ನವದೆಹಲಿ : ಲೆಮನ್ ಟೀ (Lemon Tea)ಬಗ್ಗೆ ನಿಮಗೆ ಗೊತ್ತಿರಬಹುದು. ಬಿರುಬೇಸಿಗೆಯಲ್ಲಿ ಚಹಾ/ಕಾಫಿ ರುಚಿಸುವುದಿಲ್ಲ. ಬದಲಿಗೆ ಕೋಲ್ಡ್ ಕಾಫಿ, ಲಸ್ಸಿ, ಮೊಸರು (Curd), ಮಜ್ಜಿಗೆ ತುಂಬಾ ಇಷ್ಟವಾಗುತ್ತದೆ. ಬೇಸಿಗೆಯಲ್ಲಿ ಲೆಮನ್ ಟೀ ಕುಡಿಯುವುದು ಕೂಡಾ ಆರೋಗ್ಯದ ದೃಷ್ಟಿಯಿಂದ ತುಂಬಾ ಉಪಯುಕ್ತ. ಲೆಮನ್ ಟೀ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಬೇಸಿಗೆಗೆ ಇದು ಅತ್ಯಂತ ಉಪಯುಕ್ತ.
ಹೌದು, ಬೇಸಿಗೆಯಲ್ಲಿ ಹಾಲಿನ ಚಹಾದ ಬದಲು ನಿಂಬೆ ಚಹಾವನ್ನು (Lemon Tea) ಕುಡಿಯಲು ಪ್ರಾರಂಭಿಸಿದರೆ, ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ನಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದಲ್ಲದೆ, ನಿಂಬೆಯಲ್ಲಿ ಪೊಟ್ಯಾಸಿಯಮ್ ಕೂಡಾ ಇದೆ. ಇದು ರಕ್ತದೊತ್ತಡ (Blood Pressure) ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ಲೆಮನ್ ಟೀ ಮಾಡೋದು ತುಂಬಾ ಸುಲಭ
ಇದನ್ನೂ ಓದಿ : Lady Finger Benefits: ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಬೆಂಡೆಕಾಯಿ..!
1. ಬೊಜ್ಜು ನಿವಾರಕ
ಗ್ರೀನ್ ಟೀ (Green tea) ರೀತಿಯಲ್ಲೇ ಲೆಮನ್ ಟೀ ಕೂಡಾ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಉದ್ದೇಶದಿಂದ ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು (Lime juice) ಕುಡಿಯುವುದನ್ನು ನೀವು ನೋಡಿರಬೇಕು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮಾನ್ಯ ಚಹಾದ ಬದಲು ನಿಂಬೆ ಚಹಾವನ್ನು ಕುಡಿಯಲು ಪ್ರಾರಂಭಿಸಿದರೆ, ಅದರಿಂದ ತೂಕ ಇಳಿಯುತ್ತದೆ (Weight loss).ಇದಕ್ಕೆ ಕಾರಣವೆಂದರೆ ನಿಂಬೆಯಲ್ಲಿ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. , ಹಾಗೆಯೇ ನಿಂಬೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಡಿಟಾಕ್ಸಿಫಿಕೇಶನ್ ಗೆ ಸಹಕಾರಿ
ಡಿಟಾಕ್ಸಿಫಿಕೇಶನ್ ಅಂದರೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗೆ ಹಾಕುವಂತಹ ಪ್ರಕ್ರಿಯೆ. ಲಿಂಬೆಯಲ್ಲಿ ಸಿಟ್ರಿಸ್ ಆಸಿಡ್ (Citrus acid) ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಸೇವಿಸುವುದರಿಂದ ದೇಹದಲ್ಲಿರುವ ಟಾಕ್ಸಕ್ ಅಂಶ ಹೊರಗೆ ಹೋಗುತ್ತದೆ. ದೇಹ ಶುದ್ದವಾಗುತ್ತದೆ.
3. ಬಿಪಿ ಇರುವವರಿಗೆ ಉಪಯುಕ್ತ
ರಕ್ತದೊತ್ತಡ (Blood Pressure) ನಿಯಂತ್ರಣಕ್ಕೆ ನಿಂಬೆ ಚಹಾ ಸಹಕಾರಿಯಾಗಿದೆ, ಆದ್ದರಿಂದ ಬಿಪಿ ರೋಗಿಗಳು ಹಾಲಿನ ಚಹಾದ ಬದಲು ನಿಂಬೆ ಚಹಾವನ್ನು ಕುಡಿಯಬೇಕು. ಇದಕ್ಕೆ ಕಾರಣವೆಂದರೆ ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇದೆ. ಇದು ರಕ್ತನಾಳಗಳನ್ನು ಶಾಂತವಾಗಿಡುತ್ತದೆ. ಇದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.
4. ಇಮ್ಯೂನಿಟಿ ಬಲಪಡಿಸುತ್ತದೆ.
ವಿಟಮಿನ್ ಸಿ ಸಮೃದ್ಧ ನಿಂಬೆ ಚಹಾ ರೋಗನಿರೋಧಕ (Immunity) ಶಕ್ತಿಯನ್ನು ಬಲಪಡಿಸುತ್ತದೆ. ಇದು ಸಾಮಾನ್ಯ ಶೀತ (Cold) ಮತ್ತು ಜ್ವರ (Fever) ಉಪಶಮನಕಾರಿ. ನೀವು ನಿಂಬೆ ಚಹಾಕ್ಕೆ ಸ್ವಲ್ಪ ಶುಂಠಿಯನ್ನು (Ginger) ಸಹ ಸೇರಿಸಬಹುದು. ಇದು ಚಹಾದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Summer Food: ಪುರುಷರೇ ಬೇಸಿಗೆಯಲ್ಲಿ ತಪ್ಪದೆ ಸೇವಿಸಿ ಈ ಒಣ ಹಣ್ಣು; ಪಡೆಯಿರಿ ಅದ್ಭುತ ಪ್ರಯೋಜನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.