COVID-19 : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.62 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ..!

ನಿನ್ನೆ ಒಂದೇ ದಿನ ದೇಶದಲ್ಲಿ 4,205 ಕೋವಿಡ್-19 ಸಾವು

Last Updated : May 13, 2021, 10:13 AM IST
  • ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಇಳಿಕೆ
  • ನಿನ್ನೆ ಒಂದೇ ದಿನ ದೇಶದಲ್ಲಿ 4,205 ಕೋವಿಡ್-19 ಸಾವು
  • ಕಳೆದ 24 ಗಂಟೆಗಳಲ್ಲಿ 3,52,181 ಚೇತರಿಕೆಗಳು ದಾಖಲಾದ ಹಿನ್ನೆಲೆ
COVID-19 : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.62 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ..! title=

ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಇಳಿಕೆಯಾಗುತ್ತಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 4,205 ಕೋವಿಡ್-19 ಸಾವುಗಳನ್ನು ದಾಖಲಿಸಿದ ಒಂದು ದಿನದ ನಂತರ, 2020 ರಲ್ಲಿ ದೇಶದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಅತೀ ಹೆಚ್ಚು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,120 ಸಾವುಗಳು ವರದಿಯಾಗಿವೆ.

ಸಾವನ್ನಪ್ಪಿದವರ ಒಟ್ಟು ಸಂಖ್ಯೆ 2,58,317 ಕ್ಕೆ ಏರಿದೆ. ಇನ್ನು ದೇಶದಲ್ಲಿ 3,62,727 ಹೊಸ ಪ್ರಕರಣ(New Covid-19 Case)ಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 37,10525 ಕ್ಕೆ ಏರಿಕೆ ಮಾಡಿದೆ.

ಇದನ್ನೂ ಓದಿ : Corona ಸಾಂಕ್ರಾಮಿಕದ ಮಧ್ಯೆ ಗುಜರಾತ್‌ನಲ್ಲಿ ಚಂಡಮಾರುತದ ಅಪಾಯ, ಭಾರಿ ವಿನಾಶದ ಬೆದರಿಕೆ

ಕಳೆದ 24 ಗಂಟೆಗಳಲ್ಲಿ 3,52,181 ಚೇತರಿಕೆಗಳು ದಾಖಲಾದ ಹಿನ್ನೆಲೆಯಲ್ಲಿ, ಚೇತರಿಸಿಕೊಂಡ ಒಟ್ಟು ಕೋವಿಡ್-19(Covid-19) ಸೋಂಕಿತರ ಸಂಖ್ಯೆ 23,703,665ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ಮಾಡಿದೆ.

ಇದನ್ನೂ ಓದಿ : ಏಪ್ರಿಲ್‌ನಲ್ಲಿ ಶೇ 4.29 ಕ್ಕೆ ಇಳಿದ ಚಿಲ್ಲರೆ ಹಣದುಬ್ಬರ

ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಕೆಟ್ಟ ಪರಸ್ಥಿತಿ ಎದುರಿಸುತ್ತಿದೆ, ಪ್ರಕರಣಗಳು, ಸಾವುಗಳ ಸಂಖ್ಯೆಯಲ್ಲಿ ಅತೀ ಹೆಚ್ಚು ಏರಿಕೆಯಾಗಿದೆ. ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿಂದ ಉಲ್ಬಣಗೊಂಡಿದೆ. ದೈನಂದಿನ ಚೇತರಿಕೆಗಳು ದೈನಂದಿನ ಪ್ರಕರಣಗಳನ್ನು ಮೀರಿ ಏರಿಕೆಯಾಗಿರುವುದು ಸಂತಸದ ವಿಷಯವಾಗಿದೆ.

ಇದನ್ನೂ ಓದಿ : COVID-19 pandemic: ಪ್ರಧಾನಿ ಮೋದಿಗೆ ಜಂಟಿ ಪತ್ರ ಬರೆದ 12 ಪ್ರತಿಪಕ್ಷದ ನಾಯಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News