ನವದೆಹಲಿ: ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟವು ಕೆರ್ರರಾ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭದ ಮೂಲಕ ಅಂತ್ಯಗೊಂಡಿದೆ.ಭಾರತವು ಮೊದಲ ಬಾರಿಗೆ ಸಾಗರೋತ್ತರ ದೇಶದಲ್ಲಿ 26 ಚಿನ್ನ,20 ಬೆಳ್ಳಿ,20 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
The Commonwealth Games Federation flag has been lowered and passed from the Mayor of the Gold Coast to the Lord Mayor of Birmingham. Our heartfelt thanks to everyone at @cityofgoldcoast and enjoy the moment @BhamCityCouncil @birminghamcg22 pic.twitter.com/S0UfIcSXhE
— Commonwealth Games Federation (@thecgf) April 15, 2018
ಈ ಸಮಾರೋಪ ಸಮಾರಂಭದಲ್ಲಿ ಮುಂದಿನ 22 ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜನೆ ಧ್ವಜವನ್ನು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ಗೆ ನೀಡಲಾಗಿದೆ. ಸಮಾರಂಭದಲ್ಲಿ ಭಾಗವಹಿಸಿದ್ದ ಬರ್ಮಿಂಗ್ ಹ್ಯಾಮ್ ನ ಮೇಯರ್ ರವರು ಗೋಲ್ಡ್ ಕೋಸ್ಟ್ ನ ಮೇಯರ್ ಮೂಲಕ ಕ್ರೀಡಾಕೂಟ ಆಯೋಜನೆಯ ಧ್ವಜವನ್ನು ಸ್ವೀಕರಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ 22 ನೇ ಕಾಮನ್ ವೆಲ್ತ್ ಕ್ರೀಡಾಕೂಟವನ್ನು 2022 ರಲ್ಲಿ ಆಯೋಜಿಸಲಿದೆ.
ಈ ಬಾರಿ ಕ್ರೀಡಾಕೂಟದ ಆಯೋಜನೆಯ ಅವಕಾಶವನ್ನು ಪಡೆದುಕೊಂಡಿದ್ದ ಆಷ್ಟ್ರೇಲಿಯಾವು ಈ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.