ನವದೆಹಲಿ : Very Severe Cyclonic Storm Yaas : ಅತ್ಯಂತ ಅಪಾಯಕಾರಿ ಚಂಡಮಾರುತ ಯಾಸ್ (Yaas Cyclone) ಒಡಿಶಾದ ಬಾಲಸೋರ್ ಕರಾವಳಿಯನ್ನು ಅಪ್ಪಳಿಸುತ್ತಿದೆ. ಇದು ಕೆಲವೇ ಗಂಟೆಗಳಲ್ಲಿ ಚಂಡಮಾರುತ ಒಡಿಶಾ (Odisha) ಪ್ರವೇಶಿಸಲಿದೆ. ಇದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಯಾಸ್ ಬಾಲಸೋರ್‌ನ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿತ್ತು.
ಇದರೊಂದಿಗೆ ಒಡಿಶಾ (Odisha) ಮತ್ತು ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳದ (west Bengal) ಪೂರ್ವ ಮಿಡ್ನಾಪೋರ್ ಜಿಲ್ಲೆಯ ನ್ಯೂ ದಿಘಾ ಸೀ ಬಿಚ್ ಬಳಿಯ ವಸತಿ ಪ್ರದೇಶಗಳಿಗೆ ಸಮುದ್ರದ ನೀರು (water) ನುಗ್ಗಿರುವ ಬಗ್ಗೆಯೂ ವರದಿಯಾಗಿದೆ.
#WATCH | West Bengal: Water from the sea enters residential areas along New Digha Sea Beach in East Midnapore.
Very Severe Cyclonic Storm Yaas centred about 50 km South-Southeast of Balasore (Odisha). Landfall process has commenced around 9 am, says IMD. #CycloneYaas pic.twitter.com/8m667Py8Ec
— ANI (@ANI) May 26, 2021
ಇದನ್ನೂ ಓದಿ : Extremely Heavy Rain : ಯಾಸ್ ಸೈಕ್ಲೋನ್ ಪರಿಣಾಮ ಭಾರೀ ಬಿರುಗಾಳಿ ಜೊತೆ ಭಾರೀ ಮಳೆ!
ಒಡಿಶಾ ಮತ್ತು ಬಂಗಾಳದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಭಾರೀ ಗಾಳಿ (Heavy rain) , ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಯಾಸ್ ಕಾರಣ ಕೋಲ್ಕತಾ (Kolkatta) ನಗರದಲ್ಲಿಯೂ ಭಾರೀ ವರ್ಷಧಾರೆಯಾಗುತ್ತಿದೆ. ಇಲ್ಲಿಯೂ ಭಾರೀ ಗಾಳಿ ಮಳೆಯ ಬಗ್ಗೆ ವರದಿಯಾಗಿದೆ.
ಮತ್ತೊಂದೆಡೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ (NDRF) ತಂಡಗಳನ್ನು ನಿಯೋಜಿಸಲಾಗಿದೆ. ಭಾರತೀಯ ನೌಕಾಪಡೆಯು (Navy) ಸಮುದ್ರ ತೀರದಲ್ಲಿ ಎಲ್ಲಾ ಸಿದ್ದತೆಗಳೊಂದಿಗೆ ಬೀಡುಬಿಟ್ಟಿದೆ. ನೌಕಾ ಹಡಗು ಐಎನ್‌ಎಸ್ ಚಿಲ್ಕಾ ವಿಶಾಖಪಟ್ಟಣಂ ಕರಾವಳಿಯಲ್ಲಿ ಪರಿಹಾರ ಸಾಮಗ್ರಿಗಳೊಂದಿಗೆ ತಯಾರಾಗಿದೆ.
ಇದನ್ನೂ ಓದಿ : Cyclone Yaas : 90 ರೈಲುಗಳನ್ನು ರದ್ದು ಮಾಡಿದ Indian Railway, ವಿಮಾನ ಸೇವೆಯ ಮೇಲೆಯೂ ಪ್ರಭಾವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.