ಕಲ್ಲಂಗಡಿ ಹಣ್ಣಿನಲ್ಲಿ ಶೇ. 92 ರಷ್ಟು ನೀರಿರುತ್ತದೆ. ಹಾಗಾಗಿ ಅದು ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ಸಿ ಕೂಡಾ ಸಮೃದ್ಧವಾಗಿರುತ್ತದೆ. ಗೊತ್ತೆ ಇದೆ.
ನವದೆಹಲಿ : ಇದು ಹೇಳಿಕೇಳಿ ಬೇಸಿಗೆ. ಬಿಸಿಲ ಝಳದ ಹೊತ್ತಿಗೆ ಕಲ್ಲಂಗಡಿ ಹಣ್ಣು (Watermelon) ಸಿಕ್ಕಿಬಿಟ್ಟರೆ ಪೇರಿಸಿ ತಿಂದು ಬಿಡುತ್ತೇವೆ. ಸಿಹಿ ಸಿಹಿ ಕಲ್ಲಂಗಡಿ ಸಿಕ್ಕಿ ಬಿಟ್ಟರಂತೂ ನಮ್ಮದು ಬಕಾಸುರನ ಹೊಟ್ಟೆಯಾಗಿ ಬಿಡುತ್ತದೆ. ಕಲ್ಲಂಗಡಿ ಪೇರಿಸಿ ತಿನ್ನುವ ಮೊದಲು ಸ್ವಲ್ಪ ಯೋಚನೆ ಮಾಡಿ. ಕಲ್ಲಂಗಡಿ ಎಲ್ಲರಿಗೂ ಒಳ್ಳೆಯದಲ್ಲ. ಅತಿಯಾಗಿ ಸ್ವಾಹಾ ಮಾಡಿಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಕಲ್ಲಂಗಡಿ ಹಣ್ಣಿನ ಬಗ್ಗೆ ಒಂದಷ್ಟು ಮಹತ್ವ ಪೂರ್ಣ ವಿಚಾರ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕಲ್ಲಂಗಡಿ ಹಣ್ಣಿನಲ್ಲಿ ಶೇ. 92 ರಷ್ಟು ನೀರಿರುತ್ತದೆ. ಹಾಗಾಗಿ ಅದು ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ಸಿ ಕೂಡಾ ಸಮೃದ್ಧವಾಗಿರುತ್ತದೆ. ಗೊತ್ತೆ ಇದೆ. ವಿಟಮಿನ್ ಸಿ ಇಮ್ಯೂನಿಟಿ ಬೂಸ್ಟರ್.
ಕಲ್ಲಂಗಡಿ ತಿಂದರೆ ತೂಕ ಕರಗುತ್ತದೆ. ಹೃದಯಕ್ಕೆ, ಕಿಡ್ನಿಯ ಆರೋಗ್ಯಕ್ಕೆ ಹಿತಕಾರಿ. ಚರ್ಮದ ಹೊಳಪಿಗೆ ಕಾರಣವಾಗುತ್ತದೆ. ಕಲ್ಲಂಗಡಿ ಅನೇಕ ವಿಚಾರಗಳಲ್ಲಿ ಹೆಲ್ತಿ.
ಕಲ್ಲಂಗಡಿಯಲ್ಲಿ ಲೈಕೋಪಿನ್ ಪೋಷಕಾಂಶ ಇದೆ. ಶೇಕಡಾ 92 ರಷ್ಟು, ಶೇ. 6 ರಷ್ಟು ಸಕ್ಕರೆ ಪ್ರಮಾಣದಲ್ಲಿರುತ್ತದೆ. ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಬೀಟಾ ಕೆರಾಟಿನ್ ಇದ್ದು, ಇದು ಹೃದಯದ ಆರೋಗ್ಯಕ್ಕೆ ಹಿತಕಾರಿ. ಇದರಲ್ಲಿ ಅಂಟಿ ಆಕ್ಸಿಡೆಂಟ್ ಕೂಡಾ ಸಾಕಷ್ಟು ಪ್ರಮಾಣದಲ್ಲಿರುತ್ತದೆ.
ಕಲ್ಲಂಗಡಿಯಲ್ಲಿ ಪ್ರಾಕೃತಿಕ ಸಕ್ಕರೆ ಅಂಶ ಚೆನ್ನಾಗಿರುತ್ತದೆ. ಮಧುಮೇಹಿಗಳು ಕಲ್ಲಂಗಡಿ ತಿಂದರೆ ಬ್ಲಡ್ ಶುಗರ್ ಮಟ್ಟ ಏರುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಗ್ಲೈಸೊಮಿಕ್ ಇಂಡೆಕ್ಸ್ ಅಧಿಕವಾಗಿರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಕಲ್ಲಂಗಡಿ ತರವಲ್ಲ.
ಕಲ್ಲಂಗಡಿಯಲ್ಲಿ ಪ್ರಾಕೃತಿಕ ಸಕ್ಕರೆ ಅಂಶ ಚೆನ್ನಾಗಿರುತ್ತದೆ. ಮಧುಮೇಹಿಗಳು ಕಲ್ಲಂಗಡಿ ತಿಂದರೆ ಬ್ಲಡ್ ಶುಗರ್ ಮಟ್ಟ ಏರುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಗ್ಲೈಸೊಮಿಕ್ ಇಂಡೆಕ್ಸ್ ಅಧಿಕವಾಗಿರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಕಲ್ಲಂಗಡಿ ತರವಲ್ಲ. ಕಲ್ಲಂಗಡಿಯಲ್ಲಿ ಪ್ರಾಕೃತಿಕ ಸಕ್ಕರೆ ಅಂಶ ಚೆನ್ನಾಗಿರುತ್ತದೆ. ಮಧುಮೇಹಿಗಳು ಕಲ್ಲಂಗಡಿ ತಿಂದರೆ ಬ್ಲಡ್ ಶುಗರ್ ಮಟ್ಟ ಏರುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಗ್ಲೈಸೊಮಿಕ್ ಇಂಡೆಕ್ಸ್ ಅಧಿಕವಾಗಿರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಕಲ್ಲಂಗಡಿ ತರವಲ್ಲ. ಕಲ್ಲಂಗಡಿಯಲ್ಲಿ ಡಯಟರಿ ಫೈಬರ್ ಇದೆ. ಹಾಗಾಗಿ, ಸಿಕ್ಕಾಪಟ್ಟೆ ತಿಂದರೆ ಹೊಟ್ಟೆ ನೋವು ಕಾಣಿಸಬಹುದು. ಕಲ್ಲಂಗಡಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚು. ಹಾಗಾಗಿ ಹೆಚ್ಚು ತಿಂದರೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗಬಹುದು. ಆಗ ದೇಹದಲ್ಲಿ ಸೋಡಿಯಂ ಲೆವೆಲ್ ಕಡಿಮೆಯಾಗುತ್ತದೆ. ಇದರಿಂದ ತಲೆ ತಿರುಗುತ್ತದೆ. ಕಲ್ಲಂಗಡಿ ಹೆಚ್ಚಿಗೆ ತಿಂದರೆ ಗ್ಯಾಸ್, ಹೊಟ್ಟೆ ಉಬ್ಬರಿಸಬಹುದು.