ಕೇರಳದ 'ಜನ ರಕ್ಷಾ ಯಾತ್ರಾ'ಗೆ ಉ.ಪ್ರ ಸಿಎಂ ಯೋಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಷಾರ ಮೊದಲ ಆಯ್ಕೆ

ಕೇರಳದಲ್ಲಿ ಅಮಿತ್ ಶಾ ಮೂರು ದಿನಗಳ 'ಜನ ರಕ್ಷಾ ಯಾತ್ರೆ' ಕೈಗೊಂಡಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಬುಧವಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Last Updated : Oct 4, 2017, 01:26 PM IST
ಕೇರಳದ 'ಜನ ರಕ್ಷಾ ಯಾತ್ರಾ'ಗೆ ಉ.ಪ್ರ ಸಿಎಂ ಯೋಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಷಾರ   ಮೊದಲ ಆಯ್ಕೆ title=

ಕಣ್ಣೂರ್: ಕೇರಳದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಿಪಿಎಂ ಸರ್ಕಾರ ರಾಜ್ಯದಲ್ಲಿ 'ಹತ್ಯೆ ರಾಜಕೀಯ' ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೈಗೊಂಡಿರುವ ಮೂರು 'ಜನ ರಕ್ಷಾ ಯಾತ್ರೆ'ಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ. 
ಈ ಯಾತ್ರೆಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿಯೇ, ಷಾ ರ ಮೊದಲ ಆಯ್ಕೆಯಾಗಿದ್ದಾರೆ.

ಕೇರಳದ ಆಡಳಿತಾತ್ಮಕ ಎಡಪಕ್ಷವನ್ನು ಸವಾಲು ಮಾಡಲು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು 'ಜನ ರಕ್ಷಾ ಯಾತ್ರ' ಆರಂಭಿಸಿದ್ದಾರೆ. ಪ್ರವಾಸದ ಎರಡನೇ ದಿನವಾದ ಇಂದು ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂಟು ಕಿ.ಮೀ. ಪಾದಯಾತ್ರೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, "ಈ ಭೇಟಿ ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಸರ್ಕಾರಗಳಿಗೆ ಕನ್ನಡಿಯಾಗಿದೆ ಎಂದು ತಿಳಿಸಿದರು. ಈ ಸರ್ಕಾರಗಳು ನಡೆಸುತ್ತಿರುವ ರಾಜಕೀಯ ಹತ್ಯೆಗಳನ್ನು ನಿಲ್ಲಿಸಬೇಕು. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಳವಿಲ್ಲ, ಆದರೆ ರಾಜಕೀಯ ಹತ್ಯೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿದೆ." ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಈ ಯಾತ್ರೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರುಗಳು ಭಾಗಿಯಾಗಲಿದ್ದಾರೆ. ಆದರೆ ಈ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷರು ಸಿಎಂ ಯೋಗಿಯನ್ನೇ ಏಕೆ ಮೊದಲ ಆಯ್ಕೆ ಮಾಡಿದ್ದಾರೆ? ವಾಸ್ತವವಾಗಿ, ಇತರ ರಾಜ್ಯಗಳಲ್ಲಿ ಸಿಎಂ ಯೋಗಿಯ ಆಕ್ರಮಣಕಾರಿ ಚಿತ್ರಣವನ್ನು ವಶಪಡಿಸಿಕೊಳ್ಳಲು ಪಕ್ಷ ಸಿದ್ದತೆ ನಡೆಸುತ್ತಿದೆ, ಎಂದು ಇದರ ಹಿಂದಿನ ಕಾರಣವನ್ನು ಭಾವಿಸಲಾಗುತ್ತಿದೆ.

ಏತನ್ಮಧ್ಯೆ, ಕೇರಳದ ಬಿಜೆಪಿ ಕಾರ್ಯಕರ್ತರಿಗೆ ಯೊಗಿ ಆದಿತ್ಯನಾಥ್ ಬಗ್ಗೆ ಮೊದಲಿನಿಂದಲೂ ಮೆಚ್ಚುಗೆ ಇದೇ. ಅವರು ಕೇರಳ ಸಂಸ್ಥೆಯ ಕಾರ್ಮಿಕರ ಮೊದಲ ಆಯ್ಕೆಯಾಗಿದ್ದರು. ಕೇರಳದಲ್ಲಿ ಪಕ್ಷದ ಜನರು ಹೋರಾಡುತ್ತಿರುವ ವಿಷಯಗಳು, ಈ ಹಿಂದಿನ ಸಮಸ್ಯೆಗಳನ್ನು ಯೋಗಿ ಆದಿತ್ಯನಾಥ್ ಯೋಗಿ ಆದಿತ್ಯನಾಥ್ ಅರ್ಥಮಾಡಿಕೊಂಡಿದ್ದಾರೆಂಬುದು ಮತ್ತೊಂದು ಗಮನಿಸಬೇಕಾದ ಅಂಶವಾಗಿದೆ. ಹಿಂದುತ್ವದ ಮುಖದಂತೆಯೇ, ಅವರು ಕೇರಳದ ಬಿಜೆಪಿ ಬೆಂಬಲಿಗರು ಮತ್ತು ಕಾರ್ಮಿಕರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ.

 

Trending News