರಿಸಿ ಸುಡುತ್ತಾರಂತೆ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ 

Trending News