ನವದೆಹಲಿ : ಜೂನ್ 30 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ (PAN-Aadhaar Link) ಮಾಡುವುದು ಕಡ್ಡಾಯವಾಗಿದೆ. ನೀವು ಈವರೆಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ತಕ್ಷಣ ಕೆಲಸ ಮಾಡಿ. ಇಲ್ಲವಾದರೆ 1000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.
ಡೆಡ್ ಲೈನ್ ನೀಡಿದ ಸರ್ಕಾರ :
ಪ್ಯಾನ್ ಕಾರ್ಡ್ ಅನ್ನು ಆಧಾರ್ ಲಿಂಕ್ (PAN-Aadhaar Link) ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ ಗೆ ಲಿಂಕ್ ಮಾಡದಿದ್ದಲ್ಲಿ 1,000 ರೂ ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹಾಗಿದ್ದರೆ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಹೇಗೆ ಲಿಂಕ್ ಮಾಡುವುದು ನೋಡೋಣ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು
ಪ್ಯಾನ್ ಕಾರ್ಡ್ ಇಲ್ಲದೆ ಹಣಕಾಸು ವ್ಯವಹಾರ ಸಾಧ್ಯವಿಲ್ಲ :
ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡ ನಂತರ ಹಣಕಾಸಿನ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ. ಪ್ಯಾನ್ (PAN card) ಅಗತ್ಯವಿರುವಲ್ಲೆಲ್ಲಾ, ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಎಲ್ಲಾ ರೀತಿಯ ಬ್ಯಾಂಕಿಂಗ್ ವಹಿವಾಟುಗಳು, ಮ್ಯೂಚುಯಲ್ ಫಂಡ್, ಡಿಮ್ಯಾಟ್ ಖಾತೆ ತೆರೆಯಲು, ಹೊಸ ಬ್ಯಾಂಕ್ ಖಾತೆ (Bank account) ತೆರೆಯಲು ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಒಂದು ವೆಲೆ ಅದು ನಿಷ್ಕ್ರಿಯಗೊಂಡರೆ, ಈ ಯಾವ ಕೆಲಸಗಳೂ ಸಾಧ್ಯವಾಗುವುದಿಲ್ಲ.
PAN Card Aadhaar Card Link ಆಗಿದೆಯಾ ಎಂದು ಹೀಗೆ ಚೆಕ್ ಮಾಡಿ :
1. ಮೊದಲನೆಯದಾಗಿ ನೀವು ಆದಾಯ ತೆರಿಗೆ ಇಲಾಖೆ www.incometaxindiaefiling.gov.in ನ ಹೊಸ ವೆಬ್‌ಸೈಟ್ https://www.incometax.gov.in/iec/foportal ಗೆ ಭೇಟಿ ನೀಡಿ.
2. ಇಲ್ಲಿ ಕೆಳಗಿನ 'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ ಸ್ಟೇಟಸ್ ನೋಡಲು 'Click here' ಕ್ಲಿಕ್ ಮಾಡಿ.
4 ಈಗ ಇಲ್ಲಿ ನೀವು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
5. ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ, PAN is linked to Aadhaar Number ಎಂದು ಬರುತ್ತದೆ.
ಇದನ್ನೂ ಓದಿ : LPG Subsidy: ನಿಮ್ಮ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿ ಬರುತ್ತಿದೆಯೋ ಇಲ್ಲವೋ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಶೀಲಿಸಿ
ನಿಮ್ಮ ಆಧಾರ್ ಕಾರ್ಡ್ (Aadhaar card) ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನೀವು ಈ https://www.incometaxindiaefiling.gov.in/home. ಅನ್ನು ಕ್ಲಿಕ್ ಮಾಡಿ..
1. ಈಗ ನೀವು Link Aadhaar ಮೇಲೆ ಕ್ಲಿಕ್ ಮಾಡಿ.
2. ಈಗ ನಿಮ್ಮ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
3. ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗುತ್ತದೆ.
ಎಸ್ ಎಂಎಸ್ ಮೂಲಕವೂ ಲಿಂಕ್ ಮಾಡಬಹುದು :
SMS ಸೇವೆಯನ್ನು ಬಳಸಲು, 567678 ಅಥವಾ 56161 ಗೆ ಸಂದೇಶ ಕಳುಹಿಸುವ ಮೂಲಕ ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬಹುದು.
ಇದನ್ನೂ ಓದಿ : Contingency Fund: ಜೀವನದಲ್ಲಿ ಎದುರಾಗುವ ತುರ್ತು ಅಗತ್ಯತೆಗಳಿಗೆ ಇಂದಿನಿಂದಲೇ ಈ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.