Cyclone Alert: ಉತ್ತರ ಕರಾವಳಿ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಇಂದು ಗುಡುಗು-ಮಿಂಚಿನಿಂದ ಕೂಡಿದಂತೆ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Remal Cyclone : ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ.
Cyclone Remal Effect: ಭಾರತದಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ರೆಮಲ್ ಚಂಡಮಾರುತ ನೆರೆಯ ಬಾಂಗ್ಲಾದೇಶದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರೆಮಲ್ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ ಹತ್ತು ಜನರು ಮೃತಪಟ್ಟಿದ್ದರೆ, ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ. ಚೆನ್ನೈ ಏರ್ಪೋರ್ಟ್ನಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ವ್ಯವಸ್ಥೆ. ವಿಮಾನ ನಿಲ್ದಾಣದಲ್ಲೇ ನೂರಾರು ಪ್ರಯಾಣಿಕರಿಗೆ ಸಕಲ ವ್ಯವಸ್ಥೆ.ಊಟ-ತಿಂಡಿ, ಕುಡಿಯುವ ನೀರು ಸೇರಿ ವ್ಯವಸ್ಥೆ ಕಲ್ಪಿಸಿದ ಸರ್ಕಾರ.
ಚಂಡ ಮಾರುತ ಎಫೆಕ್ಟ್.. ಧರೆಗುರುಳಿದ ತೆಂಗಿನ ಮರ
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಜನರು
ದೊಡ್ಡಬಳ್ಳಾಪುರದ ತಾ. ಬೈರಾಪುರ ತಾಂಡಾದಲ್ಲಿ ಘಟನೆ
ಮರ ಬಿದ್ದು ಮನೆ ಗೋಡೆ, ಧರೆಗುರುಳಿದೆ 4 ವಿದ್ಯುತ್ ಕಂಬಗಳು
ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಗುಡುಗಿದ ಮಿಚಾಂಗ್ ಚಂಡ ಮಾರುತ.. ಮುಳುಗಿದ ಚೆನ್ನೈ
ಊರು ಜಲಾವೃತ, ಆಶ್ರಯಕ್ಕಿಲ್ಲ ಸೂರು, ತೇಲಿ ಹೋದ ಕಾರು
ಮಿಚಾಂಗ್ ಎಫೆಕ್ಟ್, ರಾಜಧಾನಿಯಲ್ಲೂ ಮೋಡ ಕವಿದ ವಾತಾವರಣ
ಚುಮು ಚುಮು ಚಳಿಗೆ ನಡುಗಿದ ಸಿಲಿಕಾನ್ ಸಿಟಿ ಬೆಂಗಳೂರು ಮಂದಿ
ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ
ತಮಿಳುನಾಡಲ್ಲಿ ಮಿಚಾಂಗ್ ಚಂಡಮಾರುತ ಆರ್ಭಟ
ಸೈಕ್ಲೋನ್ ಮಿಚಾಂಗ್ ಅಬ್ಬರಕ್ಕೆ ಚೆನ್ನೈ ತತ್ತರ
ರೈಲು, ವಿಮಾನ ಸಂಚಾರ ಸಂಪೂರ್ಣ ಸ್ಥಗಿತ
ಕೊಚ್ಚಿ ಹೋದ್ವು ಕಾರುಗಳು.. ಜನಜೀವನ ಅಸ್ತವ್ಯಸ್ತ
ಚೆನ್ನೈನಲ್ಲಿ ವರುಣನ ಆರ್ಭಟಕ್ಕೆ 5 ಜನರು ಸಾವು
ಬಿಪರ್ಜಾಯ್ ಚಂಡಮಾರುತ 125 ಕಿ.ಮೀ ವೇಗದಲ್ಲಿ ಗುಜರಾತ್ ಕರಾವಳಿಗೆ ಅಪ್ಪಳಿಸಿದ್ದು ಮಧ್ಯರಾತ್ರಿ ನಂತರ ಇದರ ತೀವ್ರತೆ ಕಡಿಮೆಯಾಗಲಿದೆ. ಬಿಪರ್ಜೋಯ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯೆ ಕ್ರಮಗಳನ್ನು ಕೈಗೊಂಡಿದೆ.
Biparjoy cyclonic storm: ಚಂಡಮಾರುತವು 'ತೀವ್ರ ಸೈಕ್ಲೋನಿಕ್ ಚಂಡಮಾರುತ'ವಾಗಿ ಬದಲಾಗಿದೆ. ಜೂನ್ 15 ರಂದು ಗುಜರಾತ್ ನ ಕಚ್ ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Biporjoy Cyclone:IMD ಪ್ರಕಾರ, ಬಿಪರ್ ಜಾಯ್ ಚಂಡಮಾರುತ ಮುಂದಿನ 36 ಗಂಟೆಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಗುಜರಾತ್, ಸೌರಾಷ್ಟ್ರ, ಉತ್ತರ ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿಯೂ ಇದರ ಪರಿಣಾಮ ಕಂಡು ಬರಲಿದೆ.
IMD Warning :ಚಂಡಮಾರುತದ ಹಿನ್ನೆಲೆಯಲ್ಲಿ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಜೂನ್ 8 ರಿಂದ 10 ರವರೆಗೆ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರು ಮರಳುವಂತೆ ಸೂಚಿಸಲಾಗಿದೆ.
Cyclone Mocha News: ಈ ಚಂಡಮಾರುತವು 2023 ರ ಮೊದಲ ಚಂಡಮಾರುತವಾಗಿದೆ. ಚಂಡಮಾರುತಕ್ಕೆ 'ಮೋಚಾ' ಎಂದು ಹೆಸರಿಡಲಾಗಿದೆ. ಕೆಂಪು ಸಮುದ್ರದ ತೀರದಲ್ಲಿರುವ ತನ್ನ ಬಂದರು ನಗರಗಳಲ್ಲಿ ಒಂದಾದ 'ಮೋಚಾ' ಹೆಸರನ್ನು ಯೆಮೆನ್ ಈ ಚಂಡಮಾರುತಕ್ಕೆ ಸೂಚಿಸಿದೆ.
ಮಾಂಡೌಸ್ ಚಂಡಮಾರುತದ ಹೊಡೆತ ತುಮಕೂರು ಜಿಲ್ಲೆಯಲ್ಲಿ ತುಸು ಹೆಚ್ಚಾಗಿಯೇ ಬಿದ್ದಿದೆ. ಅತಿಯಾದ ಶೀತದಿಂದ ಜನರು ಜ್ವರ, ನೆಗಡಿ, ಕೆಮ್ಮಿನಿಂದ ಆಸ್ಪತ್ರೆ ಸೇರುತ್ತಿರೋದು ಒಂದು ಕಡೆಯಾದರೆ, ರೈತರ ಬೆಳೆಗಳು ಹಾನಿಯಾಗಿರೋದು ಇನ್ನೊಂದು ಕಡೆ. ಚಂಡಮಾರುತದಿಂದ ಉಂಟಾದ ಮಳೆಯಿಂದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿದೆ.
Cyclone Mandous Effect: ‘ಮಂಡೌಸ್’ ಚಂಡಮಾರುತವು ಭಾರತಕ್ಕೆ ಪ್ರವೇಶಿಸಿದೆ. ಇದರಿಂದಾಗಿ ಕರಾವಳಿ ಭಾಗದಲ್ಲಿ ಭಾರೀ ಮಳೆ ಆರಂಭವಾಗಿದೆ. ಈ ಕುರಿತು ಹವಾಮಾನ ಇಲಾಖೆ ಮಹತ್ವದ ಮಾಹಿತಿ ನೀಡಿದೆ.
Weather Reports: ಹವಾಮಾನ ಇಲಾಖೆ ಪ್ರಕಾರ, ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಮತ್ತು ಗರಿಷ್ಠ ತಾಪಮಾನ 25 ಡಿಗ್ರಿ ಇರಲಿದೆ. ಬೆಳಿಗ್ಗೆ ದೆಹಲಿಯಲ್ಲಿ ಲಘು ಮಂಜು ಆಗಿದ್ದು, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶವು ರಾಷ್ಟ್ರೀಯ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಕಳಪೆ ವರ್ಗದಲ್ಲಿ ಉಳಿದಿದೆ ಎಂದು ತೋರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.