Karnataka Govt : ಚಾಮರಾಜನಗರ ಆಕ್ಸಿಜನ್ ದುರಂತ : ಸರ್ಕಾರದಿಂದ ಸಂತ್ರಸ್ತರಿಗೆ ₹ 2 ಲಕ್ಷ ಪರಿಹಾರ! 

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತುರ್ತಾಗಿ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕೆಂದು ದೇಶಿಸಿತು. ನಂತರ ಪರಿಹಾರ ಮೊತ್ತದ ವಿಚಾರಣೆ ಮಾಡುವುದಾಗಿ ಸೂಚಿಸಿತ್ತು.

Last Updated : May 22, 2021, 02:49 PM IST
  • ಚಾಮರಾಜನಗರ ಆಕ್ಸಿಜನ್ ದುರಂತ
  • 4 ಸೋಂಕಿತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹ 2 ಲಕ್ಷ ಪರಿಹಾರ
  • ಕಳೆದ ತಿಂಗಳು ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಸಾವನ್ನಪ್ಪಿದರು
Karnataka Govt : ಚಾಮರಾಜನಗರ ಆಕ್ಸಿಜನ್ ದುರಂತ : ಸರ್ಕಾರದಿಂದ ಸಂತ್ರಸ್ತರಿಗೆ ₹ 2 ಲಕ್ಷ ಪರಿಹಾರ!  title=

ಬೆಂಗಳೂರು : ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ 24 ಕೊರೋನಾ ಸೋಂಕಿತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದೆ.

ಕಳೆದ ತಿಂಗಳು ಆಕ್ಸಿಜನ್ ಕೊರತೆ(Oxygen Shortage)ಯಿಂದ 24 ಸೋಂಕಿತರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತುರ್ತಾಗಿ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕೆಂದು ದೇಶಿಸಿತು. ನಂತರ ಪರಿಹಾರ ಮೊತ್ತದ ವಿಚಾರಣೆ ಮಾಡುವುದಾಗಿ ಸೂಚಿಸಿತ್ತು.

ಇದನ್ನೂ ಓದಿ : Sadananda Gowda : ಬ್ಲಾಕ್ ಫಂಗಸ್ ಸೋಂಕಿಗೆ ರಾಜ್ಯಕ್ಕೆ 1,600 ಬಾಟಲಿ ಔಷಧಿ..!

ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ(Karnataka Govt) ಇಂದು ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಹಣ ಬಿಡುಗಡೆಗೆ ಆದೇಶಿಸಿದೆ.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಮೇ 25 ರವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ

ರಾಜ್ಯ ಸರ್ಕಾರ ಆರಂಭದಲ್ಲಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದಾಗ ಸಾವಿನ ಸಂಖ್ಯೆ 28 ಆಗಿದೆ ಎಂದು ಆರೋಪಿಸಿದರು. ಆದರೆ ತನಿಖಾ ಸಮಿತಿ 36 ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೈಕೋರ್ಟ್ ಗೆ ವರದಿ ನೀಡಿತ್ತು.

ಇದನ್ನೂ ಓದಿ : One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News